ಬಲ್ದೊಟ ನಂತರ ಮತ್ತೊಂದು ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಗಿಣಿಗೇರ ನಾಗರೀಕ ಹೋರಾಟ ಸಮಿತಿ ವಿರೋಧ
ಕೊಪ್ಪಳದ ಸಮೀಪದಲ್ಲಿಯೇ ಬಲ್ದೊಟ ನಂತರ ಮತ್ತೊಂದು ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಗಿಣಿಗೇರ ನಾಗರೀಕ ಹೋರಾಟ ಸಮಿತಿ ವಿರೋಧ
.
ಕೊಪ್ಪಳ ತಾಲೂಕಿನ ಗಿಣಿಗೇರಾ, ಅಲ್ಲಾನಗರ,ಬೇವಿನಳ್ಳಿ, ಕನಕಾಪುರ,ಹಿರೇಬಗನಾಳ, ಹಿರೇಕಾಸನಖಂಡಿ, ಹಾಲವರ್ತಿ, ಹೀಗೆ ಸಾಲು ಸಾಲು ಊರಿಗೆ ಹೊಂದಿಕೊಂಡೆ ಜನವಸತಿ ಪ್ರದೇಶದಲ್ಲೇ ಬೃಹತ್ಕಾರ್ಖಾನೆಗಳಿವೆ. ಬಲ್ದೊಟ ನಂತರ ಮತ್ತೊಂದು ಕಾರ್ಖಾನೆಯನ್ನು ಆಹ್ವಾನ ಮಾಡುತ್ತಿರುವುದು ಗಾಯದ ಮೇಲೆ ಬರೇ ಎಳೆದಂತಾಗುತ್ತದೆ.
ಭವಿಷ್ಯದಲ್ಲಿ ತುಂಗಭದ್ರಾ ನೀರಿಗೆ ಈ ಕಂಪನಿಗಳ ಮುತ್ತಿಗೆ ಹಾಕಿ ಶುದ್ಧ ಕುಡಿಯುವ ನೀರನ್ನು ಗಬ್ಬು ಮಾಡಿ ತಮ್ಮ ಲಾಭ ಗಳಿಸಿಕೊಳ್ಳಲು ರೈತರ, ಹಳ್ಳಿಗಳ ಜನರ ಬದುಕನ್ನು ಸರ್ವನಾಶಮಾಡುತ್ತಿರುವ ಈ ಕಂಪನಿಗಳನ್ನು ಜನ ಉಗ್ರವಾಗಿ ವಿರೋಧಿಸಬೇಕಾಗಿದೆ.
ಈ ಕಂಪನಿಗಳಿಗೆ ಪಲವತ್ತಾದ ಭೂಮಿ, ಶುದ್ಧ ನೀರು, ಸಾರಿಗೆ ವ್ಯವಸ್ಥೆ, ಕಚ್ಚ ವಸ್ತುಗಳು, ಚೀಪ್ ಲೇಬರ್ ಇಲ್ಲಿ ಸಿಗುತ್ತಿರುವುದುದರಿಂದ ಒಂದರ ಮೇಲೊಂದಂತೆ ಈ ಕಾರ್ಖಾನೆಗಳು ಹೆಜ್ಜೆ ಇಟ್ಟು ಈಗ ಸರ್ಕಾರವನ್ನೇ ಕೊಂಡುಕೊಳ್ಳುವ ಮಟ್ಟಿಗೆ ಬೆಳೆದು ನಿಂತಿವೆ..
ನಮ್ಮ ಜನಪ್ರತಿನಿದಿಗಳು ಜನರ ಮುಂದೆ ಒಂದು ಮುಖ ಈ ಕಂಪನಿಗಳಿಗೆ ಇನ್ನೊಂದು ಮುಖ ಅಂದರೆ ಮುಖವಾಡಗಳನ್ನೇ ಬದಿಲಿಸುವ ಚಾಳಿ ಮೈಗೂಡಿಸಿಕೊಂಡಿದ್ದಾರೆ.
ಈ ಜನಪ್ರತಿನಿದಿಗಳಿಗೆ ಜನರ ಆರೋಗ್ಯ, ಪರಿಸರ ಮಾಲಿನ್ಯ,ರೈತರ ಕೃಷಿ ನಾಶ, ತುಂಗಭದ್ರಾ ಮಾಲಿನ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲಾ. ಇವರಿಗೆ ಮತ್ತು ಇವರ ಹಿಂಬಾಲಕರಿಗೆ ಬೇಕಾಗಿರುವುದು ಕಾಂಟ್ರಾಕ್ಷರ್ ಕೆಲಸ ಅದರಿಂದ ಬರುವ ಲಾಭದಾಸೆ ಬಿಟ್ಟು ಬೇರೇನಿಲ್ಲ.
ಈಗ ಮತ್ತೊಂದಿಷ್ಟು ಕೈಗಾರಿಕೆಗಳನ್ನು ಕೊಪ್ಪಳಕ್ಕೆ ಇನ್ವೆಸ್ಟ್ ಮಾಡಲು ಅವಕಾಶ ಮಾಡಿಕೊಟ್ಟ ಕೈಗಾರಿಕಾ ಸಚಿವರಿಗೆ ಈ ಭಾಗದ ಜನರ ಸಮಸ್ಯೆಗಳು ಬೇಡವಾಗಿವೆ.ಈ ವಿಷಯದಲ್ಲಿ ಕೊಪ್ಪಳ ಶಾಸಕರು ಜಾಣ ಮೌನವಾಗಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ ಯಾವುದೇ ಹೊಸ ಕಾರ್ಖಾನೆ ಹಾಕಲು ಗಿಣಿಗೇರಾ ನಾಗರೀಕ ಹೋರಾಟ ಸಮಿತಿ ಬಿಡುವುದಿಲ್ಲ. ಈ ಮಾಲಿನ್ಯಕಾರಕ ಕೈಗಾರಿಕೆಗಳು ಸಾಕು,ಜನರ ಆರೋಗ್ಯ, ಶುದ್ಧ ಪರಿಸರ , ಶುದ್ಧ ಗಾಳಿ, ಶುದ್ಧ ನೀರು ನಮ್ಮೆಲ್ಲರ ಹಕ್ಕು.ಕಾರ್ಖಾನೆ ಪ್ರಾರಂಭಿಸಲು ಅನುಮತಿ ನೀಡಿದರೆ ಉಗ್ರವಾದ ಜನಚಳುವಳಿಯನ್ನು ಗಿಣಿಗೇರಾ ನಾಗರೀಕ ಹೋರಾಟ ಸಮೀತಿಯಿಂದ ಮಾಡಲಾಗುತ್ತದೆ.
ಈ ಹೋರಾಟಕ್ಕೆ ಕೊಪ್ಪಳ ಗಿಣಿಗೇರಾ, ಅಲ್ಲಾನಗರ ಕನಕಾಪುರ, ಬೇವಿನಹಳ್ಳಿ, ಹಿರೇಬಗನಾಳ, ಹಿರೇಕಾಸನಕಂಡಿ,ಲಾಚನಕೇರಿ, ಕುಣಿಕೇರಿ, ಬೆಳವಿನಾಳ, ಮುಂತಾದ ಕಾರ್ಖಾನೆ ಬಾದಿತ ಜನರು ರಾಜಿರಹಿತ ಹೋರಾಟಕ್ಕೆ ಮುಂದಾಗಬೇಕೆಂದು ಗಿಣಿಗೇರಾ ನಾಗರೀಕ ಹೋರಾಟ ಸಮಿತಿ ಮುಖಂಡರಾದ ಶರಣು ಗಡ್ಡಿ, ಮಂಗಳೇಶ ರಾತೋಡ್, ಹನುಮಂತ ಕಟೀಗಿ, ಸುರೇಶ ಕಲಾಲ್ ಅವರು ಮಾನವಿ ಮಾಡಿದ್ದಾರೆ.
Comments are closed.