ಅನಿರ್ದಿಷ್ಟಾವಧಿ ಧರಣಿಗೆ 16 ನೇ ದಿವಸ – ಬಿಎಸ್‌ಪಿಎಲ್ ಸ್ಥಾಪಿಸಲು ನಿರಾಶ್ರಿತ ರೈತರ ಆಗ್ರಹ

Get real time updates directly on you device, subscribe now.

ಕೊಪ್ಪಳ, ಡಿ.21: ಬಿ ಎಸ್ ಪಿ ಎಲ್ ಕಂಪನಿ ಸ್ಥಾಪಿಸಿ ಇಲ್ಲವೇ ಸರಕಾರಿ ನೌಕರಿ ಕೊಡಿ ಎಂಬ ಧರಣಿಗೆ 1೬ನೇ ದಿವಸ ವಾಗಿದ್ದು ಕಂಪನಿ ಸ್ಥಾಪಿಸಲೇಬೇಕೆಂದು ಸರ್ಕಾರಕ್ಕೆ ಭೂಮಿ ಕಳೆದುಕೊಂಡ ನಿರಾಶ್ರಿತ ರೈತರು ಆಗ್ರಹಿಸಿದರು.

ಸರ್ಕಾರಕ್ಕೆ ಭೂಮಿ ಕಳೆದುಕೊಂಡ ರೈತರು ಕೊಪ್ಪಳದ ತಹಶೀಲ್ದಾರ್ ಕಚೇರಿಯ ಹತ್ತಿರ ಧರಣಿ ನಿರತರಾಗಿ 16 ದಿವಸಗಳು ಕಳೆದವು . ಇನ್ನುವರೆಗೂ ಯಾವ ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳು ಮತ್ತು ಎಸ್ ಪಿ ಅವರು ಬಂದಿಲ್ಲ ನಮ್ಮ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು 20 ವರ್ಷವಾಯಿತು ಕಾರ್ಖಾನೆ ಸ್ಥಾಪನೆ ಆಗುತ್ತಿಲ್ಲ ನಮಗೆ ಕೆಲಸ ಇಲ್ಲ ಕಾರ್ಖಾನೆ ಸ್ಥಾಪಿಸಿ ಇಲ್ಲವೇ ಸರ್ಕಾರಿ ನೌಕರಿ ಕೊಡಿ ಎಂದು 16 ದಿವಸಗಳ ವರೆಗೆ ಅನಿರ್ದಿಷ್ಟಾವಧಿ ಧರಣಿಯನ್ನು ಕುಳಿತುಕೊಂಡಿದ್ದೇವೆ. ಕಂಪನಿ ಸ್ಥಾಪಿಸಲೇಬೇಕೆಂದು ಎಲ್ಲಾ ರೈತರು ಸರ್ಕಾರಕ್ಕೆ ಆಗ್ರಹಿಸಿದರು ಈ ಸಂದರ್ಭದಲ್ಲಿ ರೈತರಾದ ಹನುಮಂತಪ್ಪ ಕೌದಿ,ಹನುಮೇಶ್ ,ಮನೋಜ್,ಪ್ರಾಣೇ ಶ್ ,ಸ್ವಾಮಿ ,ಬಸವರಾಜ್ ,ಗೋಣಿಬಸಪ್ಪ ಬಡಿಗೇರ್, ಕೇಮು ಇಟಗಿ, ಆನಂದ ರಡ್ಡಿ, ಶಿವಣ್ಣ ವಕೀಲರು, ವೀರೇಶ್ ಹಿರೇಮಠ ,ನಿಂಗಜ್ಜ ನಾಯಕ್,ಗುಡುದಪ್ಪ,ಭರಮಪ್ಪ, ಮಂಜು,ದುರುಗಪ್ಪ,ಪರಶುರಾಮ್,ಮಂಜಪ್ಪ ,ಭರಮಪ್ಪ,ಮಾರುತಿ ಕುಟಗನಹಳ್ಳಿ ಇನ್ನಿತರರು

Get real time updates directly on you device, subscribe now.

Comments are closed.

error: Content is protected !!