೮೪ನೇ ದಿನದ ಹೋರಾಟ ಬೆಂಬಲಿಸಿದ ಎಸ್.ಜಿ. ಆಯುರ್ವೇದ ಕಾಲೇಜು ವಿದ್ಯಾರ್ಥಿ, ವೈದ್ಯರು

Get real time updates directly on you device, subscribe now.


ಕರ್ನಾಟಕರೈತ ಸಂಘದಿAದ ಅಶೋಕ ವೃತ್ತದಲ್ಲಿ ಪ್ರತಿಭಟನೆ

ಕೊಪ್ಪಳ: ನಗರಸಭೆ ಮುಂದಿನ ಬಲ್ಡೋಟ ಹಠಾವೋ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಸಿಂಡಿಯಾ, ಅಲ್ಟ್ರಾಟೆಕ್, ಕೆ.ಪಿ.ಆರ್. ಕೆಮಿಕಲ್ಸ್ ವಿಸ್ತರಣೆ ವಿರೋಧಿಸಿ ೮೪ನೇ ದಿನದಲ್ಲಿಧರಣಿಯನ್ನು ಶ್ರೀ ಗವಿಸಿದ್ಧೇಶ್ವರ ಆಯುರ್ವೇದಕಾಲೇಜಿನ ವಿದ್ಯಾರ್ಥಿಗಳು, ವೈದ್ಯರು ಮತ್ತುಕರ್ನಾಟಕರೈತ ಸಂಘ (ಎಐಯುಕೆಎಸ್) ಬೆಂಬಲಿಸಿದವು.
ಕೆ.ಆರ್.ಎಸ್. ರಾಜ್ಯ ಕಾರ್ಯದರ್ಶಿ ಕೊಡಗಿನಡಿ.ಎಸ್. ನಿರ್ವಾಣಪ್ಪಧರಣಿಯಲ್ಲಿ ಮಾತನಾಡಿ ‘ಈ ಹೋರಾಟಕ್ಕೆಇಡೀಕರ್ನಾಟಕದಜನರ ಬೆಂಬಲವಿದೆ. ಪ್ರೊ. ಮಾಧವ್ ಗಾಡ್ಗೀಳ್ ವರದಿ ಪಶ್ಚಿಮ ಘಟ್ಟ ಪರಿಸರ ಉಳಿಸಲು ತಯಾರಾಯಿತು. ಕೇರಳ ವೈನಾಡಿನಲ್ಲಿ, ಕೊಡಗಿನಲ್ಲಿ ಪರಿಸರ ಹಾಳಾದ ಕಾರಣಕ್ಕೆ ಬೆಟ್ಟ ಕುಸಿದು ಸಾವಿರಾರುಜನರುಜೀವ ಕಳೆದುಕೊಂಡರು. ಉ.ಕ. ಜಿಲ್ಲೆಯಲ್ಲಿ ಕೈಗಾ ಪರಮಾಣು ಸ್ಥಾವರ ಪರಿಸರ ಹಾಳು ಮಾಡುತ್ತದೆಂದು ಮುಂಜಾಗ್ರತೆ ವಹಿಸಿ ಸಾಹಿತಿಗಳು, ಪರಿಸರವಾದಿಗಳು, ಮಠಾಧಿಪತಿಗಳು ಸೇರಿರಾಜ್ಯದ ಗಮನ ಸೆಳೆದಂತೆ, ಈಗ ಕೊಪ್ಪಳ ಜನರ ಹೋರಾಟರಾಜ್ಯದಎಲ್ಲಾ ಹೋರಾಟಗಾರರ ಗಮನ ಸೆಳೆಯುತ್ತಿದೆ. ಅದರಂತೆ ಮುಂದಿನ ೧೦೦ನೇ ದಿನದ ಹೋರಾಟದ ಶತದಿನಕ್ಕೆ ರಾಜ್ಯ ಮಟ್ಟದಲ್ಲಿ ‘ಕೊಪ್ಪಳ ಚಲೋ’ ಕರೆಕೊಟ್ಟರೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ಮಾಡುತ್ತದೆ’ ಎಂದರು.
ಕರ್ನಾಟಕರೈತ ಸಂಘ (ಎಐಯುಕೆಎಸ್) ರಾಜ್ಯಾಧ್ಯಕ್ಷರಾದಡಿ.ಎಚ್. ಪೂಜಾರ ಮಾತನಾಡಿ, ನಮ್ಮ ಸಂಘಟನೆ ಈ ವೇದಿಕೆ ಹುಟ್ಟಿದಾಗಿನಿಂದಲೂಜತೆಗಿದೆ. ಎಷ್ಟೇ ಪ್ರಯಾಸವಾದರೂ ೧.೫ ಲಕ್ಷಜನರಆರೋಗ್ಯ, ಜೀವ ಉಳಿಸಿಕೊಳ್ಳುವ ಅವಶ್ಯಕತೆಇದಕ್ಕೆಇರುವುದರಿಂದ ಈ ಹೋರಾಟಕ್ಕೆ ಸೋಲೇ ಇಲ್ಲ. ನಮ್ಮ ಸೋಲು ಅಂದರೆ ನಮ್ಮೆಲ್ಲರ ಸಾವು ಎಂದರ್ಥ. ನಾವು ಬದುಕಲು ಹೋರಾಡುವಾಗ ಎದುರಾಳಿ ಹಿಂದೆ ಸರಿಯಲೇಬೇಕುಎಂದರು. ಇದಕ್ಕೂ ಮೊದಲು ಅಶೋಕ ವೃತ್ತದಿಂದ ಕೆ. ಆರ್. ಎಸ್. ಸಂಘದಿAದ ಮೆರವಣಿಗೆ ಮಾಡುತ್ತಾಧರಣಿ ಸ್ಥಳಕ್ಕೆ ಬರಲಾಯಿತು.
ಧರಣಿಯನ್ನು ಉದ್ದೇಶಿಸಿ ವೈದ್ಯಕೀಯ ವಿದ್ಯಾರ್ಥಿಗಳು ಎಚ್ಚರಿಕೆಯ ಮಾತನಾಡಿ, ನಾವು ಹೋರಾಡಿಕಾರ್ಖಾನೆ ಹಿಂದಕ್ಕೆ ಕಳಿಸೋಣ ಎಂದರು. ಕರ್ನಾಟಕರೈತ ಸಂಘದ ಸಿಂಧನೂರು ಚಿಟ್ಟಿಬಾಬು, ಬಿ.ಎನ್. ಯರದಿಹಾಳ ಮಾತನಾಡಿದರು.
ಪ್ರಧಾನ ಸಂಚಾಲಕರಾದಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ. ಎಂ. ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಎಸ್.ಬಿ. ರಾಜೂರು, ರವಿ ಕಾಂತನವರ, ಶರಣು ಶೆಟ್ಟರ್, ಶರಣುಗಡ್ಡಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಖ್ಬುಲ್‌ರಾಯಚೂರು, ವೈದ್ಯರು ಶ್ರೀರಾಮ ಪಿ, ಡಾ. ವಿನಾಯಕ ಕುಬಿಹಾಳ, ಡಾ. ಮನು, ಡಾ. ವಿನಯ, ಡಾ.ರೋಷನ್, ಡಾ. ಸಿದ್ರಾಮ್, ಡಾ. ಋಷಿಕೇಶ, ಡಾ. ಪ್ರವೀಣ, ವಿದ್ಯಾರ್ಥಿಗಳು ದೇವಿ ಪ್ರಸಾದ್, ಶರಣ್, ಮಹೇಶ, ಹೋರಾಟ ಶಂಭುಲಿಗಪ್ಪ ಹರಗೇರಿ, ಜಿ. ಬಿ. ಪಾಟೀಲ್, ಮಹಾದೆವಪ್ಪ ಮಾವಿನಮಡು, ದ್ಯಾಮಮ್ಮತಾವರಗೇರಾ, ಶಾಂತಮ್ಮ ಮೆಣೆದಾಳ, ಬಸವಲಿಂಗಮ್ಮತಾವರಗೇರಾ, ದೇವಪ್ಪ ಕಂಬಳಿ, ನಿರುಪಾದಿ ಬುನ್ನಟ್ಟಿ, ಶ್ಯಾಮೀದ ಮೆಣೆದಾಳ, ಮಲ್ಲೇಶಗೌಡಕನ್ನೇರಮಡು, ಬಸವರಾಜ ನರೇಗಲ್, ಶರಣಪ್ಪ ನವಲಹಳ್ಳಿ, ವಿಜಯಮಹಾಂತೇಶ ಹಟ್ಟಿರೈತ ಸಂಘದ ಸದಸ್ಯರು ಹಲವಾರು ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡರು.

Get real time updates directly on you device, subscribe now.

Comments are closed.

error: Content is protected !!