ಶ್ರೀಮಠದ ಭಕ್ತರಿಂದ ಜಾತ್ರಾ ಮಹಾದಾಸೋಹಕ್ಕೆ ಅಡುಗೆ ಎಣ್ಣೆಯ ಸೇವೆ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-೨೦೨೬

ಕೊಪ್ಪಳ :ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆಆರಂಭವಾಗಿದ್ದುಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ.ದಕ್ಷಿಣ ಭಾರತದ ಕುಂಭಮೇಳ ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಈ ನಾಡಿನ ಭಕ್ತರ ಭಕ್ತಿಯತಾಣ.
ಪ್ರತಿ ವರ್ಷವುಜಾತ್ರಾ ಮಹಾದಾಸೋಹದಲ್ಲಿ ಅನೇಕ ಭಕ್ತಾಧಿಗಳು ಶ್ರೀಮಠದ ಮಹಾದಾಸೋಹಕ್ಕೆ ವಿವಿಧಸೇವೆಯನ್ನು ಸಲ್ಲಿಸಿ ಶ್ರೀ ಗವಿಸಿದ್ಧೇಶ್ವರರ ಕೃಪೆಗೆ ಪಾತ್ರರಾಗುವುದು ಸಂಪ್ರದಾಯ. ಈ ವರ್ಷವೂಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಸಂಪೂರ್ಣವಾಗಿಖರ್ಚಾಗುವಅಡುಗೆಎಣ್ಣೆಯ ಸೇವೆಯನ್ನುಶ್ರೀ ಮಠದ ಭಕ್ತರಾದ ಹೀರಾರಾಮಜಿ ಆರ್ಯ ಹಾಗೂ ಸಹ ಕುಟುಂಬದವರು, ಭಾಗ್ಯೋದಯ ರೈಸ್ ಇಂಡಸ್ಟ್ರೀಸ್, ಸಾ: ಸಿರುಗುಪ್ಪಾ ಅವರು ಸಲ್ಲಿಸುತ್ತಿದ್ಧಾರೆ. ಈ ಸೇವೆಯುಅವರತಾಯಿಯವರಾದ ಶ್ರೀಮತಿ ದಿ.ಖೇತುದೇವಿಜಿ ಮತ್ತುತಂದೆಯವರಾದ ಶ್ರೀಮಾನ್ ದಿ.ಧೀಪಾರಾಮಜಿ ಹಾಗೂಅವರಅಣ್ಣನವರಾದ ದಿ.ಉಮಾರಾಮಜಿಇವರ ಸ್ಮರಣಾರ್ಥಸೇವೆಗೈದಿದ್ದಾರೆ.ಇವರಸೇವೆಗೆ ಶ್ರೀ ಮಠದ ಪರಮ ಪೂಜ್ಯರು ಆಶೀರ್ವದಿಸಿದ್ದಾರೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Comments are closed.