ಕೊಪ್ಪಳಕ್ಕೆ ಒಂದು ಪ್ರತ್ಯಕೆ ರಂಗಾಯಣ ಬೇಕು -ಶೈಲಜಾ ಹಿರೇಮಠ


ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳದ ಎಲ್ಲ ರಂಗಮನಸ್ಸುಗಳು, ಸಮಾನಮನಸ್ಕರರು, ರಂಗತಂಡಗಳ ಜೊತೆಗೆ ರಂಗಧಾರ ರೆಪರ್ಟರಿ (ರಿ) ಕೊಪ್ಪಳ ಆಶ್ರಯದಲ್ಲಿ ಕಲಬುರಗಿ ರಂಗಾಯಣ ರೆಪರ್ಟರಿ ಕಲಾವಿದರು ಅಭಿನಯಿಸಿದ ಕಾಲಚಕ್ರ ನಾಟಕ ಪ್ರದರ್ಶನ ನಡೆಯಿತು.
Koppal needs a separate theatre – Shailaja Hiremath
ಕೊಪ್ಪಳದ ಪರಿಸರಕ್ಕೆ ಅಂಟಿರುವ ಧೂಳು ಮತ್ತು ಮಸಿಯನ್ನ ಮೆತ್ತಿಕೊಂಡುರುವ ಸಸಿಯನ್ನ ತೊಳೆಯುವದರ ಮೂಲಕ ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ರಮೇಶ ಕೆ ಅವರು
ಕಾಲಚಕ್ರ ನಾಟಕ ಉದ್ಘಾಟನೆಯನ್ನ ಮಾಡಿದರು.
ಅಧ್ಯಕ್ಷತೆಯನ್ನು ತೋಟಪ್ಪ ಕಾಮನೂರ ವಹಿಸಿಕೊಂಡಿದ್ದರು.
ವೇದಿಕೆಯಲ್ಲಿ ಅಲ್ಲಮಪ್ರಭು ಬೆಟ್ಟದೂರು ಅವರು – ಕುಲಸಚಿವರಾದ ಪ್ರೊ. ರಮೇಶ ಕೆ ಅವರಿಗೆ ಗೌರವಿ ಸನ್ಮಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಕವಿಗಳಾದ ಹಾಲಯ್ಯ ಸ್ವಾಮಿ ಹುಡೇಜಾಲಿ, ಡಾ.ಸಿದ್ದಯ್ಯ ಪುರಾಣಿಕ ಟ್ರಸ್ಟ್ ನ ಅಧ್ಯಕ್ಷರಾದ ಅಜ್ಮೀರ್ ನಂದಾಪುರ ಅವರು, ನಾಟಕ ಅಕಾಡೆಮಿಯ ಸದಸ್ಯರಾದ ಚಾಂದಪಾಷ ಕಿಲ್ಲೆದಾರ, ಚಿಂತಕರಾದ ಶೈಲಜಾ ಹಿರೇಮಠ ಮಾತನಾಡಿ ನಮ್ಮ ಕೊಪ್ಪಳಕ್ಕೊಂದು ರಂಗಾಯಣ ಇರಲಿ ಸಚಿವರು ನಮ್ಮ ಭಾಗದವರೆ ಇದಾರೆ ಅವರಿಗೆ ನಾವು ಮನವಿ ಮಾಡಿಕೊಳ್ಳೊಣ, ನಿಮ್ಮ ರಂಗಚಟುವಟಿಕೆಗಳು ಮುಂದುವರೆಯಲಿ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದರು.
ಸಾಹಿತಿಗಳಾದ ಅರುಣಾ ನರೇಂದ್ರ, ರಂಗಚಿಂತಕಾರದ ಡಾ.ಪ್ರವೀಣ ಪೋಲಿಸ್ ಪಾಟೀಲ್, ಶರಣಬಸವ ಪಾಟೀಲ್, M.K ಸಾಹೇಬ್ ನಾಗೇಶನಹಳ್ಳಿ, ಕಾರ್ಯಕ್ರಮದ ನಿರ್ವಹಣೆಯನ್ನು ರಂಗಕರ್ಮಿ ಶರಣು ಶೆಟ್ಟರ್ ನಡೆಸಿದರು.ಕೊಪ್ಪಳದ ಇನ್ನಿತರ ಸಮಾನಮನಸ್ಕರಿದ್ದರು.
Comments are closed.