ಮಧು ಪಾವಲಿ ಶೆಟ್ಟರ್ ಗೆ ರಾಜ್ಯ ಪ್ರಶಸ್ತಿ ಪ್ರಧಾನ

Get real time updates directly on you device, subscribe now.


ಕೊಪ್ಪಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮಧು ಶಿವಕುಮಾರ್ ಪಾವಲಿ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಿದರು.
ನಂತರ ಇನ್ನರ್ ವೀಲ್ ಕ್ಲಬ್ ಕೊಪ್ಪಳದ ಅಧ್ಯಕ್ಷರಾದ ಮಧು ಶಿವಕುಮಾರ್ ಪಾವಲಿ ಶೆಟ್ಟರ್ ಅವರು ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿ ಮಕ್ಕಳ ಕಲ್ಯಾಣ ಕ್ಷೇತ್ರ ಹಾಗೂ ಶಿಕ್ಷಣ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಪ್ರಶಸ್ತಿ ನೀಡಿದ್ದು ನನಗೆ ಸಂತಸವಾಗಿದೆ ಈ ಪ್ರಶಸ್ತಿಗೆ ಇನ್ನರ್ ವೀಲ್ ಕ್ಲಬ್ ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ಉತ್ತಮ ಕೆಲಸ ಮಾಡಿದ್ದೇನೆ ಎಂದರು.
ಹರ್ಷ : ಇನ್ನರ್ ವೀಲ್ ಕ್ಲಬ್ ಕೊಪ್ಪಳದ ಅಧ್ಯಕ್ಷರಾದ ಮಧು ಶಿವಕುಮಾರ್ ಪಾವಲಿ ಶೆಟ್ಟರ್ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರಿಂದ ಇನ್ನರ್ ವೀಲ್ ಕ್ಲಬ್ ಎಲ್ಲಾ ಪದಾಧಿಕಾರಿಗಳು ಹಾಗೂ ಕೊಪ್ಪಳ ತಾಲೂಕಿನ ಸಮಸ್ತ ಬಣಜಿಗ ಸಮಾಜದ ಪದಾಧಿಕಾರಿಗಳು ಹಿರಿಯರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!