ಗಂಗಾವತಿ ಗಾಂಜಾ ಮಾರಾಟ : ೬ ಜನರ ಬಂಧನ

Get real time updates directly on you device, subscribe now.

ಗಂಗಾವತಿ : ಗಾಂಜಾ ಮಾರಾಟ ಮಾಡುತ್ತಿದ್ದ ಆರು ಜನರನ್ನು ಬಂಧಿಸುವಲ್ಲಿ ಗಂಗಾವತಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ 16 ರಂದು ಚಿಕ್ಕ ಜಂತಕಲ್ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಗಾಂಜಾ ಮಾರಾಟ ಮಾಡಲು ಬಂದಿದ್ದ ವರ ಮೇಲೆ ದಾಳಿ ಮಾಡಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ೨.೮ ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ

ಮೊದಲ ಪ್ರಕರಣದಲ್ಲಿ ಆಂಧ್ರ ಮೂಲದ ನಾಲ್ವರು ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಬಂದಿತರಾಗಿದ್ದಾರೆ

    1] ಗೋಪಾಲ್ ತಂದೆ ಲಕ್ಷಣ ವಾಲ್ಮೀಕಿ ವಯ:32ವರ್ಷ ಸಾ.ಧರ್ಮಾವರಂ ಗೇಟ್, ಗುಂತಕಲ್

    2) ಮಸ್ತಾನ ತಂದೆ ಹೊನ್ನೂರ ವಯ:31 ವರ್ಷ ಸಾ. ಧರ್ಮಾವರಂ ಗೇಟ್, ಗುಂತಕಲ್

    3] ಶೇಖ್ ಮಹಿಬೂಬ ಭಾಷ ತಂದೆ ಶೇಖ್ ಗುಲಾಮ್ ವಯ:23 ವರ್ಷ ಸಾ.ಧರ್ಮಾವರಂ ಗೇಟ್, ಗುಂತಕಲ್

    4] ಶೇಖರ್ ತಂದೆ ಚನ್ನಪ್ಪ ಮಲ್ಲಶೆಟ್ಟಿ ವಯ:39ವರ್ಷ ಸಾ:ಭಾಗ್ಯನಗರ ಸೈನ್ಸ್ ಸ್ಕೂಲ್ ಹತ್ತಿರ ಗುಂತಕಲ್ ಎಲ್ಲರೂ ಜಿ. ಅನಂತಪೂರ, ಆಂಧ್ರ ಪ್ರದೇಶ ರಾಜ್ಯ.

    ಕಾರ ನಂ-ಎಪಿ40-ಇಕೆ7031 ರಲ್ಲಿ  ಬ್ಯಾಗಿನಲ್ಲಿ. 280000/- ರೂಪಾಯಿ ಮೌಲ್ಯದ 5 ಕೆಜಿ 770 ಗ್ರಾಂ ಗಾಂಜಾ ದೊರೆತಿದ್ದು, ಗಾಂಜಾ ಮತ್ತು ಕಾರ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

    Aಅದೇ ರೀತಿ ಕೆೊಪ್ಪಳ ಜಿಲ್ಲೆ, ಗಂಗಾವತಿ ಉಪವಿಭಾಗ, ಗಂಗಾವತಿ ನಗರ ಠಾಣಾ ವ್ಯಾಪ್ತಿಯ ಗೌಸಿಯಾ ಕಾಲೋನಿಯ ಹತ್ತಿರದ ಮಾವಿನ ತೋಪಿನ ಮುಂದಿನ ಬೀಳು ಜಾಗೆಯಲ್ಲಿಯ  ಶೆಡ್ಡಿನಲ್ಲಿ ದಿನಾಂಕ-12 ರಂದು ಮದ್ಯಾನ್ನ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಇಬ್ಬರಗೂ ಹಿಡಿದು ವಶಕ್ಕೆ ಪಡೆದುಕೊಳ್ಳಲಾಗಿದೆ. ಗಂಗಾವತಿ ನಗರದ ಇಬ್ಬರನ್ನು ಬಂಧಿಸಲಾಗಿದೆ

      1] ಹನೀಫ್ ತಂದೆ ಶಕ್ಷಾವಲಿ ವಯ:23ವರ್ಷ, ಸಾ: ಮಹಿಬೂಬನಗರ, ಗಂಗಾವತಿ,

      2) ಸೋಹೆಲ್ ತಂದೆ ಜಾಫರಸಾಬ ವಯ:21 ವರ್ಷ, ಸಾ: ಮಹಿಬೂಬನಗರ, ಗಂಗಾವತಿ,

      ಆಪಾದಿತರಿಂದ 56,2500/- ರೂಪಾಯಿ ಮೌಲ್ಯದ 1 ಕೆ.ಜಿ 125 ಗ್ರಾಂ ಗಾಂಜಾ ದೊರೆತಿದ್ದು, ಗಾಂಜಾ ವಶಪಡಿಸಿಕೊಳ್ಳಲಾಗಿದೆ

      ಪ್ರಕರಣಗಳ ಪತ್ತೆ ಕುರಿತು  ಹೇಮಂತ್‌ಕುಮಾರ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ, ರವರ ಮಾರ್ಗದರ್ಶನದಲ್ಲಿ ಮತ್ತು  ಜೆ.ಎಸ್ ನ್ಯಾಮಗೌಡ್ರ ಡಿ.ಎಸ್.ಪಿ. ಗಂಗಾವತಿ,  ರಂಗಪ್ಪ ದೊಡ್ಡಮನಿ ಪಿಐ ಗಂಗಾವತಿ ಗ್ರಾಮೀಣ ಠಾಣೆ,  ಪ್ರಕಾಶ ಮಾಳಿ ಪಿ.ಐ ಗಂಗಾವತಿ ನಗರ ಠಾಣೆ, ರವರ ನೇತೃತ್ವದಲ್ಲಿ ಶ್ರಮಿಸಿ ಗಾಂಜಾ ಪ್ರಕರಣಗಳನ್ನು ಪತ್ತೆ ಮಾಡಿ ಉತ್ತಮ ಕರ್ತವ್ಯ ಮಾಡಿದ  ವೆಂಕಟೇಶ ಚೌವ್ವಣ್ ಪಿಎಸ್‌ಐ ಗಂಗಾವತಿ ಗ್ರಾಮೀಣ ಠಾಣೆ ಮತ್ತು ಗಂಗಾವತಿ ಗ್ರಾಮೀಣ ಠಾಣೆ ತಂಡದ ಸಿಬ್ಬಂದಿ ಹೆಚ್‌ಸಿರವರಾದ ಸಿದ್ದನಗೌಡ, ರಮೇಶ, ನಿಂಗಪ್ಪ ಮರಿಯಪ್ಪ, ಮಾರುತಿ, ಬಸವರಾಜ ಚಿನ್ನೂರು ಹಾಗೂ ಸಿಪಿಸಿ ರವರಾದ ಮಲ್ಲಪ್ಪ, ರಾಘವೇಂದ್ರ ಗುಂಡಪ್ಪ, ಸೈಯದ್ ಗೌಸ್, ಹನುಮೇಶ ಮತ್ತು ಜೀಪ್ ಚಾಲಕ ಕನಕಪ್ಪ ಗಂಗಾವತಿ ನಗರ ಠಾಣೆ ತಂಡದ ಸಿಬ್ಬಂದಿ ಹೆಚ್‌ಸಿ ರವರಾದ ಚಿರಂಜೀವಿ, ಮರಿಶಾಂತಗೌಡ, ವಿಶ್ವನಾಥ, ರಾಘವೇಂದ್ರ, ಸುಭಾಷ, ಪಿಸಿ ರವರಾದ ವಿಶ್ವನಾಥ, ಗ್ಯಾನಪ್ಪ, ಯಮನೂರ, ಅಬ್ದುಲ್ ರಜಾಕ್, ಮೈಲಾರಪ್ಪ ರವರನ್ನು ಒಳಗೊಂಡ ತಂಡಕ್ಕೆ ಡಾ: ರಾಮ್ ಎಲ್. ಅರಸಿದ್ದಿ, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ, ರವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.

      Get real time updates directly on you device, subscribe now.

      Comments are closed.

      error: Content is protected !!