ನ.30ರಂದು 21ನೇ ವರ್ಷದ ಬಡ ಮುಸ್ಲಿಂ ಜೋಡಿಗಳ ಸಾಮೂಹಿಕ ವಿವಾಹಗಳು

0

Get real time updates directly on you device, subscribe now.

ಕೊಪ್ಪಳ : ನಗರದ ಸರ್ದಾರ್ ಗಲ್ಲಿಯ ಮುಸ್ಲಿಂ ಪಿಂಜಾರ್ ಪಂಚ ಕಮಿಟಿಯವರು ಹಜರತ್ ಮೆಹಬೂಬ್  ಸುಬ್ಹಾನಿ ರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ಸತತವಾಗಿ ಪ್ರತಿ ವರ್ಷ ಬಡ ಮುಸ್ಲಿಂ ಜೋಡಿಗಳ ಉಚಿತ ವಿವಾಹಗಳನ್ನು ನಡೆಸಿಕೊಂಡು ಬಂದಿರುತ್ತಾರೆ.
ಈ ವರ್ಷ ಸುಮಾರು 20 ಬಡ ಜೋಡಿಗಳು ಹೆಸರುಗಳನ್ನ ನೋಂದಾಯಿಸಿದ್ದು, ಅವರ ಸಾಮೂಹಿಕ ವಿವಾಹಗಳನ್ನು ದಿನಾಂಕ 30-11-2025 ರಂದು ರವಿವಾರ ಮುಂಜಾನೆ 11:30 ಗಂಟೆಗೆ ನೆರವೇರಿಸಲಾಗುವುದು.
ಈ ಎಲ್ಲಾ ನೂತನ ಜೋಡಿಗಳಿಗೆ ಬಟ್ಟೆಗಳು, ಸೀರೆಗಳು, ಬಂಗಾರದ ತಾಳಿ,  ಬಾಂಡೇ ಸಾಮಾನುಗಳು, ಉಡುಗೊರೆ, ಟ್ರಂಕಗಳು, ಹಾಸಿಗೆ ಇತ್ಯಾದಿಗಳನ್ನು ನೀಡುವುದರ ಜೊತೆಗೆ ಕರ್ನಾಟಕ ಸರ್ಕಾರ ಘೋಷಿಸಿರುವ ಪ್ರತಿ ಜೋಡಿಗೆ ರೂಪಾಯಿ 50,000 ಗಳನ್ನು ಸಹ ಅವರಿಗೆ ತಲುಪಿಸುವಂತಹ ಕೆಲಸವನ್ನು ಮಾಡಲಾಗುವುದೆಂದು ಸಂಸ್ಥೆಯವರು ತಿಳಿಸಿರುತ್ತಾರೆ.
ಇದೇ ಸಂದರ್ಭದಲ್ಲಿ ಈ ಪವಿತ್ರ ಗ್ಯಾರವಿ ನಿಮಿತ್ತ ದಿನಾಂಕ 23-11-2025 ರಂದು ಬೃಹತ್  ರಕ್ತದಾನ ಶಿಬಿರವನ್ನು ಏರ್ಪಡಿಸಿ ಯಶಸ್ವಿಗೊಳಿಸಿದ್ದಾರೆ Mass weddings of poor Muslim couples for the 21st year on Nov. 30
ಇಂದಿನ ಅತ್ಯಂತ ದುಬಾರಿ ಯುಗದಲ್ಲಿ ಸಮಾಜದಲ್ಲಿರುವ ಬಡ ಮುಸ್ಲಿಂ ಜೋಡಿಗಳಿಗೆ ವಿವಾಹಗಳನ್ನ ಮಾಡುವುದರ ಮೂಲಕ ಅವರ ದೊಡ್ಡ ಭಾರವನ್ನ ಕಡಿಮೆ ಮಾಡಲು ಸಂಸ್ಥೆಯವರು ಪ್ರಯತ್ನಿಸುತ್ತಿರುವದು ಬಹಳ ಶ್ಲಾಘನೀಯವಾಗಿದೆ
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಮಾಜದ ಬಡ ಮುಸ್ಲಿಂ ಜೋಡಿಗಳ ವಿವಾಹಗಳನ್ನ ನೆರವೇರಿಸಲೆಂದು ಫಕ್ರುಸಾಬ್ ನದಾಫ್, ತಾಲೂಕು ಉಪಾಧ್ಯಕ್ಷರು, ಅಸ್ಮಾನ್ ಸಾಬ್ ನದಾಫ್, ತಾಲೂಕು ಅಧ್ಯಕ್ಷರು ಹಾಗೂ ಶಹಾಬುದ್ದೀನ್ ಸಾಬ್ ನೂರಬಾಷ್, ರಾಜ್ಯ ಕೋಶಾಧಿಕಾರಿ, ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!