ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಗೆ ಪ್ರತಿಷ್ಠಿತ ರಾಷ್ಟ್ರೀಯ ಮಾನವ ಸಂಪನ್ಮೂಲ ಶ್ರೇಷ್ಠತೆ ಪ್ರಶಸ್ತಿ

0

Get real time updates directly on you device, subscribe now.

ಕಿರ್ಲೋಸ್ಕರ್ ಫೆರಸ್‌ಇಂಡಸ್ಟರೀಸ್ ಲಿಮಿಟೆಡ್‌ಗೆರಾಷ್ಟಿçÃಯ ಮಾನವ ಸಂಪನ್ಮೂಲ ಶ್ರೇಷ್ಠತಾ ಪ್ರಶಸ್ತಿ-೨೦೨೫ ರಅಡಿಯಲ್ಲಿ ಸುಸ್ಥಿರ ವ್ಯವಹಾರ ಬೆಳವಣಿಗೆ ಸಾಮರಸ್ಯ ಮತ್ತುಉತ್ಪಾದಕತೆಯನ್ನು ಬೆಳೆಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವುದಕ್ಕಾಗಿ“ಕೈಗಾರಿಕಾ ಸಂಬAಧಗಳ ಕಾರ್ಯತಂತ್ರ ಪ್ರಶಸ್ತಿ”ಯನ್ನು ನೀಡಿ ಪುಸ್ಕರಿಸಲಾಗಿದೆ.

ದಿನಾಂಕ ೩೦-೧೦-೨೦೨೫ ರಂದು ನವದೆಹಲಿಯ ಏರೋಸಿಟಿಯ ಹೋಟೆಲ್ ಪುಲ್‌ಮನ್‌ನಲ್ಲಿಆಯೋಜಿಸಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್‌ಸಲ್ ಮ್ಯಾನೆಜ್‌ಮೆಂಟ್‌ನ ೪೧ನೇ ರಾಷ್ಟಿçÃಯ ಸಮ್ಮೇಳನದಲ್ಲಿ ಆರ್. ಪಿ. ಸಿಂಗ್, ನಿರ್ಧೇಶಕರು, (ಮಾನವ ಸಂಪನ್ಮೂಲ ಮತ್ತು ಕಾನೂನು) ಇಫ್ಕೋ ಹಾಗೂ ಛೇರಮನ್ ಆರ್ಗ್ನೈಸಿಂಗ್ ಕಮಿಟಿ, ಇಫ್ಕೋದಛೇರಮನ್, ದಿಲೀಪ್ ಸಂಘಾನಿ ಮತ್ತುಕ್ರಿಭ್ಕೋದಛೇರಮನ್ ಸುಧಾಕರಚೌಧರಿ ಇವರುಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದು, ಕಿರ್ಲೋಸ್ಕರ್ ಕಾರ್ಖಾನೆಯ ಡಾ. ಪಿ ನಾರಾಯಣ, ಕಾರ್ಯನಿರ್ವಾಹಕ ಉಪಾಧ್ಯಕ್ಷರು– ಮಾನವ ಸಂಪನ್ಮೂಲ ಮತ್ತು ಆಡಳಿತ ಹಾಗೂ ಶಿವಯ್ಯ ಬಿ ಸ್ವಾಮಿ, ಉಪಾಧ್ಯಕ್ಷರು- ಮಾನವ ಸಂಪನ್ಮೂಲ ಇವರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಈ ರಾಷ್ಟಿçÃಯ ಮನ್ನಣೆಯುಳ್ಳ ಪ್ರಶಸ್ತಿಯು ಪ್ರತಿಷ್ಠಿತಎನ್‌ಐಪಿಎಮ್‌ತೀರ್ಪುಗಾರರ ಸಮಿತಿಯಕಠಿಣ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ ಹಾಗೂ ಕಿರ್ಲೋಸ್ಕರ್‌ಕಾರ್ಖಾನೆಯ ಕೈಗಾರಿಕಗಳ ಅಭ್ಯಾಸಗಳ ಕಾರ್ಯತಂತ್ರದ ಶಕ್ತಿ, ಪ್ರಗಿತಪರ ವಿಧಾನ ಮತ್ತು ಶ್ರೇಷ್ಠತೆಯನ್ನು ಸಾಧಿಸಿರುವುದಕ್ಕಾಗಿ ಸಂದಿರುತ್ತದೆ.

ಈ ಪ್ರಶಸ್ತಿಯನ್ನು ನಂಬಿಕೆ ಆಧಾರಿತಉದ್ಯೋಗಿ ಸಂಬAಧಗಳು, ಪಾರದರ್ಶಕ ಸಂವಾದ ಮತ್ತು ನಿರ್ವಹಣೆ ಹಾಗೂ ಕಾರ್ಯಪಡೆಯ ನಡುವೆ ದೀರ್ಘಕಾಲೀನ ಸಮಾರಸ್ಯವನ್ನು ಬೆಳೆಸುವಲ್ಲಿ ದೂರದೃಷ್ಠಿಯ ನಾಯಕತ್ವವನ್ನು ಪ್ರದರ್ಶಿಸುವ ಸಂಸ್ಥೆಗಳಿಗೆ ನೀಡಿಗೌರವಿಸಲಾಗುತ್ತಿದ್ದು, ಕಿರ್ಲೋಸ್ಕರ್‌ಕಾರ್ಖಾನೆಯು ಪರಸ್ಪರಗೌರವ, ಸಬಲೀರಣ ಮತ್ತು ಹಂಚಿಕೆಯ ಬೆಳವಣಿಗೆಯ ಮೇಲೆ ಆಧಾರವಾಗಿರುವ ಬಲವಾದಕೈಗಾರಿಕಾ ಬಾಂಧವ್ಯದಅಡಿಪಾಯವನ್ನು ನಿರ್ಮಿಸಿದ್ದು, ಸುಸ್ಥಿರ ಕೈಗಾರಿಕಾಕಾರ್ಯಕ್ಷಮತೆ, ಪಾರದರ್ಶಕತೆ, ಪಾಲುದಾರಿಕೆಯ ಮನೋಭಾವದ ತಳಹದಿ ಮತ್ತು ಉದ್ಯೋಗಿಗಳ ಯೋಗಕ್ಷೇಮಇತ್ಯಾದಿ ಉಪಕ್ರಮಗಳನ್ನು ಅತ್ಯಂತಗೌರವಯುತವಾಗಿ ನಡೆಸಿಕೊಂಡು ಹೋಗುತ್ತಿರುವುದರ ಪ್ರತಿಫಲವಾಗಿ ಈ ಪ್ರಶಸ್ತಿಗೆ ಭಾಜನವಾಗಿದೆ.

೨೦೪೭ ರಲ್ಲಿ ವಿಕಸಿತ್ ಭಾರತ್ – ತಂತ್ರಜ್ಞಾನ ಮತ್ತು ಸಮಗ್ರ ಮಾನವ ಸಂಪನ್ಮೂಲ ನಾಯಕತ್ವದ ಮೂಲಕ ಭವಿಷ್ಯಕ್ಕೆ ಸಿದ್ದವಾಗಿರುವ ಕಾರ್ಯಪಡೆಯನ್ನು ಸಬಲೀರಣಗೊಳಿಸುವುದು – ಈ ಸಮ್ಮೇಳನದ ಧ್ಯೇಯವಾಕ್ಯವಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ಪರ್ಸನಲ್ ಮ್ಯಾನೆಜ್‌ಮೆಂಟ್ ಸಂಸ್ಥೆಯುಒAದು ಲಾಭರಹಿತ ಸಂಸ್ಥೆಯಾಗಿದ್ದು, ಇದರ ಮುಖ್ಯಕಛೇರಿಯುಕೋಲ್ಕತ್ತಾದಲ್ಲಿದೆ.ದೇಶಾದ್ಯಾಂತ ಸುಮಾರು ೫೫ ಘಟಕಗಳನ್ನು ಹೊಂದಿದ್ದು, ಸುಮಾರು ೧೧,೦೦೦ ಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದೆ.ದೇಶಾದ್ಯಾAತ ಮಾನವ ಸಂಪನ್ಮೂಲ ವೃತ್ತಿಪರರನ್ನು ಒಳಗೊಳ್ಳುವ ಮೂಲಕ ನಿಯಮಿತವಾಗಿಉಪನ್ಯಾಸ, ಸಭೆಗಳು, ವಿಚಾರಣಾ ಸಂಕಿರಣಗಳು, ತರಬೇತಿ ಕೋರ್ಸ್ಗಳು, ಸಮ್ಮೇಳನಗಳು ಇತ್ಯಾದಿಗಳ ಮೂಲಕ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿತೊಡಗಿರುವ ಮೂಲಕ ವೃತ್ತಿಪರರಕೌಶಲ್ಯ ಮತ್ತು ಪರಿಣಿತಯನ್ನುಅಭಿವೃದ್ಧಿಪಡಿಸಲು ಸತತವಾಗಿ ಪ್ರಯತ್ನಿಸುವ ಸಂಸ್ಥೆಯಾಗಿದೆ.

ಈ ಸಮ್ಮೇಳನದಲ್ಲಿ ದೇಶಾದ್ಯಂತಇರುವ ಕೈಗಾರಿಕೆಗಳ ಮುಖ್ಯಸ್ಥರು, ನಾಯಕರು, ಉದ್ಯಮ ವೃತ್ತಿಪರರು, ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು, ಎನ್‌ಐಪಿಎಮ್‌ನ ರಾಷ್ಟಿçÃಯ ಅಧ್ಯಕ್ಷರಾದ ಡಾ.ಎಮ್ ಹೆಚ್‌ರಾಜ, ರಾಷ್ಟಿçÃಯಗೌರವ ಕಾರ್ಯದರ್ಶಿಗಳಾದ ಪಿ.ಆರ್.ಬಸವರಾಜು, ರಾಷ್ಟಿçÃಯಕಾರ್ಯಕಾರಿ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!