ಟೋಲ್ ಶುಲ್ಕ ರದ್ದುಪಡಿಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮನವಿ
ಕೊಪ್ಪಳ-ಹೊಸಪೇಟೆಗೆ ಹೋಗುವ ರಾಷ್ಟಿçÃಯ ಹೆದ್ದಾರಿಯ ದುರಸ್ತಿ ಕಾಮಗಾರಿ ಮುಗಿಯುವವರೆಗೆ ಎಲ್ಲಾ ವಾಹನಗಳಿಗೆ ರಸ್ತೆಯ ಟೋಲ್ ಶುಲ್ಕವನ್ನು ತೆಗೆದುಕೊಳ್ಳುವುದನ್ನು ರದ್ದುಪಡಿಸಬೇಕೆಂದು ಹಾಗೂ ಕೊಪ್ಪಳ ಪಾಸಿಂಗ್ ಇರುವ ಹಿಟ್ನಾಳ ಹಾಗೂ ಹಳ್ಳಿಗುಡಿ ಟೋಲ್ ಶುಲ್ಕವನ್ನು ತೆಗೆದುಕೊಳ್ಳಬಾರದೆಂದು ತಾವುಗಳು ರಾಷ್ಟಿçÃಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ
ಸಲ್ಲಿಸಲಾಯಿತು.
ಕೊಪ್ಪಳ-ಹೊಸಪೇಟೆಗೆ ಹೋಗುವ ರಾಷ್ಟಿçÃಯ ಹೆದ್ದಾರಿಯ ದುರಸ್ತಿ ಕಾಮಗಾರಿ ಮುಗಿಯುವವರೆಗೆ ಎಲ್ಲಾ ವಾಹನಗಳಿಗೆ ರಸ್ತೆಯ ಟೋಲ್ ಶುಲ್ಕವನ್ನು ತೆಗೆದುಕೊಳ್ಳುವುದನ್ನು ರದ್ದುಪಡಿಸಬೇಕೆಂದು ಹಾಗೂ ಕೊಪ್ಪಳ ಪಾಸಿಂಗ್ ಇರುವ ಹಿಟ್ನಾಳ ಹಾಗೂ ಹಳ್ಳಿಗುಡಿ ಟೋಲ್ ಶುಲ್ಕವನ್ನು ತೆಗೆದುಕೊಳ್ಳಬಾರದೆಂದು ತಾವುಗಳು ರಾಷ್ಟಿçÃಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಕೊಪ್ಪಳ-ಹೊಸಪೇಟೆ ಹೆದ್ದಾರಿ-೬೭ರ ಕಾಮಗಾರಿ ನಡೆಯುತ್ತಿದ್ದು, ಜನರಿಗೆ ವಾಹನ ಸಂಚರಿಸಲು ತುಂಬ ಕಷ್ಟಕರವಾಗುತ್ತಿದೆ ಮತ್ತು ಸಂಚಾರ ದಟ್ಟಣೆಯಿಂದ ಸಂಚಾರಕ್ಕೆ ಯೋಗ್ಯವಿಲ್ಲದ ಹೆದ್ದಾರಿಗಳಲ್ಲಿ ಪ್ರಯಾಣಿಕರನ್ನು ಟೋಲ್ ಪಾವತಿಸಲು ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ತಾವುಗಳು ತಕ್ಷಣ ಹಿಟ್ನಾಳ್ ಟೋಲ್ ಗೇಟ್ ಶುಲ್ಕ ಪಡೆಯುವುದನ್ನು ನಿಲ್ಲಿಸಲು ಆದೇಶಿಸಬೇಕು ಹಾಗೂ ಕೊಪ್ಪಳ ಪಾಸಿಂಗ್ ಇರುವ ವಾಹನಗಳಿಗೆ ಟೋಲ್ ಶುಲ್ಕ ಸಂಗ್ರಹಣೆ ವಿನಾಯಿತಿ ಇದ್ದು, ಆದರೆ ಟೋಲ್ ಸಂಗ್ರಹಣೆ ಮಾಡುತ್ತಾ ಇದ್ದಾರೆ. ಕೊಪ್ಪಳದಿಂದ ಹಿಟ್ನಾಳ್ ಟೋಲ್ ಪ್ಲಾಜಾ ಕೇವಲ ೨೧.೧ ಕಿಲೋಮೀಟರ್ ಇದೆ. ಮತ್ತು ಕೊಪ್ಪಳದಿಂದ ಹಳ್ಳಿಗುಡಿ ಟೋಲ್ ಪ್ಲಾಜಾ ೩೪.೪ ಕಿಲೋಮೀಟರ್ ಇದೆ. ಹಿಟ್ನಾಳ್ ಟೋಲ್ ಪ್ಲಾಜಾ ಮತ್ತು ಹಳ್ಳಿಗುಡಿ ಟೋಲ್ ಪ್ಲಾಜಾ ೬೫ ಕಿಲೋಮೀಟರ್ ವ್ಯಾಪ್ತಿಯಲ್ಲಿ ಇದ್ದು, ಒಂದೇ ರಸ್ತೆಯಲ್ಲಿ ೧೨ ಗಂಟೆಗಳ ಒಳಗೆ ಒಬ್ಬ ವ್ಯಕ್ತಿ ರೂ. ೧೫೦ ಟೋಲ್ ಶುಲ್ಕ ಏಕೆ ಪಾವತಿಸಬೇಕು. ತಕ್ಷಣ ಎರಡೂ ಟೋಲ್ ಪ್ಲಾಜಾಗಳಲ್ಲಿ ಕೊಪ್ಪಳ ಪಾಸಿಂಗ್ ಇರುವ ವಾಹನಗಳಿಗೆ ಟೋಲ್ ಶುಲ್ಕ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕೆಂದು ಕೊಪ್ಪಳ ಜಿಲ್ಲಾಧಿಕಾರಿಗಳಾದ ಸುರೇಶ್ ಇಟ್ನಾಳ್‌ರವರಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಆದಿಲ್ ಪಟೇಲ್, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರು ಮೊಹಮ್ಮದ್ ಅಲೀಮುದ್ದೀನ್ ಮತ್ತು ಜಿಲ್ಲಾ ಸದಸ್ಯರು ಅಹ್ಮದ್ ಖಾನ್ ಮತ್ತಿತರರು ಇದ್ದರು.
Comments are closed.