ರೇಣುಕಾ ಕೋಡಗುಂಟಿ ಅವರಿಗೆ, ದತ್ತಿನಿಧಿ ಪ್ರಶಸ್ತಿ

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ರೇಣುಕಾ ಕೋಡಗುಂಟಿ ಅವರ ” ಚಿಗುರೊಡೆದ ಬೇರು” ಎಂಬ ಕಥಾ ಸಂಕಲನಕ್ಕೆ, ಕರ್ನಾಟಕ ಲೇಖಕಿಯರ ಸಂಘದ 2024 ನೇ ಸಾಲಿನ ” ತ್ರಿವೇಣಿ ದತ್ತಿನಿಧಿ” ಪ್ರಶಸ್ತಿ ಲಭಿಸಿದೆ. ಇದೆ ತಿಂಗಳು ಅಂದರೆ ಸೆಪ್ಟೆಂಬರ್ 13 ರಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್. ಎಲ್. ಪುಪ್ಷ ಅವರು ತಿಳಿಸಿದ್ದಾರೆ..
” ಚಿಗುರೊಡೆದ ಬೇರು ” ಕೃತಿಯು ರೇಣುಕಾ ಕೋಡಗುಂಟಿ ಅವರ ಎರಡನೆ ಕಥಾ ಸಂಕಲನ ವಾಗಿದೆ. ಮೊದಲ ಕಥಾ ಸಂಕಲನವಾದ ” ನಿಲುಗನ್ನಡಿ” ಕೃತಿಯೂ ಕೂಡ ಹಲವಾರು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈಗ ಎರಡನೆ ಕಥಾ ಸಂಕಲನಕ್ಕೂ ಬಹುಮಾನ ಬಂದಿರುವುದು ತುಂಬಾ ಖುಷಿಯನ್ನು ಉಂಟು ಮಾಡಿದೆ ಎಂದು ರೇಣುಕಾ ಕೋಡಗುಂಟಿ ಅವರು ಸಂತಸವನ್ನು ಹಂಚಿಕೊಂಡಿದ್ದಾರೆ.
ಪ್ರಶಸ್ತಿ ವಿಜೇತರಿಗೆ ಅಂದು ಫಲಕ ಮತ್ತು ದತ್ತಿನಿಧಿ ಬಹುಮಾನವನ್ನು ನೀಡಿ ಗೌರವಿಸಲಾಗುವುದು.
Comments are closed.