ಧರಣಿ ಹೋರಾಟದಲ್ಲಿ ಪರಿಸರ ತಪಸ್ವಿ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ:

ಕೊಪ್ಪಳ: ನಗರಸಭೆ ಆವರಣದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಬಲ್ಡೋಟ ಹಾಗೂ ಇತರ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೆಂದು, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಬೇಕೆಂದು ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ 16ನೇ ದಿನದ ಆರಂಭಕ್ಕೆ ಮೊದಲು ಶತಾಯುಷಿ ಸಾಲುಮರದ ತಿಮ್ಮಕ್ಕ ಅವರ ಅಗಲಿಕೆಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಧಾರವಾಡ ಜನ ಜಾಗೃತಿ ಅಭಿಯಾನದ ರಾಮಾಂಜನಪ್ಪ ಆಲ್ದಳ್ಳಿ ಅವರು ಕಾರ್ಖಾನೆ ದೂಳು ಬಾಧಿತ ಗಿಣಿಗೇರಿ, ಕನಕಾಪುರ, ಹಿರೇಬಗನಾಳ, ಚಿಕ್ಕಬಗನಾಳ, ಕುಣಿಕೇರಿ, ತಾಂಡಾ ಮುಂತಾದ ಹಳ್ಳಿಗಳಿಗಲ್ಲಿ ಸುತ್ತಾಡಿ ಅಲ್ಲಿರುವ ನೈಜ ಸ್ಥಿತಿಯನ್ನು ಅರಿಯಲು, ಆ ಜನರನ್ನು ಸಂದರ್ಶನ ಮಾಡಿ ನೇರವಾಗಿ ಧರಣಿ ಸ್ಥಳಕ್ಕೆ ಬಂದರು. ಅವರು ಬಲ್ಡೋಟ ವಿಸ್ತರಣೆ ವಿರೋಧಿಸಿದ ಈ ಹೋರಾಟ ಅತ್ಯಂತ ನ್ಯಾಯಸಮ್ಮತವಾದ. ಜನಪರ ಚಳವಳಿಯಾಗಿದೆ. ಜನಗಳ ಆರೋಗ್ಯದ ಮೆಲೆ ತೀವ್ರ ದುಷ್ಪರಿಣಾಮವಾಗುವುದು ಗೊತ್ತಿದ್ದೂ ಕೊಪ್ಪಳ ಸುತ್ತ ಹತ್ತಾರು ಬೃಹತ್ ಕಾರ್ಖಾನೆಗಳಿಗೆ ಅನುಮತಿ ಕೊಟ್ಟಿರುವ ಷರ್ಕಾರದ ನಿರ್ಧಾರ ಖಂಡನಾರ್ಹವಾಗಿದೆ. ಜನಬೆಂಬಲದೊಂದಿಗೆ ಬಲಿಷ್ಠ ಚಳವಳಿಯಾಗಿ ಬೆಳೆಯುವಂತಾಗಲೀ, ನಾವೂ ನಿಮ್ಮ ಬೆಂಬಲಕ್ಕೆ ಇದ್ಧೇವೆ ಎಂದರು. ಧರಣಿ ಸ್ಥಳದ ಇಂದಿನ ನಿರ್ಣಯ: 114ರ ದೀರ್ಘಾಯುಷಿ ತಾನು ಬದುಕಿದ ಎಲ್ಲಾ ದಿನಗಳ ಕಾಲ ಮರಗಳನ್ನು ಬೆಳೆಸಿ ಪ್ರಕೃತಿಗೆ ಅಪರಮಿತ ಕಾಣಿಕೆಯನ್ನು ಕೊಟ್ಟು ಚಿರಸ್ಥಾಯಿಯಾದರು. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರ ಪರಿಸರ ಕಾಳಜಿಯ ಪ್ರಜ್ಞೆ, ತಪಸ್ಸಿನ ಜೀವಸವೆಸಿದ ಸಾಲುಮರದ ತಿಮ್ಮಕ್ಕ ನಮ್ಮ ಹೋರಾಟಕ್ಕೆ ಪ್ರೇರಣೆಯಾಗಿದ್ದಾರೆ. ಈ ಹೋರಾಟಕ್ಕೆ ಅವರನ್ನು ಕರೆತರುವ ಯೋಜನೆ ಇತ್ತು. ಆದರೆ ಅವರು ನಮ್ಮನ್ನು ಅಗಲಿ ಹೋದರು. ಜಯ ಸಾಧಿಸುವ ಕೊನೆಯ ದಿನದವರೆಗೆ ಇವರ ಭಾವಚಿತ್ರ ಧರಣಿ ಟೆಂಟ್ ಸ್ಥಳದಲ್ಲಿ ಇಡಬೇಕೆಂದು ನಿರ್ಣಯ ತೆಗೆದುಕೊಳ್ಳಲಾಯಿತು.
ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಸಾಹಿತಿ ಎ.ಎಂ.ಮದರಿ, ಡಿ.ಎಂ. ಬಡಿಗೇರ, ಈಶ್ವರ ಹತ್ತಿ, ಬಸವರಾಜ ಶೀಲವಂತರ, ಎಸ್.ಎ.ಗಫಾರ್, ಮಖಬೂಲ್ ರಾಯಚೂರು, ಸಂಜೀವಮೂರ್ತಿ ಬೇವಿನಗಿಡ, ಗವಿಸಿದ್ದಪ್ಪ ಹಲಿಗಿ, ಬಸವರಾಜ ನರೇಗಲ್, ನಿಂಗಜ್ಜ.ಬಂಡಿಹರ್ಲಾಪುರ, ಡಿ.ರಾಜರತ್ನಂ, ಎಸ್.ಬಿ. ರಾಜೂರ, ಶಂಭುಲಿಂಗಪ್ಪ ಹರಗೇರಿ, ಮಂಗಳೇಶ ರಾಠೋಡ್, ಎಸ್ ಮಹಾದೇವಪ್ಪ ಮಾವಿನಮಡು, ಡಿ.ರತ್ನಾ, ರಜಾಕ್ ಪೇಂಟರ್, ಬಸವರಾಜ್ ಪೆಂಟರ್, ಶರಣು ಗಡ್ಡಿ, ಶರಣು ಪಾಟೀಲ್, ಆಸೀಫ್ ಕಿಲ್ಲೆದಾರ ಹಾಗೂ ಕಾಲೆಜು ವಿದ್ಯಾರ್ಥಿಗಳು ಇದ್ದರು.
Comments are closed.