ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡುವಲ್ಲಿ ಅಧಿಕಾರಿಗಳ ತಾರತಮ್ಯ : ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ

Get real time updates directly on you device, subscribe now.


ಕುಷ್ಟಗಿ : ತಾಲೂಕಿನ ಗೋತಗಿ ಗ್ರಾಮ ಹಾಗೂ ಸುತ್ತಮುತ್ತಲಿನ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸಾಯಂಕಾಲ 6 ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿದ್ಯುತ್ ನೀಡುತ್ತಿರುವುದನ್ನು ಖಂಡಿಸಿ ಹಾಗೂ ಸ್ಥಳೀಯ ಲೈನ್ ಮನ್ ರೈತರಿಗೆ ಸ್ಪಂದಿಸದಿರುವುದನ್ನು ಖಂಡಿಸಿ ಅವರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಬುಧವಾರ ಕುಷ್ಟಗಿ ಜೆಸ್ಕಾಂ ನ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಗೆ ಏಕಾಏಕಿ ರೈತ ಸಂಘಟನೆ ಮುಖಂಡರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

Discrimination by officials in providing electricity to farmers’ agricultural pump sets: Appeal to DC demanding action

ರೈತರು ಕೂಡ ಅಧಿಕಾರಿಗಳಂತೆ ಮನುಷ್ಯರೇ, ಮಧ್ಯರಾತ್ರಿ ವಿದ್ಯುತ್ ನೀಡುವುದರಿಂದ ಗೋತಗಿ ಗ್ರಾಮದ ರೈತನೊಬ್ಬ ಹಾವು ಕಚ್ಚಿಸಿಕೊಂಡು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಕರ್ನಾಟಕ ಸರ್ಕಾರದ ವಿದ್ಯುತ್ ಮಂತ್ರಿ ಜಾರ್ಜ್ ಅವರು ಹೇಳಿದಂತೆ ರೈತರಿಗೆ ಹಗಲು ವೇಳೆಗೆ ಏಳು ಗಂಟೆಗಳ ಕಾಲ ಸತತವಾಗಿ ವಿದ್ಯುತ್ ನೀಡುವುದು ಹಾಗೂ ಮಾರ್ಚ್ ತಿಂಗಳಲ್ಲಿ ಯಾವುದೇ ರೀತಿಯ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳುತ್ತಾರೆ ಆದರೆ ಇಲ್ಲಿ ನೋಡಿದರೆ ಮಧ್ಯರಾತ್ರಿ ವಿದ್ಯುತ್ ನೀಡಿ ರೈತರಿಗೆ ಅನಾವಶ್ಯಕವಾಗಿ ತೊಂದರೆ ಕೊಡುತ್ತಿರುವುದು ಕಂಡುಬರುತ್ತಿದೆ. ಸ್ಥಳೀಯವಾಗಿ ನಿಯೋಜನೆಗೊಂಡ ಲೈನ್ ಮೆನ್ ಸದಾಕಾಲ ಕುಡಿತದ ಅಮಲಿನಲ್ಲಿದ್ದು ರೈತರಿಗೆ ಸಮಸ್ಯೆಗಳಿಗೆ ಸ್ಪಂದಿಸದೆ ಇರುವ ಆತನನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿದರು.

ಅಧಿಕಾರಿಗಳು ಆತನ ಬದಲಾಗಿ ಬೇರೆ ಲೈನ್ ಮೇಲೆ ನಿಯೋಜನೆಗೊಳಿಸಲು ಆದೇಶ ಮಾಡಿದರು ಹಾಗೂ ಹಗಲು ವೇಳೆಗೆ ವಿದ್ಯುತ್ ನೀಡುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಮೇಲೆ ರೈತರು ಹೋರಾಟವನ್ನು ಹಿಂಪಡೆದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್ ಸಾಬ್ ಮೂಲಿಮನಿ, ಸಿ ಪಿ ಎಂ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಆರ್ ಕೆ ದೇಸಾಯಿ, ಶಂಕರಗೌಡ ಮಾಲಿಪಾಟಿಲ್ ಬೀಳಗಿ, ಹುಸೇನ್ ಸಾಬ್ ಬೇವಿನ ಗಿಡದ, ಕಾಂತಪ್ಪ ಕಮತರ್ ರವೀಂದ್ರನಾಥ್ ದೇಸಾಯಿ ಹನುಮಂತ ತಳವಾರ್, ಪುಂಡಲಿಕಪ್ಪ ಬೂದಿಹಾಳ, ಶಾಂತಪ್ಪ ಕರಡಿ, ಸಂಗಪ್ಪ ಬೂದಿಹಾಳ ಹಾಗೂ ಸುತ್ತಮುತ್ತಲಿನ ನೂರಾರು ರೈತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!