ಕುಷ್ಟಗಿಯಲ್ಲಿ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ
ಕುಷ್ಟಗಿ : ಪಟ್ಟಣದ ಶ್ರೀ ಬನ್ನಿ ಮಹಾಂಕಾಳಿ ದೇವಿಯ ಯ ಮಹಾಭಿಷೇಕದ ಪ್ರಯುಕ್ತ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಗುರುವಾರ ನಡೆದವು.


ಕೂಕನೂರಿನ ಡಾ. ಮಹಾದೇವ ಸ್ವಾಮಿಜಿ ಮಾತನಾಡಿ, ಇದು ಕನಸು ನನಸು ಎಂಬ ಭಾವದಲ್ಲಿ ಇದ್ದೇವೆ. ಕುಷ್ಟಗಿ ಮಹಾನಗರದಲ್ಲಿ ವಜೀರ ಅಲಿ ಗೋನಾಳ ರವರು ಸ್ವರ್ಗವನ್ನು ಸೃಷ್ಟಿಸಿದರು. ಜಾತಿಮತ ಪಂಥಗಳನ್ನು ಒಂದೂಗೂಡಿಸಿದ್ದಾರೆ. ನೀವು ಸಹ ನೋಂದು ಬೆಂದವರಿಗೆ ಆಶ್ರಯ ನೀಡಿರಿ. ಹುಟ್ಟು ಸಾವಿನ ಮಧ್ಯ ನಾವು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕು. ಧಾನ, ಧರ್ಮ ಉಪಕಾರ ಮಾಡಬೇಕು.
ಎಲ್ಲರೂ ಭಾರತೀಯರು ಎಂಬ ಭಾವನೆಯಿಂದ ಬದುಕಬೇಕು. ಸಾಮೂಹಿಕ ವಿವಾಹಗಳ ಸರದಾರ ವಜೀರ ಗೋನಾಳ ಎಂದು ಗುಣಗಾನ ಮಾಡಿದರು.
ಮದ್ದಾನೇಶ್ವರ ಮಠದ ಶ್ರೀಕರಿಬಸವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಇಂದಿನ ಕಾಲದಲ್ಲಿ ನಾವೂ ಸಾಲ ಸೂಲ ಮಾಡಿ ವಿವಾಹ ಮಾಡುವುದನ್ನು ನಾವು ನೋಡಿದ್ದೇವೆ. ನಮ್ಮ ಭಾಗದ ಜನರಿಗೆ ಕಷ್ಟ ಆಗ ಬಾರದು ಎಂದು ವಜೀರ ಗೋನಾಳ ರವರು ಅವರು ಇಂತಹ ಸಾಮೂಹಿಕ ವಿವಾಹ ಮಾಡುತ್ತಿದ್ದಾರೆ ಎಂದರು. ಮ
ಭಗತಸಿಂಗ್ ಸಂಸ್ಥೆಯ ಅಧ್ಯಕ್ಷ ವಜೀರ ಅಲಿ ಗೋನಾಳ ಪ್ರಾಸ್ತಾವೀಕವಾಗಿ ಮಾತನಾಡಿ, ಬಡವರ ಕಲ್ಯಾಣಕ್ಕೆ ಆಧಾರ ಆಗುತ್ತಾರೆ, ಪ್ರತಿ ವರ್ಷ ನವೆಂಬರ್ ತಿಂಗಳನಲ್ಲಿ ನಡೆಯುತ್ತದೆ. ಜನರು ಪ್ರಚಾರ ಮಾಡಬೇಕು. ಕಾಣದ ಕೈಗೊಳ್ಳು ಜನ ಪ್ರತಿನಿಧಿಗಳು, ಹಾಗೂ ಶ್ರೀಗಳ ಸಹಕಾರದಿಂದ ಸಾಮೂಹಿಕ ವಿವಾಹಗಳು ಜರುಗತ್ತಲಿವೆ. ಸರಕಾರಿ ಸೌಲಭ್ಯಗಳನ್ನು ಪಡೆಯಲು ಪ್ರಮಾಣ ಪತ್ರ ನೀಡಲಾಗುವುದು. ಎಂದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸಂಘಟನೆಯಿAದ ಇಂತಹ ಕಾರ್ಯಕ್ರಮಗಳು ಜರುಗುತ್ತೇವೆ. ಸಮೂಹದ ಕಾರ್ಯಗಳನ್ನು ಭಗವಂತ ಮಾಡಲಿ. ನೂತನವಾಗಿ ದಾಂಪತ್ಯ ಕಾಲಿಡುತ್ತಿರುವ ತಾವೂಗಳು, ಮಾನವ ಸಮಾಜ ಬೆಳೆಯ ಬೇಕಾದರೆ ಅದು ಒಳ್ಳೆಯ ಸಮಾಜ ಬೆಳೆಯಬೇಕು . ಸಂಸಾರ ಒಂದು ಬಂಡಿಯ ಎರಡು ಗಾಲಿಗಳಂತೆ ಸಮಾನವಾಗಿ ಹೋಗಬೇಕು. ಸಾರ್ಥಕ ಬದುಕು ಬೇಕಾದರೆ ಸಮಾನ ಅವಕಾಶಗಳು ಮತ್ತು ಸಮಾನ ಶಕ್ತಿಗಳು ಇರುತ್ತವೆ. ಗುರು, ಹಿರಿಯರಗೆ ಗೌರವ ಕೊಡವಂತ ಕೆಲಸ ಮಾಡಬೇಕು.
ಸಂಸ್ಕಾರ ದಿಂದ ಬಾಳಲು ಸಾಧ್ಯವಾಗುತ್ತದೆ. ಹೆಣ್ಣು ಜ್ಯೋತಿ ಇದ್ದಂತೆ ಮನೆಯಿಂದ ಗಂಡನ ಮನೆಗೆ ಹೋಗಿ ಅಲ್ಲಿ ಬೆಳಗುವಂತ ಕೆಲಸ ಮಾಡುತ್ತಾಳೆ. ಸುಖ ಸಂಸಾರ ಕಾಣುವ ಭಾಗ್ಯ ನಿಮದು ಆಗಲಿ ಎಂದರು.
ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ ಮಾತನಾಡಿದರು.
ಅಂಕಲಿಮಠದ ಶ್ರೀವೀರಭದ್ರ ಮಹಾಸ್ವಾಮಿಜೀ, ಮದ್ದಾನಿಮಠದ ಶ್ರೀಕರಿಬಸವ ಶಿವಚಾರ್ಯ ಸ್ವಾಮಿಗಳು, ಬಿಜಕಲ್ ನ ಶಿವಲಿಂಗ ಮಹಾಸ್ವಾಮಿಗಳು, ಇಲಕಲ್ ನ ಸಯ್ಯದ್ ಷಾ ಅಬ್ದುಲ್ ಖಾದ್ರಿ ಫೈಜಲ್ ಪಾಷಾ,
ನೀಡಶೇಸಿಯ ಅಭಿನವ ಶ್ರೀಕರಿಬಸವ ಶಿವಾಚಾರ್ಯ ಸ್ವಾಮಿ, ಕೇಸೂರಿನ ಚಂದ್ರಶೇಖರ ದೇವರು ಸಾನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಪ್ರಭಾಕರ್ ಚಿಣಿ, ಬಸವರಾಜ ಹಳ್ಳೂರು, ಫಕೀರಪ್ಪ ಹೊಸವಕ್ಕಲ್ , ಅನೀಲ ಆಲಮೇಲ, ಶರಣಪ್ಪ ಹಂಪನಾಳ ಸೇರಿದಂತೆ ಇತರೆ ಗಣ್ಯರು ಇದ್ದರು.
ಒಟ್ಟು ೪೩ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಟರಾಜ ಸೋನರ್ ಕಾರ್ಯಕ್ರಮ ನಿರ್ವಹಿಸಿದರು