KMF ಗೆ ಕೆ.ರಾಘವೇಂದ್ರ ಹಿಟ್ನಾಳ್ ಅವಿರೋಧವಾಗಿ ಆಯ್ಕೆ
ಕರ್ನಾಟಕ ಹಾಲು ಮಹಾಮಂಡಳಿಗೆ ರಾಬಕೊವಿ ಹಾಲು ಉತ್ಪಾದಕ ಮಂಡಳಿ ವತಿಯಿಂದ ಡೆಲಿಗೆಟ್(ಪ್ರತಿನಿಧಿ)ಯಾಗಿ ರಾಬಕೊವಿ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ. ರಾಘವೇಂದ್ರ ಹಿಟ್ನಾಳ ಆಯ್ಕೆಯಾಗಿದ್ದಾರೆ

Kmfನಿಂದ ಕರ್ನಾಟಕ ಹಾಲು ಒಕ್ಕೂಟದ ಮಂಡಳಿಗೆ ನಿರ್ದೇಶಕರಾಗಿ ಕೆ.ರಾಘವೇಂದ್ರ ಹಿಟ್ನಾಳ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಕೆಎಂಎಫ್ ಕಛೇರಿಯ ಸಭಾಂಗ ಣದಲ್ಲಿ ಇಂದು ಬಳ್ಳಾರಿ ಕೆಎಂಎಫ್‌ನ ಅಧ್ಯಕ್ಷ ಕೆ.ರಾಘವೇಂದ್ರ ಹಿಟ್ನಾಳ್‌ರವರ ಅಧ್ಯಕ್ಷತೆಯಲ್ಲಿ ಜರುಗಿದ ನಿರ್ದೇಶಕರುಗಳ ಸಾಮಾನ್ಯ ಸಭೆಯಲ್ಲಿ ಬಳ್ಳಾರಿ ಕೆಎಂಎಫ್‌ನಿಂದ ರಾಜ್ಯ ಕೆಎಂಎಫ್‌ಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಬಗ್ಗೆ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಿ, ಸಭೆಯಲ್ಲಿದ್ದ ನಿರ್ದೇಶಕರೆಲ್ಲರ ಸರ್ವ ಸಮ್ಮತಿಯ ಮೇರೆಗೆ ಕೆ.ರಾಘವೇಂದ್ರ ಹಿಟ್ನಾಳ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಸಭೆಯಲ್ಲಿ ಬಳ್ಳಾರಿ ಕೆಎಂಎಫ್‌ನ ಉಪಾಧ್ಯಕ್ಷ ಎನ್.ಸತ್ಯನಾರಾಯಣ, ನಿರ್ದೇಶಕರುಗಳಾದ ಆಮರಗುಂಡಪ್ಪ, ಕೃಷ್ಣಾರೆಡ್ಡಿಗಲಬಿ, ಎನ್.ಸೀತಾರಾಮಲಕ್ಷ್ಮಿ, ಭೀಮನಗೌಡ, ಕಮಲವ್ವ, ಪ್ರವೀಣ್ ಕುಮಾರ್, ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.