ತರಬೇತಿ ಕಾರ್ಯಗಾರಗಳು ಸ್ಥಿರವಾದ ಆಡಳಿತಕ್ಕೆ ಸಹಕಾರಿ; ಜಿ.ಎಚ್.ಜಗದೀಶ

Get real time updates directly on you device, subscribe now.


ಕೊಪ್ಪಳ, ಜ,೧೮;- ಆಡಳಿತಾತ್ಮಕ ತರಬೇತಿ ಕಾರ್ಯಗಾರಗಳು ಸ್ಥಿರವಾದ ಆಡಳಿತ ನೀಡಲು ಸಹಕಾರಿಯಾಗುತ್ತವೆ. ಈ ತರಬೇತಿ ಕಾರ್ಯಗಾರಗಳು ಉಪನ್ಯಾಸಕರು, ಪೋಷಕರು ಹಾಗೂ ಸಾರ್ವಜನಿಕರೊಂದಿಗೆಉತ್ತಮ ಸಂಬAಧ ವೃದ್ಧಸಿಕೊಳ್ಳುವಲ್ಲಿ ಮತ್ತುಮಕ್ಕಳ ಉತ್ತಮ ಫಲಿತಾಂಶ ಗಳಿಸುವಲ್ಲಿ ಸಹಕಾರಿಯಾಗುತ್ತವೆಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯಉಪನಿರ್ದೇಶಕರಾದಜಿ.ಎಚ್.ಜಗದೀಶರವರು ನುಡಿದರು. ಅವರು ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರಿಗೆಒಂದು ದಿನದ ಆಡಳಿತಾತ್ಮಕ ತರಬೇತಿಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ಮುಂದುವರೆದುಕಾಲೇಜಿನ ಫಲಿತಾಂಶ ಸುಧಾರಣೆಗೆಉಪನ್ಯಾಸಕರ ಪರಿಶ್ರಮದಜೊತೆಗೆಪ್ರಾಚಾರ್ಯರ ಪಾತ್ರವೂಬಹಳ ದೊಡ್ಡದಿದೆ.ಕಾಲೇಜಿನಆಡಳಿತದ ನಿರ್ವಹಣೆಜೊತೆಗೆಇಡೀಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳನ್ನು ಒಟ್ಟೊಟ್ಟಿಗೆಕರೆದುಕೊಂಡು ಹೋಗುವ ಜವಾಬ್ಧಾರಿ ಪ್ರಾಚಾರ್ಯರ ಮೇಲಿದೆಎಂದರು.ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರ ಸಂಘದಅಧ್ಯಕ್ಷರಾದ ಬಸಪ್ಪ ನಾಗೋಲಿಯವರು ಮಾತನಾಡಿ ಪ್ರಾಚಾರ್ಯರು ಸಕಲ ಸಿಬ್ಬಂದಿಗಳ ನಂಬಿಕೆ, ವಿಶ್ವಾಸ, ಪ್ರೀತಿಯಿಂದ ಕೆಲಸ ನಿರ್ವಹಿಸಬೇಕು.ಆಗ ಮಾತ್ರಉತ್ತಮ ಬಾಂಧ್ಯವ್ಯ ಬೆಳೆಯುತ್ತದೆ ಮತ್ತುಇಲಾಖೆ ನಿರೀಕ್ಷಿತಉತ್ತಮ ಫಲಿತಾಂಶ ಗಳಿಸಬಹುದುಎಂದರು.ವೇದಿಕೆಯ ಮೇಲೆ ಡಯಾಟ್‌ನ ನಿವೃತ್ತ ಅಧಿಕಾರಿಗಳಾದ ಕೃಷ್ಣಮೂರ್ತಿದೇಸಾಯಿ, ಹಿರಿಯ ಪ್ರಾಚಾರ್ಯರುಗಳಾದ ಅನಿಲಕುಮಾರ ಜಿ, ರಾಜಶೇಖರ ಪಾಟೀಲ್, ಶಿವಾನಂದಎ.ಆರ್ ಹಾಗೂ ಪ್ರಾಚಾರ್ಯರ ಸಂಘದ ಕಾರ್ಯದರ್ಶಿಗಳಾದ ಬಸವರಾಜ, ಕೋಶಾಧ್ಯಕ್ಷರಾದ ಶಾಂತಪ್ಪ ಟಿ.ಸಿ, ಪರಿಕ್ಷಾ ಸಂಚಾಲಕರಾದಡಾ.ರವಿ ಚವ್ಹಾಣ ಮತ್ತುಉಪನ್ಯಾಸಕರ ಸಂಘದಜಿಲ್ಲಾಧ್ಯಕ್ಷರಾದ ಸೋಮಶೇಖರಗೌಡ ಮುಂತಾದವರು ಉಪಸ್ಥಿತರಿದ್ದರು.
ಕುಮಾರಿಕವಿತಾಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಬಸವರಾಜ ಸ್ವಾಗತಿಸಿದರೆ ಕೊನೆಗೆ ಲಕ್ಷö್ಮಣಸಿಂಗ್ ವಂದಿಸಿದರು.ಮAಜುನಾಥ ಸ್ವಾಮಿಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿರಾಜ್ಯಮಟ್ಟದಲ್ಲಿಜಾನಪದಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಕುಮಾರಿಕವಿತಾ ಶಿವಪ್ಪ ಕಾಶಿಯಾರ ಹಾಗೂ ರಾಜ್ಯಮಟ್ಟಜಂಪ್‌ರೋಫ್‌ಕ್ರೀಡಾಕೂಟ ಆಯೋಜಿಸಿದ ಭೀಮಪ್ಪಗೊಲ್ಲರ್, ನಿವೃತ್ತ ಪ್ರಾಚಾರ್ಯರಾದ ಅನಿಲಕುಮಾರ ಮತ್ತುಉತ್ತಮಕಾರ್ಯ ನಿರ್ವಹಿಸಿದ ಎಸ್.ವ್ಹಿ.ಮೇಳಿ ಇವರನ್ನುವಿಶೇಷವಾಗಿ ಸನ್ಮಾನಿಸಲಾಯಿತು. ನಂತರ ನಡೆದತರಬೇತಿಯಲ್ಲಿ ಕೆಸಿಎಸ್‌ಆರ್ ನಿಯಮಗಳು ಕುರಿತುಕೃಷ್ಣಮೂರ್ತಿದೇಸಾಯಿ, ನಗದು ಪುಸ್ತಕ ಮತ್ತು ವೋಚರ್ ನಿರ್ವಹಣೆಕುರಿತು ಶಾಂತಪ್ಪ ಟಿ.ಸಿ., ಪ್ರಾಚಾರ್ಯರ ಸವಾಲು ಮತ್ತು ಸಾಧ್ಯತೆಗಳು ಕುರಿತುರಾಜಶೇಖರ ಪಾಟೀಲ್, ಇಎಸ್‌ಆರ್ ಮಾಹಿತಿಕುರಿತುಎಂ.ಎA.ಖಾಜಿ, ಎಚ್‌ಆರ್‌ಎಂಎಸ್ ೨.ಒ ಮಾಹಿತಿ ವಿದ್ಯಾಧರಮೇಘರಾಜಮತ್ತು ಸಂವಾದದಲ್ಲಿಡಾ.ರವಿ ಚವ್ಹಾಣ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.ಈ ತರಭೇತಿಕಾರ್ಯಗಾರದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಕಾಲೇಜುಗಳ ಸುಮಾರುಒಂದು ನೂರಕ್ಕೂಅಧಿಕ ಪ್ರಾಚಾರ್ಯರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!