ನಮ್ಮ ನ್ಯೂನತೆಯನ್ನು ಸಾಧನೆಯ ಮೆಟ್ಟಿಲು ಮಾಡಿಕೊಂಡು ಜೀವನ ನಡೆಸಬೇಕು : ಬಸವರಾಜ ಉಮ್ರಾಣಿ
ನಮ್ಮ ನ್ಯೂನತೆಯನ್ನು ಸಾಧನೆಯ ಮೆಟ್ಟಿಲು ಮಾಡಿಕೊಂಡು ಜೀವನ ನಡೆಸಬೇಕು; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಸವರಾಜ ಉಮ್ರಾಣಿ ಅಭಿಪ್ರಾಯ
ಕುಷ್ಟಗಿ. ಸೆ.೦೪; ಸಂಬಳಕ್ಕೆ ಶಾಲೆಗೆ ಬರದೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಅಥಣಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಮಾನವ ಕಂಪ್ಯೂಟರ್ ಬಸವರಾಜ ಉಮ್ರಾಣಿ ಹೇಳಿದರು.
ಡಾ.ರ‍್ವಪಲ್ಲಿ ರಾಧಾಕೃಷ್ಣನ್ ರವರ ೧೩೫ ನೇ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಶಾಲಾ ಶಿಕ್ಷಣ ಇಲಾಖೆ ಕುಷ್ಟಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಇಲ್ಲಿನ ಕ್ರೈಸ್ತ ಕಿಂಗ್ ಶಾಲೆಯಲ್ಲಿ ರ‍್ಪಡಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ
ಕರ‍್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಜ್ಞಾನಕ್ಕೆ ತುಂಬಾ ಬೆಲೆ ಇದೆ, ಪ್ರತಿಯೊಬ್ಬ ಶಿಕ್ಷಕರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪ್ರಮಾಣಿಕ ಪ್ರಯತ್ನ ಮಾಡಬೇಕು.
ಅಂಗಲವಕಲತೆ ಶಾಪವಲ್ಲ ಅದು ದೇವರ ಕೊಡುಗೆ.
ನಮ್ಮ ನ್ಯೂನತೆ ಸಾಧನೆಯ ಮೆಟ್ಟಿಲು ಮಾಡಿಕೊಂಡು ಜೀವನ ನಡೆಸಬೇಕು.
ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ, ಬದುಕು ಕಟ್ಟಲು ಪ್ರೇರಣೆರಾಗಬೇಕು.
ದೇವರಕೊಟ್ಟ ಕಣ್ಣುಗಳನ್ನು ಕೆಟ್ಟದ್ದನ್ನು ನೋಡದೆ ಒಳ್ಳೆಯದಕ್ಕೆ ಬಳಸಬೇಕು ಎಂದು ಹೇಳಿದರು.
ಮಕ್ಕಳಲ್ಲಿ ಆತ್ಮಸ್ಥರ‍್ಯ ಮೂಡಿಸಲು ಯೋಗ, ಧ್ಯಾನ, ಪ್ರಾಣಯಾಮ ಮಾಡಿಸಬೇಕು.
ಮಕ್ಕಳಿಗೆ ಮೊಬೈಲ್ ನೀಡುವ ಬದಲು ಪುಸ್ತಕ ನೀಡಬೇಕು.
ಮಕ್ಕಳ ರ‍್ವತೋಮುಖ ಬೆಳವಣಿಗೆಗೆ ಶಿಕ್ಷಕರ ಪಾತ್ರ ಬಹುಮುಖ್ಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಶಾಸಕ ದೊಡ್ಡನಗೌಡ ಪಾಟೀಲ್ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ದೇಶ ಕಟ್ಟುವ ಕೆಲಸವನ್ನು ಮಾಡಬೇಕು.
ಇಂದಿನ ದಿನಮಾನದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಇದೆ ಪಾಲಕರು ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೆಚ್ಚು ಒತ್ತು ನೀಡಬೇಕು.
ಜೀವನದಲ್ಲಿ ಶಿಸ್ತು ಬಹುಮುಖ್ಯ
ಶಿಕ್ಷಕರ ಯಾವುದೇ ರೀತಿಯ ತಪ್ಪು ಮಾಡಬೇಡಿ ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಸಮಾಜವನ್ನು ತಿದ್ದುವ ಕೆಲಸ ಶಿಕ್ಷಕರು ಮಾಡಬೇಕು.
ಚುನಾವಣಾ ಸಮಯದಲ್ಲಿ ಶಿಕ್ಷಕರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ನನಗೆ ಕಂಡು ಬಂದಿದೆ ಇನ್ಮುಂದೆ ಈ ರೀತಿ ನಡೆಯುವುದಿಲ್ಲ ಯಾರು ಶಾಲಾ, ಕಾಲೇಜಿನಲ್ಲಿ ರಾಜಕೀಯ ಮಾಡಬೇಡಿ ಇಂತಹ ಪ್ರಕರಣಗಳು ಕಂಡು ಬಂದರೆ ಮುಲಾಜಿಲ್ಲದೆ ಕ್ರಮಕ್ಕೆ ಶಿಪಾರಸ್ಸು ಮಾಡಲಾಗುತ್ತದೆ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಇದೇ ಸಂರ‍್ಭದಲ್ಲಿ ಶಿಕ್ಷಕರಿಗೆ ಭರವಸೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಕರ‍್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಈ ಸಂರ‍್ಭದಲ್ಲಿ ಪುರಸಭೆ ಸದಸ್ಯೆ ಇಮಾಂಬಿ ಕಲಬುರಗಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಾಜಿ ಬಳಿಗಾರ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು
ಅಧ್ಯಕ್ಷ ಮಲ್ಲಪ್ಪ ಕುದರಿ, ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನೀಲನಗೌಡ ಹೊಸಗೌಡ್ರ, ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಮಹಾದೇವಪ್ಪ ಗೊಣ್ಣಾಗರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕರ‍್ಜುನ ಲಕ್ಕಲಕಟ್ಟಿ, ಪ್ರೌಢಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ನಿಡಗುಂದಿ, ನೋಡಲ್ ಅಧಿಕಾರಿ ದಾವಲಸಾಬ ವಾಲಿಕಾರ, ದೈಹಿಕ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ, ಸಹಾಯಕ ನರ‍್ದೇಶಕ ಶರಣಪ್ಪ ಕೆ, ನೌಕರರ ಸಂಘದ ಮಾಜಿ ಅಧ್ಯಕ್ಷ ಗುರಪ್ಪ ಕುರಿ ಹಾಗೂ ವಿವಿಧ ಗ್ರಾಮಗಳ ಶಾಲಾ ಶಿಕ್ಷಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಿ.ಆರ್.ಪಿ ಡಾ.ಜೀವನಸಾಬ ಬಿನ್ನಾಳ ಸ್ವಾಗತಿಸಿದರು.
ಬಿ.ಆರ್.ಪಿ ಶರಣಪ್ಪ ತೆಮ್ಮಿನಾಳ ನಿ ರೂಪಿಸಿದರು.ವಂ ದಿಸಿದರು.
Comments are closed.