ಸುಗಮ ಸಂಚಾರಕ್ಕೆ ಆಗ್ರಹಿಸಿ  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಮನವಿ

Get real time updates directly on you device, subscribe now.


ಕೊಪ್ಪಳ : ನಗರದಲ್ಲಿ ಸುಗಮ ಸಂಚಾರ ಅನ್ನುವುದು ಮರಿಚಿಕೆಯಾಗಿದೆ. ಬೈಕ್, ಕಾರು, ಆಟೋ ಮುಂತಾದ ವಾಹನಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ಬಿಡುತ್ತಿದ್ದು ಇದರಿಂದ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿದೆ. ಅದೇ ರೀತಿ ನಗರದ ಬಸವೇಶ್ವರ ವೃತ್ತದಲ್ಲಿ ಹೊಸಪೇಟೆಯ ಕಡೆಗೆ ಹೋಗುವ ಬಸ್ಗಳು ಸಿಗ್ನಲ್ನಲ್ಲಿಯೇ ನಿಲ್ಲುವುದರಿಂದ ಹಿಂದೆ ಬರುವ ವಾಹನ ಸವಾರರರಿಗೆ ಬಹಳ ತೊಂದರೆ ಉಂಟಾಗುತ್ತಿದ್ದು,

ಅಶೋಕ ವೃತ್ತ, ತಹಶೀಲ್ದಾರ ಆಫೀಸ್ ವೃತ್ತ, ನಗರದ ಕೇಂದ್ರಿಯ ಬಸ್ನಿಲ್ದಾಣ ಹತ್ತಿರ ಸೇರಿದಂತೆ ಇನ್ನೂ ಹಲವಾರು ಕಡೆಗೆ ರಸ್ತೆಯ ಪಕ್ಕದಲ್ಲಿಯೇ ನಿಲ್ಲಿಸುವ ವಾಹನ ಸವಾರರು ಸಂಚಾರಿ ನಿಯಮಗಳನ್ನ ಗಾಳಿಗೆ ತೂರುತ್ತಿದ್ದಾರೆ ಅಂತವರ ವಿರುದ್ಧ ದಂಡ ಹಾಗೂ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ಮನವಿಯಲ್ಲಿ ಬಸ್ಗಳ ನಿಲ್ಲುವ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು. ಅದೇ ರೀತಿಯಾಗಿ ಹೊಸಪೇಟೆ ಕಡೆಯಿಂದ ಕೊಪ್ಪಳ ನಗರಕ್ಕೆ ಬರುವ ಬಸ್ಗಳು ಬಸವೇಶ್ವರ ವೃತ್ತದಲ್ಲಿ ಅಲ್ಲಿಯೂ ಕೂಡಾ ಸಿಗ್ನಲ್ನಲ್ಲಿಯೇ ನಿಲ್ಲಿಸುವುದರಿಂದ ಹಿಂದೆ ಬರುವ ವಾಹನ ಸವಾರರರಿಗೆ ಅಲ್ಲಿಯೂ ಕೂಡಾ ತೊಂದರೆಯಾಗುತ್ತದೆ.
ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಪಾದಚಾರಿಗಳು ನಡೆದಾಡುವ ಮಾರ್ಗವನ್ನು ಅಂಗಡಿಯ ಮಾಲೀಕರು, ಅಂಡಿಯ ಸಾಮಾನುಗಳನ್ನು ಪಾದಚಾರಿಗಳ ಮಾರ್ಗದಲ್ಲಿಯೇ ಹಾಕಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ಪಾದಚಾರಿ ಮಾರ್ಗ ಬಿಟ್ಟು ರಸ್ತೆಯ ಮೇಲೆ ನಡೆದಾಡುವ ಪರಿಸ್ಥಿತಿ ಬಂದಿದೆ. ರಸ್ತೆಗಳಲ್ಲಿ ನಡೆದಾಡುವುದರಿಂದ ಅಪಘಾತಗಳು ಜರಗುತ್ತಿವೆ. ಆದ್ದರಿಂದ ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.. ನಗರದಲ್ಲಿ ಇರುವ ಎಲ್ಲಾ ಮಾರ್ಟಗಳ ಮುಂದೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ವಾಹನಗಳನ್ನು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಬಿಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಮತ್ತು ಸಾಲಾರಜಂಗ್ ರಸ್ತೆ, ಜವಾಹರ ರಸ್ತೆಯಲ್ಲಿ ಅಂಗಡಿಯ ಮಾಲೀಕರು ನಿರ್ಮಾಣ ಹಂತದ ಕಟ್ಟಡಕ್ಕೆ ಬಳಸುವ ಮರಳು, ಜಲ್ಲಿ ಸೇರಿದಂತೆ ಕಟ್ಟಡಕ್ಕೆ ಬಳಸುವ ವಸ್ತುಗಳನ್ನು ರಸ್ತೆಯಲ್ಲಿಯೇ ಹಾಕುತ್ತಿದ್ದು ಹಾಗೂ ಸಿಂಪಿ ಲಿಂಗಣ್ಣ ರಸ್ತೆಯಲ್ಲಿ ಭಾರಿ ಗಾತ್ರದ ವಾಹಗಳು ಅಲ್ಲಿಯೇ ನಿಂತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
ಆದ್ದರಿಂದ ಅಶೋಕ ವೃತ್ತ, ತಹಶೀಲ್ದಾರ ಆಫೀಸ್ ವೃತ್ತ, ನಗರದ ಕೇಂದ್ರಿಯ ಬಸ್ನಿಲ್ದಾಣ ಹತ್ತಿರ ಸೇರಿದಂತೆ ಇನ್ನೂ ಹಲವಾರು ಕಡೆಗೆ ರಸ್ತೆಯ ಪಕ್ಕದಲ್ಲಿಯೇ ನಿಲ್ಲಿಸುವ ವಾಹನ ಸವಾರರು ಸಂಚಾರಿ ನಿಯಮಗಳನ್ನ ಗಾಳಿಗೆ ತೂರುತ್ತಿದ್ದಾರೆ ಅಂತವರ ವಿರುದ್ಧ ದಂಡ ಹಾಗೂ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರು, ಜಿ,ಎಸ್ ಗೋನಾಳ, ತಾಲೂಕು ಅಧ್ಯಕ್ಷ ಮಹೇಶ ಅಲ್ಲಾನಗರ, ಮರಿಯಪ್ಪ ಮಂಗಳೂರು, ಆನಂದ ಮಡಿವಾಳರ, ರಾಜಾ ಹುಸೇನ್, ಶಿವರಾಜ ಛಟ್ಟಿ, ಲಿಂಗರಾಜ ಕವಲೂರು, ಶಕೀಲ್ ಬ್ಯಾಗವಾಟ, ನಾಗರಾಜ ನೀಲಗಿರಿ, ರಫೀ ಲೋಹಾರ, ಬಸವರೆಡ್ಡಿ ಮಾದಾಪುರ, ವಿನಾಯಕ ಪಾಸ್ತೆ, ಮಾರುತಿ ಕುಟಗನಹಳ್ಳಿ, ಪ್ರವೀಣಗೌಡ, ಕಿರಣ್ ಜೋಗಿ, ಮಂಜುನಾಥ, ಗವಿ ಬಹದ್ದೂರುಬಂಡಿ, ಗವಿಸಿದ್ದಪ್ಪ ನಾಯಕ ಮುಂತಾದವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!