ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಸಹಿ ಆಂದೋಲನಕ್ಕೆ ಬಸವರಾಜ ಬಳ್ಳೊಳ್ಳಿ ಚಾಲನೆ
ಕಾರ್ಖಾನೆ ವಿರೋಧಿ ಹೋರಾಟಕ್ಕೆ 79 ನೇ ದಿನ

ಕಾರ್ಖಾನೆ ವಿರೋಧಿ ಹೋರಾಟಕ್ಕೆ 79 ನೇ ದಿನ
ಕೊಪ್ಪಳ: ನಗರಸಭೆ ವಾಣಿಜ್ಯ ಸಂಕೀರ್ಣ ಮುಂದೆ ಬಲ್ಡೋಟಾ ತೊಲಗಿಸಿ ಕೊಪ್ಪಳ ಉಳಿಸಿ ಸಹಿ ಜಾಗೃತಿ ಆಂದೋಲನ ಆರಂಭವಾಯಿತು. ನಗರದ ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ ರವರು ಪರಿಸರ ಜಾಗೃತಿ ಸಹಿ ಆಂದೋಲನಕ್ಕೆ ಚಾಲನೆ ನೀಡಿ ನೆರೆದವರನ್ನು ಉದ್ದೇಶಿಸಿ ಮಾತನಾಡಿದರು. ಕೊಪ್ಪಳ ಹಾಗೂ ಸುತ್ತಲಿನ ಹಳ್ಳಿಗಳಿಗೆ ಕಾರ್ಖಾನೆ ವಿಷಾನಿಲ, ಕಂದು ದೂಳು ಹರಡಿ ಶುದ್ಧವಾಗಿದ್ದ ಪರಿಸರ ಮಾಲಿನ್ಯವಾಗಿದೆ. ಈ ದೂಳು ನಮ್ಮ ಮೇಲೆ ಬಿದ್ದಿರುವುದನ್ನು ಮಾತ್ರ ನೋಡುತ್ತೇವೆ. ಆದರೆ ನಮ್ಮ ದೇಹದೊಳಗೆ ಎಷ್ಟು ಸೇರುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಗಂಭೀರ ರೋಗಗಳು ಕಾಡುವಾಗ ಎಚ್ಚರಾದರೆ ಏನು ಪ್ರಯೋಜನ. ಈಗ ಸರಿಯಾದ ಸಂದರ್ಭ ಬಂದಿದೆ. ಎಚ್ಚರಗೊಂಡು ಮಾಲಿನ್ಯದ ವಿಷಕಾರುವ ಕಾರ್ಖಾನೆಗಳನ್ನು ಇಲ್ಲಿಂದ ತೊಲಗಿಸೋಣ ಎಂದು ಕರೆ ನೀಡಿದರು.
ಈ ಆಂದೋಲನದಲ್ಲಿ ಉದ್ಯಮಿ ಗವಿಸಿದ್ದಪ್ಪ ಮುದಗಲ್, ಪರಮೇಶ್ವರಪ್ಪ ಕೊಪ್ಪಳ ಮಾತನಾಡಿದರು. 79ನೇ ದಿನದ ಅನಿರ್ದೀಷ್ಟ ಧರಣಿಗೆ ಮಾನವಿಯ ಶರಣಬಸವ ಬೆಟ್ಟದೂರು ಅವರು ಬೆಂಬಲಿಸಿ ಮಾತನಾಡಿ, ನಾನು ಇಲ್ಲಿಯ ಗವಿಸಿದ್ದೇಶ್ವರ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಬಹುದಿನಗಳ ಕಾಲ ಇಲ್ಲಿಯೇ ಇದ್ದು ಈ ನಗರ, ಗ್ರಾಮೀಣ ಸೊಬಗು ಅನುಭವಿಸಿದ್ದೇನೆ. ಆದರೆ ಈಗ ಪರಿಸರ ಉಳಿದಿಲ್ಲ. ತುಂಗಭದ್ರಾ ನೀರು ಕಾರ್ಖಾನೆಗಳು ನಿಯಮಾವಳಿ ಮೀರಿ ಹರಿಸಿಕೊಳ್ಳುತ್ತಿದ್ದು ನನ್ನ ಸ್ವಗ್ರಾಮ ಬೆಟ್ಟದೂರು ಟೇಲೆಂಡ್ ಆಗಿ ಒಣಬೇಸಾಯಕ್ಕೆ ಸಿಮಿತಗೊಂಡಿದೆ. ನಾನೂ ನಿಮ್ಮ ಹಾಗೆ ದೊಡ್ಡ ಬಾಧಿತನು. ಈ ಹೋರಾಟ ತಾರ್ಕಿಕವಾಗಿ ಅಂತ್ಯಗೊಂಡು ನಿಮಗೆ ಸಿಗುವಂತಾದರೆ ನಾವೇ ಹೆಚ್ಚು ಖುಷಿಯಾಗುತ್ತೇವೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೂ ಈ ಹೋರಾಟ ವಿಸ್ತರಿಸಿ ಎಂದು ಹೇಳಿದರು. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಬಿ.ಜಿ. ಕರಿಗಾರ, ರವಿ ಕಾಂತನವರ, ಎಸ್.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಆಂದೋಲನ ಯುವ ಮುಂದಾಳು ಸುಭಾನ್ ನೀರಲಗಿ, ಮಂಜುನಾಥ ಕವಲೂರು, ಶರಣು ಪಾಟೀಲ್, ಸಂಚಾಲಕರಾದ ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಮಹಾಂತೇಶ ಕೊತಬಾಳ, ಸದಾಶಿವ್ ಪಾಟೀಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ಗವಿಸಿದ್ದಪ್ಪ ಹಲಿಗಿ, ಮಹಾದೇವಪ್ಪ ಮಾವಿನಮಡು, ಅಮಿತ್ ಮಾಲಗಿತ್ತಿ, ವಿಜಯ ಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು, ವಿದ್ಯಾರ್ಥಿಗಳು ಇದ್ದರು.
Comments are closed.