ಕಿರ್ಲೋಸ್ಕರ್ ಫೆರಸ್‌ಗ್ರಾಮೀಣಾಭಿವೃದ್ಧಿಟ್ರಸ್ಟ್ ವತಿಯಿಂದ ಆರೋಗ್ಯತಪಾಸಣಾ ಶಿಬಿರ

Get real time updates directly on you device, subscribe now.

ಕೊಪ್ಪಳ : ಹುಬ್ಬಳ್ಳಿಯ ಪ್ರತಿಷ್ಠಿತ ವಿಹಾನ್ ಹೃದಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೊಪ್ಪಳದ ಕೆ ಎಸ್‌ಆಸ್ಪತ್ರೆ, ಕೊಪ್ಪಳದ ರೆಡ್‌ಕ್ರಾಸ್ ಸಂಸ್ಥೆ, ಸರ್ವೋದಯ ಸಮಗ್ರಗ್ರಾಮೀಣಅಭಿವೃದ್ಧಿ ಸಂಸ್ಥೆ ಹಾಗೂ ಕೆಎಫ್‌ಐಎಲ್‌ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಭಾಗಿತ್ವದಲ್ಲಿ ದಿ ೧೮ರಂದುಬೆಳಗ್ಗೆ ೦೯ ಘಂಟೆಗೆ ಕೊಪ್ಪಳದ ಮಧುಶ್ರೀ ಗಾರ್ಡ್ನ್‌ನಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಹೃದಯ ತಪಾಸಣೆಗೆ ೩೦ ರಿಂದ ೪೫ ವಯಸ್ಸಿನವರು (ಮೊದಲ ೩೦೦ ಜನರಿಗೆ ಮಾತ್ರ ಸೀಮಿತ) ಹಾಗೂ ಮೂಳೆ ಸಾಂದ್ರತೆಯ ತಪಾಸಣೆಯನ್ನು೪೫ ವರ್ಷ ಮೇಲ್ಪಟ್ಟವರಿಗೆ (ಮೊದಲ ೨೫೦ಜನರಿಗೆ ಮಾತ್ರ ಸೀಮಿತ) ಮಾಡಲಾಗುವುದು. ಅಲ್ಲದೇ ರಕ್ತದಾನ ಶಿಬಿರವನ್ನು (೧೮ ವರ್ಷ ಮೇಲ್ಪಟ್ಟವರಿಗೆ) ಸಹ ಆಯೋಜಿಲಾಗಿದೆ ಎಂದು ಕೆಫ್‌ಐಎಲ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ಪಿ. ನಾರಾಯಣರವರು ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು
ಕಿರ್ಲೋಸ್ಕರ್ ಫೆರಸ್ ಇಂಡಸ್ಟಿçಸ್ ಲಿಮಿಟೆಡ್ ಕಾರ್ಖಾನೆಯು ಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶವಾದ ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯ ಹತ್ತಿರ ೧೯೯೩ ರಲ್ಲಿ ಸ್ಥಾಪಿನೆಗೊಂಡಿದ್ದು. ಪ್ರಮುಖವಾಗಿ ಬೀಡುಕಬ್ಬಿಣ ಮತ್ತು ಬೂದುಕಬ್ಬಿಣದ ಎರಕಗಳನ್ನು ಉತ್ಪಾದಿಸುತ್ತಿದೆ.ಈ ಉತ್ಪನ್ನಗಳು ಮುಖ್ಯವಾಗಿ ವಾಹನ ತಯಾರಿಕಾ ವಲಯಕ್ಕೆ ಬಿಡಿಭಾಗಗಳನ್ನು ಪೂರೈಸಲ್ಪಡುತ್ತದೆ. ಕಾರ್ಖಾನೆಯ ಸ್ಥಾಪನೆಯಾದಾಗಿನಿಂದಲೂ ಹತ್ತಿರವಿರುವ ಬೇವಿನಹಳ್ಳಿ ಗ್ರಾಮ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿದ್ದು ಕಂಪನಿಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯನ್ನು (ಅSಖ) ಕ್ರಮಬದ್ದವಾಗಿ ನೆಡೆಸಲು ೨೦೦೧ ರಲ್ಲಿಕಿರ್ಲೋಸ್ಕರ್ ಫೆರಸ್‌ಗ್ರಾಮೀಣಾಭಿವೃದ್ಧಿಟ್ರಸ್ಟ್ನ್ನು ಸ್ಥಾಪಿಸಲಾಗಿದ್ದು ಈ ಟ್ರಸ್ಟ್ನ ಮುಖಾಂತರ ಗ್ರಾಮದ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಇವುಗಳಿಗೆ ಒತ್ತುಕೊಟ್ಟು ವಾರ್ಷಿಕ ಯೋಜನೆಯನ್ನು ರೂಪಿಸಿ ಆದರಂತೆ, ಕೆಲಸಗಳನ್ನು ಕೈಗೆತ್ತಿಗೆಕೊಳ್ಳುತ್ತಿದೆ ಈ ಆರೋಗ್ಯತಪಾಸಣಾ ಶಿಬಿರದಲ್ಲಿ ಕೊಪ್ಪಳ ಜಿಲ್ಲೆಯ ಸುತ್ತ-ಮುತ್ತಲಿನ ಗ್ರಾಮ ಹಾಗೂ ನಗರದ ನಿವಾಸಿಗಗಳಿಗೆ ಅನುಕೂಲವಾಗಲೆಂದುಕಿರ್ಲೋಸ್ಕರ್‌ಫೆರಸ್‌ಸAಸ್ಥೆಯು ಆರೋಗ್ಯ ಶಿಬಿರವನ್ನು ಅಯೋಜಿಸಲಾಗಿದ್ದ್ಲುಎಲ್ಲಾ ಸಾರ್ವಜನಿಕರು ಈ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೆಎಫ್‌ಐಎಲ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ಪಿ. ನಾರಾಯಣರವರು ಮನವಿ ಮಾಡಿಕೊಂಡಿರುತ್ತಾರೆ.

ಹೆಚ್ಚಿನ ವಿವರಕ್ಕಾಗಿ ಮತ್ತು ಹೆಸರು ನೊಂದಾಯಿಸಲು ಈ ದೂರವಾಣಿಗೆ ಸಂಖ್ಯೆಗೆ . ೮೧೨೩೦೪೫೩೪೫, ೯೪೪೯೬೧೩೪೨೫ ಮತ್ತು ೯೪೮೨೮೧೩೦೩೮. ಸಂಪರ್ಕಿಸಲು ಕೋರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!