ಮಕ್ಕಳ ಬಾಂಧವ್ಯದ ಕಥೆಯಾಧಾರಿತ ಕೈಟ್ ಬ್ರದರ‍್ಸ್ ಸಿನಿಮಾ ಬಿಡುಗಡೆ : ಕೊಪ್ಪಳವರೇ ನಿರ್ಮಿಸಿರುವ ಸಿನಿಮಾ

Get real time updates directly on you device, subscribe now.

ಇಂದು ಕೈಟ್ ಬ್ರದರ‍್ಸ್ ಸಿನಿಮಾ ಬಿಡುಗಡೆ

ಕೊಪ್ಪಳ: ಕೊಪ್ಪಳದ ಲಕ್ಷ್ಮಿ ಚಿತ್ರ ಮಂದಿರದಲ್ಲಿ ನ.೨೧ ರಂದು ಮಕ್ಕಳ ಬಾಂಧವ್ಯದ ಕಥೆಯಾಧಾರಿತ ಕೈಟ್ ಬ್ರದರ‍್ಸ್ ಸಿನಿಮಾ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ದೇಶಕ ವಿರೇನ್ ಸಾಗರ್ ಬಗಾಡೆ ಅವರು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯದ ವಿವಿಧ ಚಿತ್ರ ಮಂದರಿಗಳಲ್ಲಿ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ನನ್ನ ತವರೂರು ಕೊಪ್ಪಳ ಜಿಲ್ಲೆಯಲ್ಲಿ ಸಿನಿಮಾ ಪ್ರದರ್ಶನ ಕಾಣಲಿಲ್ಲ. ಕಾರಣ, ಇಲ್ಲಿ ಚಿತ್ರ ಮಂದಿರ ನಮಗೆ ಲಭ್ಯವಾಗಿರಲಿಲ್ಲ. ಈಗ ಲಕ್ಷ್ಮಿ ಚಿತ್ರ ಮಂದಿರದಲ್ಲಿ ಸಿನಿಮಾ ಪ್ರದರ್ಶನಕ್ಕೆ ನಮಗೆ ಅವಕಾಶ ದೊರೆತಿದೆ ಎಂದರು.
ಈ ಸಿನಿಮಾದಲ್ಲಿ ಹನುಮಂತ ಹಾಗೂ ಶ್ರೀರಾಮನ ಪಾತ್ರದಲ್ಲಿ ಸಮರ್ಥ ಆಶಯ, ಪ್ರಣೀಲ್ ನಾಡಗಿ ಅವರು ಬಾಲ ನಟರು ನಟಿಸಿದ್ದು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಬೆಂಗಳೂರು, ಸಾಬರಮತಿ ಆಶ್ರಮದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇಲ್ಲಿ ಇಬ್ಬರು ಬಾಲಕರು ತಮ್ಮ ಬಾಲ್ಯವನ್ನು ಹೇಗೆ ಕಳೆಯುತ್ತಾರೆ. ಅವರ ನಡುವೆ ಇರುವ ಬಾಂಧವ್ಯ ಹೇಗಿರುತ್ತದೆ ಎನ್ನುವುದು ಒಳಗೊಂಡಿದೆ. ಇಲ್ಲಿ ಮಕ್ಕಳ ಶಿಕ್ಷಣ ಕಲಿಕೆ ಸೇರಿ ಇತರೆ ವಿಷಯ
ಗಮನ ಸೆಳೆಯಲಾಗಿದೆ ಎಂದರು.
ಈ ಸಿನಿಮಾದಲ್ಲಿ ಶ್ರೀರಾಮನ ವೇಷಧಾರಿ ಬಾಲ ನಟನು, ಹನುಮಂತನನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದು, ಇದನ್ನು ವಿವಾದ ಮಾಡುವುದು ನಮ್ಮ ಉದ್ಧೇಶವಲ್ಲ. ಪೌರಾಣಿಕ ಹಿನ್ನೆಲೆಯ ಸನ್ನಿವೇಶಗಳೂ ಇಲ್ಲ. ಆದರೆ ಮಕ್ಕಳ ಬಾಲ್ಯದ ಜೀವನ, ಶ್ರೀಮಂತ-ಬಡವನ ನಡುವೆ ಇರುವ ಬಾಂಧವ್ಯದ ಕುರಿತಾಗಿದೆ. ಈ ಸಿನಿಮಾಗೆ ಒಟ್ಟು ೬೫ ಲಕ್ಷ ರೂ. ಬಜೆಟ್ ವೆಚ್ಚ ಮಾಡಲಾಗಿದ್ದು, ೫ ಹಾಡು, ೨.೨೮ ನಿಮಿಷ ಒಳಗೊಂಡಿರುವ ಸಿನಿಮಾ ಇದಾಗಿದೆ. ನಮ್ಮ ಭಾಗದ ಎಲ್ಲ ಕಲಾ ಪ್ರೇಕ್ಷಕರು ಈ ಸಿನಿಮಾ ನೋಡಿ ತವರೂರಿನ ಈ ನಿರ್ದೇಶಕನಿಗೆ ಪ್ರೋತ್ಸಹಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಕೊತಬಾಳ, ಚಲನಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜಮದಾರ, ನಿರ್ಮಾಪಕ ವಿನೋದ ಬಗಾಡೆ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!