ಸಂಸದ ರಾಜಶೇಖರ ಹಿಟ್ನಾಳ ರಿಗೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯಿಂದ ಮನವಿ

Get real time updates directly on you device, subscribe now.

Koppal  ಬೆಂಗಳೂರು- ಹೊಸಪೇಟೆವರೆಗೆ ಸಂಚರಿಸುವ ರೈಲು (ಗಾಡಿ ಸಂಖ್ಯೆ;56519/56520) ಕೊಪ್ಪಳ, ತಳಕಲ್, ಕುಕನೂರು, ಯಲಬುರ್ಗಾ ಮೂಲಕ ಕುಷ್ಟಗಿವರೆಗೂ ವಿಸ್ತರಿಸಬೇಕು. ಗಜೇಂದ್ರಗಡ, ಇಲಕಲ್ಲ, ಹುನಗುಂದ, ಹಿರೇವಂಕಲ‌ಕುಂಟ ಹಾಗೂ ಕುಷ್ಟಗಿ ತಾಲೂಕಿನ ರೈಲ್ವೆ ಪ್ರಯಾಣಿಕರ ಅನಕೂಲಕ್ಕಾಗಿ ನಿತ್ಯ ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಚರಿಸಲು ಕ್ರಮವಹಿಸುವ ಬಗ್ಗೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಹಿಟ್ನಾಳ ಗ್ರಾಮದಲ್ಲಿ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ, ಬಾಬು ಘೋರ್ಪಡೆ,ಪುರಸಭೆ ಸದಸ್ಯ ಜೆ.ಜೆ. ಆಚಾರ್, ಮಹಾಂತೇಶ ಮಂಗಳೂರು, ಆಶೀಫ ಡಲಾಯತ್ ಮತ್ತೀತರಿದ್ದರು.

Koppal MP Rajashekar Hitnal

Get real time updates directly on you device, subscribe now.

Comments are closed.

error: Content is protected !!