ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮ ಕನ್ನಡಿಗರ ಧೃವತಾರೆ ಬಳ್ಳಾರಿಯ ಪೈಲ್ವಾನ್ ರಂಜಾನ್ ಸಾಬ್

0

Get real time updates directly on you device, subscribe now.

 

 

ದೇಶ ಸ್ವಾತಂತ್ರö್ಯ ಪಡೆದ ಬಳಿಕ ಕರ್ನಾಟಕ ಪ್ರಾಂತ ರಚನೆಗಾಗಿ ಕನ್ನಡಿಗರು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು. ಈ ಹೋರಾಟದ ಕೊನೆಯ ಘಟ್ಟದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡುತ್ತಾ ನಾಡಿಗಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ, ಅನ್ಯಭಾಷಿಕರ ದ್ವೇಷಕ್ಕೆ ಕನ್ನಡಕ್ಕಾಗಿ ಹೋರಾಡುತ್ತಾ ವೀರ ಮರಣಹೊಂದಿದ ಹುತಾತ್ಮನಾದ ಈ ವೀರ ಕನ್ನಡಿಗನ ಹೆಸರು ಬಹಿರಂಗಗೊಳ್ಳಲು ದಶಕಗಳೇ ಬೇಕಾದವು. ಈ ಅಪ್ರತಿಮ ಹೋರಾಟಗಾರ ಬೇರೆ ಯಾರೂ ಅಲ್ಲ. ಅವರೇ ಬಳ್ಳಾರಿಯ ಹೆಮ್ಮೆ ಪೈಲ್ವಾನ್ ರಂಜಾನ್ ಸಾಬ್!

ಳ್ಳಾರಿಯನ್ನು ಕನ್ನಡ ನಾಡಿನಲ್ಲಿಯೇ ಉಳಿಸಿಕೊಳ್ಳಲು ಹೋರಾಡಿದ ಮಹನೀಯರು, ಸಾವಿರಾರು ಕನ್ನಡ ಪ್ರೇಮಿಗಳು, ಕನ್ನಡ ಪರ ಹೋರಾಟಗಾರ ಪೈಕಿ ರಂಜಾನ್‌ಸಾಬ್ ಅವರ ಸಾದನೆ ಅನನ್ಯ.
ಳ್ಳಾರಿ ಕನ್ನಡ ನಾಡಿನೊಂದಿಗೆ ವೀಲಿನವಾದ ಶುಭ ಸಂದರ್ಭವನ್ನು ಸಂಭ್ರಮದಿAದ ಆಚರಿಸಬೇಕು ಎಂಬ ಹಂಬಲದಲ್ಲಿದ್ದ ರಂಜಾನ್‌ಸಾಬ್ ಅವರನ್ನು ಅನ್ಯಭಾಷಿಕರ ದ್ವೇಷ ಬಲಿ ತೆಗೆದುಕೊಂಡಿತು. ಈ ನಾಡಿನ ಒಗ್ಗೂಡುವಿಕೆಗಗಿ ತನ್ನ ಜೀವವನ್ನೇ ತೆತ್ತು ಸಾರ್ಥಕ ಜನ್ಮವಾಗಿಸಿಕೊಂಡ ಹುತಾತ್ಮ ರಂಜಾನ್ ಸಾಬ್ ಅವರು ಕನ್ನಡ ಪರ ಹೋರಾಟಗಳಿಗೆ, ಚಳವಳಿಗಾರರಿಗೆ ಎಂದೆAದೂ ಸ್ಫೂರ್ತಿ.

 

ಕನ್ನಡ ಭಾಷಿಕರ ನಾಡಾಗಿದ್ದ ಬಳ್ಳಾರಿಯನ್ನು ಮೈಸೂರು ರಾಜ್ಯದಲ್ಲಿ ೩೦ನೇ ಸೆಪ್ಟಂಬರ್ ೧೯೫೩ರಂದು ಅಂದಿನ ಸರಕಾರಗಳು ತಾತ್ಕಾಲಿಕವಾಗಿ ವಿಲೀನಗೊಳಿಸಿದವು. ಅಂದಿನ  ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು ಬಳ್ಳಾರಿಯ ಬಿಡಿಎಎ ಮೈದಾನದಲ್ಲಿ ಭೇಟಿ ನೀಡಿ ಸಾರ್ವಜನಿಕ ಭಾಷಣ ಮಾಡುವವರಿದ್ದರು. ಅದಕ್ಕಾಗಿ ಪೆಂಡಾಲ್ ನಿರ್ಮಾಣ ಮಾಡಲಾಗುತ್ತಿತ್ತು. ಕನ್ನಡದ ಸಕ್ರಿಯಾ ಕಾರ್ಯಕರ್ತರಾಗಿದ್ದ ಪೈಲ್ವಾನ್ ರಂಜಾನ್ ಸಾಬ್ ಅವರಿಗೆ ಇದರ ಉಸ್ತುವಾರಿಯನ್ನು ವಹಿಸಲಾಗಿತ್ತು. ರಾತ್ರಿ ಅಲ್ಲಿಯೇ ಮಲಗಿದ್ದ ರಂಜಾನ್ ಸಾಬ್ ಮೇಲೆ ಅನ್ಯಭಾಷಿಕರ ಗುಂಪೊAದು ಬಲ್ಬಿನಲ್ಲಿ ತುಂಬಿದ ಆ್ಯಸಿಡ್ ಎಸೆದು ಪರಾರಿಯಾಯಿತು. ಮೂರು  ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿ ಹುತಾತ್ಮರಾದರು.

ಬಾಲ್ಯ :ಬಳ್ಳಾರಿಯ ಪಿಂಜಾರ್ ಓಣಿಯಲ್ಲಿರುವ ಹುಡುಗ ಕರ್ನಾಟಕ ಏಕೀಕರಣಕ್ಕಾಗಿ ತನ್ನ ಪ್ರಾಣವನ್ನೆ ಅರ್ಪಣೆ ಮಾಡುತ್ತಾನೆಂದು ಯಾರು ಭಾವಿಸಿರಲಿಲ್ಲ. ಅಪ್ಪಟ ಕನ್ನಡಭಿಮಾನಿಯಾಗಿದ್ದ  ಪೈಲ್ವಾನ್ ರಂಜಾನ್ ಸಾಬ್ ಅಂದು ಬಳ್ಳಾರಿ ನಗರದಲ್ಲಿ ಮನೆಮಾತಾಗಿದ್ದರು. ಇವರು ಹುಟ್ಟಿದ ದಿನಾಂಕದ ಬಗ್ಗೆ ಯಾವುದೇ ನಿಖರವಾದ ಮಾಹಿತಿಗಳು ದಾಖಲೆಗಳಿಲ್ಲ. ೧೯೫೩ರಲ್ಲಿ ಹುತಾತ್ಮರಾದ ಸಂದರ್ಭದಲ್ಲಿ ೪೦ ವರ್ಷಗಳ ಯುವಕರಾಗಿದ್ದದ್ದನ್ನು ಲೆಕ್ಕ ಹಾಕಿದರೆ ೧೯೧೩ ಅಥವಾ ಒಂದೆರಡು ವರ್ಷ ಹೆಚ್ಚು ಕಡಿಮೆ ಆಸುಪಾಸಿನಲ್ಲಿ ಜನಿಸಿರಬಹುದೆಂದು ಅಂದಾಜಿಸಬಹುದಾಗಿದೆ. ಇವರ ತಂದೆ ಹುಸೇನ್ ಸಾಬ್ ತಾಯಿ ಜಂಗಲಮ್ಮ. ಹುಸೇನ್ ಸಾಬ್‌ರಿಗೆ ಮೂವರು ಮಕ್ಕಳು. ಹಿರಿಯ ಮಗಳು ಹುಸೇನ್ ಬೀ, ಎರಡನೆಯ ಮಗ ರಂಜಾನ್ ಸಾಬ್, ಮೂರನೆಯ ಮಗಳು ಸುಲ್ತಾನ್ ಬೀ. ಮೂಲತಃ ಹುಸೇನ್ ಸಾಬ್ ಅವರ ತಂದೆಯ ಊರು ಬಳ್ಳಾರಿ ತಾಲೂಕಿನ ಹಲಕುಂದಿ. ಈ ಗ್ರಾಮವನ್ನು ಬಿಟ್ಟು ಬಳ್ಳಾರಿಯಲ್ಲಿನ ಪಿಂಜಾರ್ ಓಣಿ ಅಥವಾ ಪಿಂಜಾರ್ ವಾಡಿಯಲ್ಲಿ ನೆಲೆಸಿದ್ದರು. ಹುಸೇನ್ ಸಾಬ್ ಅವರು ಅಳ್ಳೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಗಾದೆ ಅಥವಾ ತಡಿಗಳನ್ನು ತಯಾರಿಸಲು ಈ ಅಳ್ಳೆಯನ್ನು ಬಳಕೆ ಮಾಡುತ್ತಿದ್ದರು.  ಗಾದಿಗಳನ್ನು ತಯಾರಿಸುವ ಕುಲಕಸುಬು ಇವರದು.

 

ಶಿಕ್ಷಣ: ಮೂಲತಃ ಕನ್ನಡ ಭಾಷೆ ಪಿಂಜಾರರ ಮನೆ ಮಾತು. ರಾಜ್ಯದ ಯಾವುದೇ ಭಾಗದಲ್ಲಿ ನೆಲೆಸಿರಲಿ ಇವರ ಮಾತೃ ಭಾಷೆ ಕನ್ನಡ. ಹುಸೇನ್ ಸಾಬ್ ಅವರು, ತಮ್ಮ ಮಗ ರಂಜಾನ್‌ಸಾಬ್ ಅವರನ್ನು ತಮ್ಮ ಓಣಿಯಲ್ಲೇ ಇರುವ ಹಳೇ ಮಸೀದಿಯಲ್ಲಿದ್ದ  ಶಾಲೆಗೆ ದಾಖಲಿಸಿದರು. ಕುಂಟು ಮಾಸ್ತರ್ ಎಂದೇ ಪ್ರಸಿದ್ಧಿಯಾಗಿದ್ದ ಅಧ್ಯಾಪಕರು ರಂಜಾನ್ ಸಾಬ್ ಅವರಿಗೆ ವಿದ್ಯೆ ಕಲಿಸಿದರು. ತಂಗಿ ಸುಲ್ತಾನ್ ಬೀ ಅವರು ಹೇಳುವಂತೆ ೮ ನೇ ತರಗತಿವರೆಗೆ ಕಲಿತಿದ್ದಾರೆ.  ಕನ್ನಡ ನಾಡು ನುಡಿ, ಸಂಸ್ಕೃತಿಯ ಬಗ್ಗೆ ಅತೀವ ಕಾಳಜಿ ಪ್ರೀತಿಯ ಜತೆ ಗರಡಿ ಮನೆ ಜತೆ ವ್ಯಾಮೋಹ ಬೆಳೆಸಿಕೊಂಡು ಫೈಲ್ವಾನ್ ರಾಗಿ ಗಮನಸೆಳೆದರು.

ಕರ್ನಾಟಕ ಕ್ರಿಯಾ ಸಮಿತಿಯ ಸಕ್ರೀಯ ಕಾರ್ಯಕರ್ತರಾಗಿದ್ದ ರಂಜಾನ್‌ಸಾಬ್ ಹತ್ತು ಹಲವು ಕನ್ನಡ ಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಕನ್ನಡಿಗರ ಸತತ ಹೋರಾಟ, ಕನ್ನಡಪರ ಹೋರಾಟಗಳ ಫಲವಾಗಿ ಬಳ್ಳಾರಿ ಮೈಸೂರು ರಾಜ್ಯದಲ್ಲಿ ವೀಲಿನಗೊಳಿಸುವ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಳ್ಳಾರಿ ಮೈಸೂರು ರಾಜ್ಯದಲ್ಲಿ ವಿಲೀನವಾಯಿತೆಂಬ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡಿಗರಿಗೆ ಅತೀವ ಸಂತೋಷವಾಯಿತು.

ಅAದು ೩೦ನೇ ೧೯೫೩ ಸೆಪ್ಟಂರ‍್ತ್. ರಾತ್ರಿ ಸಂಭ್ರಮದಿAದ ಮರುದಿನವನ್ನು ಸ್ವಾಗತಿಸಲು ಕಾದಿದ್ದ ಬಳ್ಳಾರಿಯ ಜನತೆ ತೀವ್ರ ಆಘಾತದ ಸುದ್ಧಿಯನ್ನು ಕೇಳಬೇಕಾಯಿತು. ಕರ್ನಾಟಕ ಕ್ರಿಯಾ ಸಮಿತಿಯ ಸಕ್ರಿಯ ಸದಸ್ಯರಾಗಿದ್ದ ಪೈಲ್ವಾನ್ ರಂಜಾನ್ ಸಾಬ್ ಅವರು ಕಟ್ಟಾ ಕನ್ನಡ ಪ್ರೇಮಿ. ಕನ್ನಡ ವೆಂದರೆ ಎಲ್ಲಿಲ್ಲದ ಹರ್ಷ. ಬಳ್ಳಾರಿ ಮೈಸೂರು ರಾಜ್ಯದಲ್ಲಿ ವಿಲೀನ ಸಮಾರಂಭದ ಸಭಾ ಮಂಟಪದ ರಚನೆ ಮತ್ತು ಉಸ್ತುವಾರಿಯ ಜವಾಬ್ದಾರಿಯನ್ನು ಹೊತ್ತು ರಾತ್ರಿ ಕೆಲಸ ಮಾಡುತ್ತಿದ್ದರು. ಈ ಸಮಾರಂಭಕ್ಕೆ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಬರುವವರಿದ್ದರು. ಸಭಾಮಂಟಪ ಅಥವಾ ಪೆಂಡಾಲ್‌ಅನ್ನು ಸುಟ್ಟು ಹಾಕಲು ಅನ್ಯಭಾಷೆಯ ದುಷ್ಕರ್ಮಿಗಳು ಸಂಚು ನಡೆಸುತ್ತಿದ್ದಾರೆ ಎಂಬ ಸುದ್ದಿಯನ್ನು ಅರಿತಿದ್ದ ರಂಜಾನ್ ಸಾಬ್ ತಾವೇ ಸಭಾ ಮಂಟಪದ ಕಾವಲನ್ನು ಬಿಗಿಗೊಳಿಸಿದರು. ತಾವೇ ಖುದ್ದಾಗಿ ಕಾವಲು ಕಾಯುವುದಕ್ಕಾಗಿ ಪಣತೊಟ್ಟು ನಿಂತರು. ¸. ೩೦ರ ರಾತ್ರಿ ಕೆಲ ದುಷ್ಕರ್ಮಿಗಳು ಮಂಟಪದಲ್ಲೇ ಮಲಗಿದ್ದ ರಂಜಾನ್ ಸಾಹೇಬರ ಮುಖ ಹಾಗೂ ಮೈ ಮೇಲೆ ಬೀಳುವಂತೆ ಆ್ಯಸಿಡ್ ತುಂಬಿದ ಬಲ್ಬನ್ನೆಸಿದರು. ಆ್ಯಸಿಡ್  ಬಿದ್ದರೂ ಧೃತಿಗೆಡದೆ ಜೈ ಕರ್ನಾಟಕ ಜೈ ಕನ್ನಡ ಎಂದು ಘೋಷಣೆಗಳನ್ನು ಕೂಗುತ್ತಾ ಹಾಗೆಯೇ ಆ್ಯಸಿಡ್‌ನಿಂದ ಮೈ, ಮುಖ ಸುಟ್ಟುಕೊಂqರರೂ  ರಂಜಾನ್ ಸಾಹೇಬರು ದುಷ್ಕರ್ಮಿಗಳನ್ನು ಹಿಡಿಯಲು ಹಿಂದೇ ಓಡಿ ಹೋಗಿ ವಿಫಲವಾದರು. ತೀವ್ರ ಸುಟ್ಟ ಗಾಯದಿಂದಾಗಿ  ಚಿಕಿತ್ಸೆಗೆ ದಾಖಲಾದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂರು ದಿನಗಳ ನಂತರ ದಿ. ೦೨-೧೦-೧೯೫೩ರಂದು ಕನ್ನಡಕ್ಕಾಗಿ ಹೋರಾಡಿದ ಜೀವ ರಂಜಾನ್ ಸಾಬ್ ಅವರು ಹುತಾತ್ಮರಾದರು.  ರಂಜಾನ್‌ಸಾಬ್‌ನನ್ನು ನೋಡಲು ಎಲ್ಲೆಲ್ಲಿಂದಲೋ ಜನರು ಎತ್ತಿನ ಬಂಡಿ ಕಟ್ಟಿಕೊಂಡು ಬಂದು ನೋಡಿ ಹೋದರು.

ಳ್ಳಾರಿಯು ಮೈಸೂರಿನಲ್ಲಿ ವಿಲೀನವಾಯಿತು ಎಂದು ಕನ್ನಡಿಗರಿಗೆ ಸಂತಸವಿದ್ದರೂ ಅಂದು ರಂಜಾನ್ ಸಾಬ್ ಅವರ ಸಾವು ಅತೀವ ದುಃಖವನ್ನುಂಟು ಮಾಡಿತ್ತು.

ಬಾಚಿಗೊಂಡನಹಳ್ಳಿಯ ಕವಿ ಕೆ.ವಿರೂಪಾಕ್ಷಗೌಡರು ರಂಜಾನ್ ಸಾಹೇಬರ ಕನ್ನಡ ಪ್ರೇಮವನ್ನು ನೆನಪಿಸಲು ಕೋಚೆ ಅವರ ‘ರೈತ’ (೦೨-೧೦-೧೯೫೩) ಪತ್ರಿಕೆಗೆ ಒಂದು ಕವನ ಬರೆದು ಶ್ರದ್ದಾಂಜಲಿ ಅರ್ಪಿಸಿದ್ದರು.

 

 

 

‘ಮಕ್ಕಳಿಲ್ಲದ ಮನೆಯು ಒಕ್ಕಲಿಲ್ಲದ ಊರು

ಪಕ್ಷಿ ಇಲ್ಲದ ವನವು’ – ಏಕೆ ಬೇಕಿವು ಎಲ್ಲ ?

ಅಂತೆಯೇ ಬಳ್ಳಾರಿ ಬಳಲುತಿದೆ ಎಲ್ಲೆಲ್ಲೂ

ನಿನ್ನ ಕಳಕೊಂಡಿAದು ಕನ್ನಡದ ಕಲಿವೀರ.

……………………………………………..

ನೀನರದೆ ? ನಿನ್ನ ಬೆನ್‌ಬಲವಿಲ್ಲದಿರೆ, ಮಲ್ಲ?

ದೇವರೊಲ್ಲನು ನಿನ್ನ ನಾಮ ನುಡಿಯದ ಜನರ

ರಂಜಾನ್ ! ನಮಿಪೆವಿದೋ ಕನ್ನಡಿಗ ಕಲಿ ಭೂಪ !

 

………………………………………………..

ಮೈಸೂರೊಡನೆಮ್ಮ ನಿಲಿಸಿ ಕಣ್ಮರೆಯಾದೆ

ತುಂಬುನಾಡಲಿ ಇಂದು ನೀನಿಲ್ಲ, ಅದೇ ಚಿಂತೆ.

 

ಕನ್ನಡ ನಾಡಿನಲ್ಲಿಯೇ ಬಳ್ಳಾರಿಯನ್ನು ಉಳಿಸಲು ಹೋರಾಡಿ ವೀರ ಮರಣವನ್ನಪ್ಪಿದ ರಂಜಾನ್ ಸಾಬ್ ಅವರು ಕನ್ನಡಿಗರ ಮನದಲ್ಲಿ ಧೃವತಾರೆಯಾಂತೆ ಮಿನುಗುತ್ತಿದ್ದಾರೆ.

ರಂಜಾನ್ ಸಾಬ್  ಪ್ರತಿಮೆ:

ಪೈಲ್ವಾನ್ ಪಿಂಜಾರ್ ರಂಜಾನ್ ಸಾಹೇಬ್ ಅವರ ಹೆಸರು ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಳ್ಳಾರಿಯಲ್ಲಿ ಪ್ರಮುಖ ರಸ್ತೆಗೆ ಇವರ ಹೆಸರನ್ನು ನಾಮಕರಣ ಮಾಡಬೇಕು. ಜೊತೆಗೆ ಅವರ ಪುತ್ಥಳಿಯನ್ನು ಸ್ಥಾಪಿಸಿ ಪ್ರತಿ ವರ್ಷ ಅವರಿಗೆ ಗೌರವ ಸಮರ್ಪಿಸುವ ಕಾರ್ಯ ಆಗಬೇಕು ಎನ್ನುವುದು ಕನ್ನಡಿಗರ ಒತ್ತಾಸೆಯಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆ ಕನ್ನಡಿಗರ ಮನವಿಗೆ ಸ್ಪಂದಿಸಿ ನಗರದಲ್ಲಿ ರಂಜಾನ್ ಸಾಬ್ ಪ್ರತಿಮೆ ಪ್ರತಿಷ್ಪಾಪಿಸಲು ಭರವಸೆ ನೀಡಿ ೯- ೧೦ ವರ್ಷಗಳಾದರೂ ಇನ್ನೂ ಪುತ್ಥಳಿ ಸ್ಥಾಪಿಸದೇ ಇರುವುದು ನೋವಿನ ಸಂಗತಿ.

ಬೆAಗಳೂರು ಮಹಾನಗರದಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಈ ಹಿಂದೆಯೇ ರಾಜ್ಯದ ಸಾಹಿತಿಗಳ, ಹೋರಾಟಗಾರರ, ರಾಷ್ಟç ನಾಯಕರ, ಹುತಾತ್ಮರಾದವರ ಹೆಸರುಗಳನ್ನು ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಿಗೂ ನಾಮಕರಣ ಮಾಡಿರುವುದು ಬೆಂಗಳೂರಿಗೆ ಭೇಟಿ ನೀಡಿದ ಎಲ್ಲರಿಗೂ ಗೋಚರಿಸುತ್ತದೆ. ಈ ರೀತಿಯಲ್ಲಿ ಬಳ್ಳಾರಿ ನಗರದಲ್ಲಿಯೂ ರಂಜಾನ್ ಸಾಬ್ ಅವರ ಹೆಸರನ್ನು ಕಮ್ಮಿಂಗ್ ರಸ್ತೆಗೆ ನಾಮಕರಣ ಮಾಡಬೇಕು ಎಂಬುದು ಕನ್ನಡಿಗರ ಒತ್ತಾಸೆಯಾಗಿದೆ.

*****

 

ಸಿ. ಮಂಜುನಾಥ್

ಹಿರಿಯ ಪತ್ರಕರ್ತರು,

ಮೊದಲನೇ ಕ್ರಾಸ್, ಸೂರ್ಯ ಕಾಲೋನಿ

ಕಂಟೋನ್‌ಮೆAಟ್,

ಳ್ಳಾರಿ-೫೮೩೧೦೪

 

 

 

 

 

Get real time updates directly on you device, subscribe now.

Leave A Reply

Your email address will not be published.

error: Content is protected !!