ನಾಲಾ ಕಾಮಗಾರಿಯಲ್ಲಿ ಎಲ್ಲಾ ಕೂಲಿಕಾರರು ಕೆಲಸಕ್ಕೆ ಹಾಜರಾಗಿರಿ: ದೇವರಾಜ ಪತ್ತಾರ

Get real time updates directly on you device, subscribe now.

All laborers in the drain construction should report to work: Devaraja Pattara

ಲೇಬಗೇರಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿ ಪ್ರಾರಂಭ

ಕೊಪ್ಪಳ:- ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಲೇಬಗೇರಿ ಗ್ರಾಮ ಪಂಚಾಯತಿ ವತಿಯಿಂದ ನಾಲಾ ಹೂಳೆತುವ ಕಾಮಗಾರಿಯಲ್ಲಿನ ಎಲ್ಲಾ ಕೂಲಿಕಾರರು ಕೂಲಿ ಕೆಲಸಕ್ಕೆ ಹಾಜರಾಗುವಂತೆ ತಾಲೂಕ ಪಂಚಾಯತ ಐಇಸಿ ಸಂಯೋಜಕ ದೇವರಾಜ ಪತ್ತಾರ ಕರೆ ನೀಡಿದರು.

ದಿನಾಂಕ:21-04-2026ರಂದು ಲೇಬಗೇರಾ ಗ್ರಾಮ ಪಂಚಾಯತಿಯ ಲೇಬಗೇರಾ ಗ್ರಾಮದ ನಾಲಾ ಹೂಳೆತ್ತುವ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಮಾತನಾಡಿ ಪ್ರತಿ ಮಾನವ ದಿನಕ್ಕೆ 370/- ಕೂಲಿ ನಿಗದಿಪಡಿಸಿದ್ದು ಸಂಪೂರ್ಣವಾಗಿ ಕೂಲಿ ಕೆಲಸ ನಿರ್ವಹಿಸಿ ಪೂರ್ತಿ ಹಣ ಪಡೆಯುವಂತೆ ಕರೆ ನೀಡಿದರು. ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕೆಲಸ ಜೊತೆಗೆ ಆರೋಗ್ಯ ಕಡೆ ಕಾಳಜಿವಹಿಸಬೇಕೆಂದರು.18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಜಾಬಕಾರ್ಡ ಬಳಕೆ ಮಾಡಿಕೊಂಡು ಕೂಲಿ ಕೆಲಸ ಪಡೆಯಲು ಕಡ್ಡಾಯವಾಗಿ ನಮೂನೆ-6 ಸಲ್ಲಿಸಬೇಕೆಂದರು. ಏಪ್ರಿಲ್ ರಿಂದ ಜೂನ್ ವರೆಗೆ 90 ದಿನಗಳ ಕೂಲಿ ಕೆಲಸ ಪಡೆಯಬೇಕೆಂದರು. ಕೂಲಿ ಹಣದಿಂದ ಮಕ್ಕಳ ಶಾಲಾ, ಕಾಲೇಜು ಶುಲ್ಕ ಭರಿಸಲು, ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗೆ ಶುಲ್ಕ ಹಾಗೂ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದರು.ಜಾಬಕಾರ್ಡನಲ್ಲಿರುವ ಕುಟುಂಬದ ಎಲ್ಲ ಸದಸ್ಯರು e-KYC ಹೊಂದಿದ ನಂತರವೇ ಎನ್‌ ಎಂಆರ್ನಲ್ಲಿ ಕೂಲಿಕಾರರು ಕೂಲಿ ಕೆಲಸಕ್ಕೆ ಹಾಜರಾಗತಕ್ಕದ್ದು.1&2ನೇ ಹಾಜರಾತಿ ಕಡ್ಡಾಯವಾಗಿರುತ್ತದೆ.
ತಾಂತ್ರಿಕ ಸಹಾಯಕ ಮಂಜುನಾಥ ಮಾದಾಪುರ, ಬೇರ್‌ಪೂಟ್‌ ಟೆಕ್ನಿಷಿಯನ್‌ ರವಿಶಂಕರ ಪೂಜಾರ, ಕರವಸೂಲಿಗಾರ ರಾಜಪ್ಪ ಬಂಗಾರಿ, ಗ್ರಾಮ ಕಾಯಕ ಮಿತ್ರ ಅಂಬಮ್ಮ ದೇವದುರ್ಗ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ನಿಂಗಪ್ಪ, ಈರಪ್ಪ, ಕಾಯಕ ಬಂಧು ಮಂಜುಳಾ ಗೊಲ್ಲರ, ಶಾಶ್ವತ ಗೊಲ್ಲರ, ಗಾಳೆಪ್ಪ ಹರಿಜನ 282 ಕೂಲಿಕಾರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!