ಸಂವಿಧಾನ ಉಲ್ಲಂಘಿಸಿದವರು ದೇಶದ ಕ್ಷಮೆ ಕೇಳಲಿ: ಸಿವಿಸಿ

Get real time updates directly on you device, subscribe now.

ಕೊಪ್ಪಳ: ನೆರೆ ರಾಷ್ಟ್ರಗಳಲ್ಲಿ ದಂಗೆಗಳಿಂದಾಗಿ ಆಡಳಿತ ವ್ಯವಸ್ಥೆ ಕುಸಿತದರೂ ಭಾರತದಲ್ಲಿ ಆಡಳಿತ ವ್ಯವಸ್ಥೆ ಸುಭದ್ರವಾಗಿರುವುದಕ್ಕೆ ಕಾರಣ ಡಾ. ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದ ತಜ್ಞರು ಕೊಟ್ಟ ಸಂವಿಧಾನ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.

JDS State Core Committee Member C.V. Chandrashekhar

ಜೆಡಿಎಸ್ ಪಕ್ಷದ ಜಿಲ್ಲಾ ಕಛೇರಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು.

“ಇಡೀ ವಿಶ್ವದಲ್ಲಿಯೇ ಅತ್ಯಂತ ಸದೃಢ ಸಂವಿಧಾನ ಹೊಂದಿದ ಏಕೈಕ ರಾಷ್ಟ್ರ ಭಾರತ. ಅಧ್ಯಕ್ಷೀಯ ಮಾದರಿಯ ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಥಿಲಗಳು ಕಂಡುಬರುತ್ತವೆ.
ಸದೃಢ ಸಂವಿಧಾನರಹಿತ ನೆರೆಯ ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ದೇಶಗಳಲ್ಲಿ ಸ್ಥಿತ್ಯಂತರಗಳಾಗಿವೆ. ಜಾಗತಿಕಗಳ ತಲ್ಲಣಗಳ ನಡುವೆಯೂ ಭಾರತ ದೇಶ ಸುಭದ್ರವಾಗಿ ಇರಲು ಮುಖ್ಯ ಕಾರಣ ನಾವು ಅಳವಡಿಸಿಕೊಂಡಿರುವ ಸಂವಿಧಾನ. ಇದು ವಿಶ್ವಕ್ಕೆ ಮಾದರಿ,” ಎಂದರು.
ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿ ಹಾಗೂ ಸಂವಿಧಾನದ 356 ನೇ ವಿಧಿಯನ್ನು 90 ಕ್ಕಿಂತಲೂ ಹೆಚ್ಚು ಸಲ ದುರ್ಬಳಕೆ  ಮಾಡಿಕೊಂಡು ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಸಂವಿಧಾನದ ಮೇಲೆ ಸವಾರಿ ನಡೆಸಿದೆ. ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಪ್ರಮಾದಕ್ಕಾಗಿ ಈಗಲಾದರೂ ದೇಶದ ಕ್ಷಮೆ ಕೇಳಬೇಕು.
ತಮ್ಮನ್ನು ಚುನಾಯಿಸಿದ ಜನರ ಬೇಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕೊಪ್ಪಳವನ್ನು ಖಾಸಗಿ ಕಾರ್ಖಾನೆಗಳ ಮಾಲೀಕರ ಕೈಗೆ ನೀಡಿದ ಕಾಂಗ್ರೆಸ್ ಪಕ್ಷದ ಕುತಂತ್ರದ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಲಿದೆ. ಆ ಪಕ್ಷದ ಸಂವಿಧಾನ ವಿರೋಧಿ ನೀತಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಿದೆ ಎಂದರು.
ಜಾತಿ, ಕುಟುಂಬ ಹಾಗೂ ಧರ್ಮ ರಾಜಕಾರಣ ಮಾಡುತ್ತಾ ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಕೊಪ್ಪಳದಲ್ಲಿ ಸಂವಿಧಾನ ವಿರೋಧಿ ನೀತಿಯನ್ನು ಅಳವಡಿಸಿಕೊಂಡಿದೆ. ತಮ್ಮ ಕುಟುಂಬಕ್ಕೆ ಅನುಕೂಲವಾಗುವ ನೀತಿಗಳನ್ನು ಅನುಸರಿಸಿ ಗುತ್ತಿಗೆದಾರರು ಹಾಗೂ ವ್ಯಾಪಾರಸ್ಥರ ಪಾಲಿಗೆ ಮುಳುವಾದ ಶ್ರೇಯಸ್ಸು ಶಾಸಕ ಮತ್ತು ಸಂಸದರಿಗೆ ಸಲ್ಲುತ್ತದೆ.
ಸಂವಿಧಾನದ 371 ಜೆ ವಿಧಿಯಡಿ ನಮ್ಮ ಭಾಗಕ್ಕೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡಲು ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ ಹೇಳಿದರು.
ಸಂವಿಧಾನ ಪೀಠಿಕೆಯನ್ನು ಓದಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಪೀಠಿಕೆಯನ್ನು ಓದುವ ಚಟುವಟಿಕೆಯನ್ನು ಸಂಸ್ಕೃತಿಯಾಗಿ ಬಳಸಬೇಕು. ಅದರಲ್ಲಿ ತಿಳಿಸಲಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಅದು ಪ್ರಜಾಪ್ರಭುತ್ವಕ್ಕೆ ತೋರಿಸುವ ನಿಜವಾದ ಗೌರವ ಎಂದರು.
ಪಕ್ಷದ ಓಬಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ್,  ಎಸ್ ಟಿ ಮೋರ್ಚಾ ವಿಭಾಗದ ಜಿಲ್ಲಾಧ್ಯಕ್ಷ ರಮೇಶ್ ಡಂಬ್ರಳ್ಳಿ,
ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷರಾದ ವೀರೇಶಗೌಡ್ರು ದಳಪತಿ, ನಗರ ಘಟಕದ ಅಧ್ಯಕ್ಷ ಸೋಮನಗೌಡ, ನಗರ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಿರ್ಮಲ ಎನ್ ಮೇದಾರ್,  ಮುಖಂಡರಾದ ವಸಂತಕುಮಾರ್ ಹಟ್ಟಿ, ಸುರೇಶ್ ದದೇಗಲ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ,  ಮಾರುತಿ ಗೌಡ ಹಿರೇಬಾಗನಾಳ, ಮಾರುತಿ ಹರಿಜನ, ಸಿದ್ದು ಪಾಟೀಲ್, ಅಭಿಷೇಕ್ ಡoಬ್ರಳ್ಳಿ, ಮಲ್ಲೇಶ ಬೇಳೂರು, ಗಂಗಾಧರ್ ವಸ್ತ್ರದ, ವಿಜಯಕುಮಾರ್ ಕಂಪ್ಲಿ, ಬಸವರಾಜ್ ಗೊಂದಳಿ, ರಾಜು ನರೇಗಲ್ ಲಕ್ಷ್ಮಣ ಅಳವಂಡಿ, ರಂಗಪ್ಪ ಬೋವಿ, ರತ್ನಮ್ಮ ಹಿರಿಮಠ, ಶರಣಮ್ಮ ಸoಗನಾಳ, ವೀಣಾ ಮೇದಾರ, ಅನ್ನಪೂರ್ಣ ಹಡಪಾದ, ಭಾಗ್ಯ ಐವಳಿ, ವಿಶಾಲಾಕ್ಷಿ ಕುರಬರ, ಅನಿತಾ ಹಡಪದ ಹಾಗೂ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

JDS State Core Committee Member C.V. Chandrashekhar

Get real time updates directly on you device, subscribe now.

Comments are closed.

error: Content is protected !!