ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Get real time updates directly on you device, subscribe now.


ಕೊಪ್ಪಳ, ಸೆ-02, ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಆವಧಿ ಮುಗಿದ ಕಾರಣಸಂಘದ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾರಹಿತ ಕಾಲೇಜುಗಳ ಪ್ರಾಚಾರ್ಯರುಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಗಂಗಾತಿಯ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಬಸಪ್ಪ ನಾಗೋಲಿ ಇವರನ್ನು ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಶ್ರೀಮತಿ ಲಲಿತಮ್ಮ, ಸರಕಾರಿ ಪದವಿ ಪೂರ್ವ ಕಾಲೇಜು, ಹನುಮನಾಳ ಹಾಗೂ ಶ್ರೀ ಶಿವಾನಂದ ಮೇಟಿ, ಕೆಂದೊಳ್ಳಿ ರಾಮಣ್ಣ ಪದವಿ ಪೂರ್ವ ಕಾಲೇಜು, ಗಂಗಾವತಿ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ಬಸವರಾಜ, ವಿಜಯನಗರ ಪದವಿ ಪೂರ್ವ ಕಾಲೇಜು, ಮುನಿರಾಬಾದ್ ಹಾಗೂ ಸಹಕಾರ್ಯದರ್ಶಿಗಳಾಗಿ ಶ್ರೀ ಶಿವಾನಂದ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಕೊಪ್ಪಳ ಮತ್ತು ಕೋಶಾಧ್ಯಕ್ಷರನ್ನಾಗಿ ಶ್ರೀ ಶಾಂತಪ್ಪ ಟಿ.ಸಿ. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಗಂಗಾವತಿ ಇವರನ್ನು ಆಯ್ಕೆ ಮಾಡಲಾಯಿತು. ಪರೀಕ್ಷಾ ಸಂಚಾಲಕರಾಗಿ ಡಾ. ರವಿ ಎನ್. ಚೌವ್ಹಾಣ, ಶ್ರೀಮತಿ ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು, ಗಂಗಾವತಿ ಮತ್ತು ಶ್ರೀ ಪರಶುರಾಮ ಕೊಂಕತಿ, ಸರಕಾರಿ ಪದವಿ ಪೂರ್ವ ಕಾಲೇಜು, ಬನ್ನಿಕೊಪ್ಪ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಾಗಾರ ಸಂಚಾಲಕರಾಗಿ ಶ್ರೀ ರಾಜಾಶೇಖರ ಪಾಟೀಲ್, ಸರಕಾರಿ ಪದವಿ ಪೂರ್ವ ಕಾಲೇಜು, ಕಿನ್ನಾಳ ಮತ್ತು ಡಾ.ನಾಗಾಪುಷ್ಪಲತಾ, ಸರಕಾರಿ ಪದವಿ ಪೂರ್ವ ಕಾಲೇಜು, ಇರಕಲ್‌ಗಡಾ ಇವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಆಡಳಿತದ ಅನುಕೂಲಕ್ಕಾಗಿ ಶ್ರೀ ಮಂಜುನಾಥಸ್ವಾಮಿ, ಸರಕಾರಿ ಪದವಿ ಪೂರ್ವ ಕಾಲೇಜು, ಹೊಸಬಂಡಿಹರ್ಲಾಪುರ, ಶ್ರೀ ರವೀಂದ್ರ, ಜ್ಞಾನಬಂಧು ಪದವಿ ಪೂರ್ವ ಕಾಲೇಜು,ಭಾಗ್ಯನಗರ, ಶ್ರೀ ಅಮರೇಶ, ಎ.ಕೆ.ಆರ್.ಡಿ. ಪದವಿ ಪೂರ್ವ ಕಾಲೇಜು, ಶ್ರೀರಾಮನಗರ, ಶ್ರೀ ಲಕ್ಷ್ಷ್ಮಣಸಿಂಗ್ ವಗರನಾಳ, ಎಸ್.ಎಂ.ವಿ. ಪದವಿ ಪೂರ್ವ ಕಾಲೇಜು ತಾವರಗೇರಾ, ಶ್ರೀ ಎಸ್.ವಿ. ಹಿರೇಮಠ, ಶ್ರೀ ಶಶಿಧರಸ್ವಾಮಿ ಪದವಿ ಪೂರ್ವ ಕಾಲೇಜು, ತಾವರಗೇರಾ, ಶ್ರೀ ಭೀಮಶೇನ, ಎಸ್.ವಿ.ಸಿ. ಪದವಿ ಪೂರ್ವ ಕಾಲೇಜು,ಕುಷ್ಟಗಿ, ಶ್ರೀ ಗೋಪಾಲಕೃಷ್ಣ, ಸರಕಾರಿ ಪದವಿ ಪೂರ್ವ ಕಾಲೇಜು, ಬೇವೂರು, ಶ್ರೀ ಹನುಮಂತಪ್ಪ ಜಿ. ಸರಕಾರಿ ಪದವಿ ಪೂರ್ವ ಕಾಲೇಜು, ಹಿರೇಹರಳಹಳ್ಳಿ, ಶ್ರೀ ಗಂಗಾಧರ, ಮಂಜುನಾಥ ಪದವಿ ಪೂರ್ವ ಕಾಲೇಜು, ಯಲಬುರ್ಗಾ, ಶ್ರೀ ವಾಮದೇವ ಮೂರ್ತಿ, ಸರಕಾರಿ ಪದವಿ ಪೂರ್ವ ಕಾಲೇಜು, ಸಿದ್ದಾಪೂರ, ಶ್ರೀ ರಮೇಶ ಒಣರೊಟ್ಟಿ, ಸಿ.ಎಂ.ಎನ್. ಪದವಿ ಪೂರ್ವ ಕಾಲೇಜು, ಕಾರಟಗಿ, ಶ್ರೀ ಸುಭಾಶಚಂದ್ರ ಪಾಟೀಲ್, ಸರಕಾರಿ ಪದವಿ ಪೂರ್ವ ಕಾಲೇಜು, ನವಲಿ, ಶ್ರೀ ರಾಮು ಒಡೆಯರ್, ಬೆಸ್ಟ್ ಪದವಿ ಪೂರ್ವ ಕಾಲೇಜು, ಕನಕಗಿರಿ ಹಾಗೂ ಶ್ರೀ ಪಾಂಡುರಂಗ, ವಿದ್ಯಾನಂದ ಗುರುಕುಲ ಪದವಿ ಪೂರ್ವ ಕಾಲೇಜು, ಕುಕನೂರು ಇವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು. ಆಯ್ಕೆಯಾದ ನೂತನ ಪ್ರಾಚಾರ್ಯರ ಸಂಘದ ಪದಾಧಿಕಾರಿಗಳನ್ನುಜಿಲ್ಲಾ ಉಪನಿರ್ದೇಶಕರು, ಜಿಲ್ಲಾ ಪ್ರಾವಚಾರ್ಯ ಹಾಗೂ ಉಪನ್ಯಾಸಕ ಬಳಗ ಅಭಿನಂದಿಸಿದೆ.

Get real time updates directly on you device, subscribe now.

Comments are closed.

error: Content is protected !!