ಸಾಹಿತ್ಯ ಅಕಾಡೆಮಿಯ ಸೃಜನ ಸಮ್ಮಿಲನ ಸಾಹಿತ್ಯ ವೇದಿಕೆ ಕಾರ್ಯಕ್ರಮ

Get real time updates directly on you device, subscribe now.

ಸಾಹಿತ್ಯ ಅಕಾಡೆಮಿ, ಶಕ್ತಿ ಶಾರದೆಯ ಮೇಳ ಭಾಗ್ಯನಗರ ಕೊಪ್ಪಳದ ಸಂಯುಕ್ತಶ್ರಾಯದಲ್ಲಿ ಸೃಜನ ಸಮ್ಮಿಲನ – ಸಾಹಿತ್ಯ ವೇದಿಕೆ ಕಾರ್ಯಕ್ರಮವನ್ನು ಇಂದು ನವಂಬರ್ ೩೦, ೨೦೨೫, ರವಿವಾರ ಮುಂಜಾನೆ ೧೦.೩೦ ಗಂಟೆಗೆ ಸರಕಾರಿ ನೌಕರರ ಸಾಂಸ್ಕೃತಿಕ ಭವನ ಕೊಪ್ಪಳದಲ್ಲಿ ಆಯೋಜಿಸಲಾಗಿದೆ.

ಉದ್ಘಾಟನಾ ನುಡಿಗಳನ್ನು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಕೆ. ರವಿ, ಪ್ರಾಸ್ತಾವಿಕ ನುಡಿಗಳನ್ನು ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಸಲಹಾ ಸಮಿತಿಯ ಸದಸ್ಯ ಬಸವರಾಜ ಸಾದರ ಪ್ರಸ್ತುತಪಡಿಸಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ವಹಿಸಲಿದ್ದಾರೆ.

ಕಾವ್ಯ ಪ್ರಸ್ತುತಿಯನ್ನು ಸಾವಿತ್ರಿ ಮಜಮದಾರ, ಕಥಾಪ್ರಸ್ತುತಿಯನ್ನು ಇಸ್ಮಾಯಿಲ್ ತಳಕಲ್, ಆತ್ಮಕಥಾ ಪರಿಸ್ಥಿತಿಯನ್ನು ಎ.ಎಂ. ಮದರಿ ಮತ್ತು ಕಥಾ ಪರಿಸ್ಥಿತಿಯನ್ನು ಈರಪ್ಪ ಎಂ. ಕಂಬಳಿ ನೆರವೇರಿಸಲಿದ್ದು ವಂದನಾರ್ಪಣೆಯನ್ನು ವಿಜಯಲಕ್ಷ್ಮೀ ಕೊಟಗಿ ಮಾಡಲಿದ್ದಾರೆ.

ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶಕ್ತಿ ಶಾರದೆಯ ಮೇಳದ ಸಂಚಾಲಕ ಡಿ.ಎಂ. ಬಡಿಗೇರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!