ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ತಟ್ಟೆ–ನೀರಿನ ಗ್ಲಾಸ್ ದೇಣಿಗೆ

ಕೊಪ್ಪಳ : ನಗರದ ಬಾಲಕರ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಗೆ 1998-99ರ ಎಸ್ ಎಸ್ ಎಲ್ ಸಿ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಊಟದ ತಟ್ಟೆ, ಕುಡಿಯುವ ನೀರಿನ ಗ್ಲಾಸನ್ನು ಶಾಲೆಗೆ ನೀಡಿ ಮಹತ್ವದ ಸೇವಾಕಾರ್ಯ ನೆರವೇರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳ ನಿತ್ಯ ಉಪಯೋಗಕ್ಕಾಗಿ ಹಳೆಯ ವಿದ್ಯಾರ್ಥಿಗಳು ಒಟ್ಟಾಗಿ 150 ಊಟದ ತಟ್ಟೆಗಳು ಹಾಗೂ 150 ನೀರಿನ ಗ್ಲಾಸ್‌ಗಳನ್ನು ದೇಣಿಗೆಯಾಗಿ ನೀಡಿದರು.
ಶಾಲೆಯ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಹಳೆಯ ವಿದ್ಯಾರ್ಥಿಗಳಿಂದ ದೊರೆತ ಈ ಸಹಕಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಂತಹ ಸೇವಾ ಕಾರ್ಯಗಳು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿತು.
ಈ ದೇಣಿಗೆ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಫಕ್ರುಸಾಬ ನದಾಫ್, ಮಹೆಬೂಬ ಮಣ್ಣೂರ್ ಅಮರೇಶ ಕೋರಿ,ಗವಿ ಮೊರಾನಾಳ್, ಚಂದ್ರಶೇಖರ, ಅಲಿನವಾಜ ಹುಸೇನ, ರಂಗನಾಥ ಕೋಳೂರು, ಮಾರುತಿ ಇಂದರಗಿ ಹಬಿದ್ ಹುಸೇನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ದೇಣಿಗೆಯ ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಗೌಡರು ಗಣಿತ ಶಿಕ್ಷಕರಾದ ಮಹೇಶ್ ಸೊಪ್ಪಿಮಠ, ಕ್ರಾಫ್ಟ್ ಶಿಕ್ಷಕರಾದ ನದಾಫ್ ಮತ್ತು ಶಾಲೆಯ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments are closed.