ಸಹಕಾರಿ ಬಲವರ್ಧನೆಗೆ ಕೈಜೋಡಿಸಿ : ಡಾ.ಕೆ.ಎಂ.ಸೈಯದ್

ಕೊಪ್ಪಳ : ಶೇರುದಾರರು, ಠೇವಣಿದಾರರು ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ಬಲವರ್ಧನೆಗೆ ಕೈಜೋಡಿಸಿ ಎಂದು ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ಅಧ್ಯಕ್ಷ ಡಾ.ಕೆ.ಎಂ.ಸೈಯದ್ ಹೇಳಿದರು.
ಅವರು ಗುರುವಾರದಂದು ನಗರದ ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನ ಕಚೇರಿಯಲ್ಲಿ 11ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬಡವರ, ಹಿಂದುಳಿದವರ, ಸಣ್ಣಪುಟ್ಟ ವ್ಯಾಪಾರಸ್ಥರು ಆರ್ಥಿಕವಾಗಿ ಸದೃಢಗೊಳ್ಳಲು ನಮ್ಮ ಸಹಕಾರಿ ಬ್ಯಾಂಕ್ ಸದಾ ಬದ್ಧ, ಇಂದು ಸಹಕಾರಿ ಸಂಘದಲ್ಲಿ ಬಹಳ ಸ್ಪರ್ಧಾತ್ಮಕತೆ ಇದ್ದು ನಮ್ಮ ಸಹಕಾರಿ ಬ್ಯಾಂಕ್ ಪ್ರತಿ ವರ್ಷ ಲಾಭದಾಯದತ್ತ ಸಾಗಿದ್ದು ನಿಮ್ಮೆಲ್ಲರ ಸಹಾಯ ಸಹಕಾರ ಎಂದ ಅವರು ಸಾಲ ಪಡೆದು ಆರ್ಥಿಕವಾಗಿ ಸದೃಢಗೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡುವಂತೆ ತಿಳಿಸಿದರು.
ಬ್ಯಾಂಕಿನ ಸಿಇಓ ಎಫ್.ಎ.ನೂರಬಾಷಾ ಅವರು ವಾರ್ಷಿಕ ವರದಿಯನ್ನು ವಾಚಿಸಿ ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ಯಶಸ್ವಿಯಾಗಿ12ನೇ ವರ್ಷದತ್ತ ನಿಮ್ಮೆಲ್ಲರ ಸಹಕಾರದಿಂದ ಅಭಿವೃದ್ಧಿಯಿಂದ ಮುನ್ನಡೆಯುತ್ತಿದ್ದು ಸಂತಸ ತಂದಿದೆ ಎಂದರು.
ಬ್ಯಾಂಕಿನೊಂದಿಗೆ ಉತ್ತಮ ವ್ಯವಹಾರ ಮಾಡಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಗವಿಸಿದ್ದಪ್ಪ ಆರೇರ, ನಿರ್ದೇಶಕರಾದ ಪೀರ್ ಸಾಬ್ ಬೈರಾಪುರ, ಶೇಖರಪ್ಪ ಬಾವಿಮನಿ, ಖಾಸಿಂ ಮಲಿ ಹಗಲದಿವಟಗಿ, ತಿಪ್ಪಣ್ಣ ಭಜಂತ್ರಿ, ಮಂಜಪ್ಪ ಹಿಂದಲಮನಿ, ಸೈಯದ್ ಶಮುಸು ತಬರೇಜ್ ಖಾಜಿ, ಬ್ಯಾಂಕಿನ ಕಂಪ್ಯೂಟರ್ ಆಪರೇಟರ್ ಹಾಗೂ ಪಿಗ್ಮಿ ಏಜೆಂಟ್ ಅನ್ವರ್ ಮುದುಗಲ್ ಸೇರಿದಂತೆ ಬ್ಯಾಂಕಿನ ಶೇರುದಾರು, ಠೇವಣಿದಾರರು, ಬ್ಯಾಂಕಿನ ಗ್ರಾಹಕರು ಉಪಸ್ಥಿತರಿದ್ದರು.
Comments are closed.