ಸಾಹಿತ್ಯ ಬದುಕಿನ ಮೌಲ್ಯವನ್ನು ತಿಳಿಸುವ ಶಾಸ್ತ್ರ- ಪ್ರೊ.ಎಸ್.ವಿ.ಡಾಣಿ

Get real time updates directly on you device, subscribe now.

ಕೊಪ್ಪಳ,ಡಿ-20:  ಸಾಹಿತ್ಯ ಬದುಕಿನ ಮೌಲ್ಯವನ್ನು ತಿಳಿಸುವ ಶಾಸ್ತ್ರವಾಗಿದ್ದು, ಬದುಕಿನ ಕೈಗನ್ನಡಿಯಾಗಿ ಕೆಲಸ ಮಾಡುತ್ತದೆ. ಪಂಪ ಮನುಷ್ಯ ಜಾತಿ ತಾನೊಂದು ವಲಂ ಎಂದು ಸಾರಿದ್ದಾನೆ. ಜಗತ್ತಿನ ಜನರೆಲ್ಲ ಏಕಭಾವದಲ್ಲಿ ಬದುಕಬೇಕೆಂಬುದು ಅವನ ಒಲವಾಗಿತ್ತು. ಆನಂತರ ಬಂದ ಬಸವಾದಿ ಶರಣರು ಸೋಹಂ ಎನ್ನದೇ ದಾಸೋಹಂ ಎನ್ನು ಎನ್ನುತ ದುಡಿದದ್ದರಲ್ಲಿ ಇತರರಿಗೂ ಹಂಚಿ ಬದುಕು ಎನ್ನುವ ಸಂದೇಶ ಸಾರಿದರು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲ ಸಚಿವರಾದ ಪ್ರೊ.ಎಸ್.ವಿ.ಡಾಣಿಯವರು ಹೇಳಿದರು.
ಯಲಬುರ್ಗಾ ಪಟ್ಟಣದ  ಸ್ನಾತಕೋತ್ತರ ಕೇಂದ್ರದಲ್ಲಿ ಇಂದು  ಅನುಬಂಧ ಎಂಬ ಶೀರ್ಷಿಕೆಯಡಿ,  ಕನ್ನಡ ಅಧ್ಯಯನ, ರಸಾಯನಶಾಸ್ತ್ರ, ಭೌತಶಾಸ್ತ್ರ, ಭೂಗೋಳಶಾಸ್ತ್ರ ಅಧ್ಯಯನ ವಿಭಾಗಗಳ 2025-26ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಮಾತನಾಡಿದ ಅವರು,ಗಾಂಧೀಜಿಯವರು ಸಾರಿದಂತೆ, ಏಳು ಪಾಪಗಳಲ್ಲಿ ಚಾರಿತ್ರ್ಯವಿಲ್ಲದ ಜ್ಞಾನ ಮತ್ತು ಮಾನವಿಯತೆ ಇಲ್ಲದ ವಿಜ್ಞಾನ ದೇಶದ ಬೆಳವಣಿಗೆಗೆ ಮಾರಕವಾಗಬಲ್ಲವು ಎಂದರು. ಇಂದು ವಿಜ್ಞಾನ ಬಹುದೊಡ್ಡ ಪ್ರಗತಿಯನ್ನು ಸಾಧಿಸಿದೆ. ಎ.ಐ ತಂತ್ರಜ್ಞಾನ ಬಂದ ಮೇಲೆ, ಜಗತ್ತನ್ನು ಮನಸ್ಸಿಗೆ ಬಂದಂತೆ ಸೃಜಿಸಿ ನೋಡುವ ಸಾಧ್ಯತೆಯಾಗಿದೆ. ಸಾಮಾಜಿಕ‌ ಜಾಲತಾಣವು ಜಗತ್ತಿನ ಕಸದ ತೊಟ್ಟಿಯಂತಾಗಿದೆ. ಹೀಗಾಗಿ‌ ವಿಜ್ಞಾನಕ್ಜೆ ಸಾಹಿತ್ಯ, ಕರುಣೆ,ಕರಣೆ ಜೊತೆಯಾಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿಗಳಾದ ಪ್ರೊ. ಕೆ.ಎಚ್. ಛತ್ರದ ಅವರು ಮಾತನಾಡಿ, ಶ್ರಮವಿಲ್ಲದೇ ಯಾವುದೇ ಸಾಧನೆಯಿಲ್ಲ. ಹೀಗಾಗಿ ವಿದ್ಯಾರ್ಥಿಗಳು  ನಿರಂತರ ಅಧ್ಯಯನಶೀಲರಾಗಬೇಕು ಎಂದರು.ಕಾರ್ಯಕ್ರಮದ ಆರಂಭದಲ್ಲಿ ಡಾ.ರವೀಂದ್ರ ಬಟಗೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ವೇಳೆ  ವಿವಿಧ ವಿಭಾಗದ ಉಪನ್ಯಾಸಕರಾದ. ಡಾ. ಪ್ರಹ್ಲಾದ ಡಿ.ಎಂ.. ಡಾ. ಕಾಳಮ್ಮ, ದೀಪಾ, ಕೋಮಲಾ, ರಾಜಮಾ ಬೇಗಂ, ರೇಖಾ, ಆಶ್ವಿನಿ, ಅಕ್ಷತಾ, ಶರಣಗೌಡ, ಶ್ರೀಕಾಂತ ಇನ್ನಿತರ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!