ರಸಪ್ರಶ್ನೆ ಸ್ಪರ್ಧೆ ಜ್ಞಾನ ವೃದ್ಧಿಗೆ ಸಹಕಾರಿ: ದಾವಲ್ ಸಾಬ ಬೆಟಗೇರಿ
ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದ ಹಿಂದೂ ಮಹಾ ಗಣಪತಿ ಕಾಮನಕಟ್ಟೆ ಗೆಳೆಯರ ಬಳಗದವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಲಾ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಗಣೇಶ ಚತುರ್ಥಿಯ ಅಂಗವಾಗಿ ಗ್ರಾಮದ ಎಲ್ಲಾ ಶಾಲೆಗಳ 6ನೇ,7ನೇ, 8ನೇ, 9ನೇ ಮತ್ತು 10ನೇ ತರಗತಿಯ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಸೇವಾ ವಿದ್ಯಾಲಯ ಶಾಲೆಯ ಮುಖ್ಯೋಪಾಧ್ಯಾಯ ದಾವಲ ಸಾಬ ಬೆಟಗೇರಿ ಹೇಳಿದರು.ನಂತರ ಮಾತನಾಡಿದ ಅವರು
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಮೈಗೂಡಿಸಿಕೊಂಡರೆ ಜ್ಞಾನ ವೃದ್ಧಿಯಾಗುತ್ತದೆ. ರಸಪ್ರಶ್ನೆ ಕಾರ್ಯಕ್ರಮಗಳು ನಮ್ಮ ಜ್ಞಾನದ ಮಟ್ಟ ಪರೀಕ್ಷಿಸಿಕೊಳ್ಳಲು ವೇದಿಕೆಯಾಗಿವೆ’ ಎಂದು ಹೇಳಿದರು.ನಂತರ ಮಾತನಾಡಿದ ಕಾಮನಕಟ್ಟೆ ಗೆಳೆಯರ ಬಳಗದ ಅಧ್ಯಕ್ಷ ವಿರೇಶ್ ಸಿದ್ದಾರೋಡ್ ಮಾತನಾಡಿ. ಪಠ್ಯದೊಂದಿಗೆ ದೈನಂದಿನ ವಿದ್ಯಮಾನ ಕುರಿತು ವಿದ್ಯಾರ್ಥಿಗಳು ಗಮನಹರಿಸಿದರೆ ಮಾತ್ರವೇ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಉನ್ನತ ಸ್ಥಾನಕ್ಕೇರಲು ಸಾಧ್ಯ. ಸಮಯ ನಿರ್ವಹಣೆಯು ಜೀವನದಲ್ಲಿ ಅತ್ಯಂತ ಮುಖ್ಯವಾದುದು. ಶಿಸ್ತಿನಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಮಾತ್ರವೇ ಯಶಸ್ಸು ಕಟ್ಟಿಟ್ಟಬುತ್ತಿ
ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡುವ ಬದಲು ಅಲ್ಲಿಯೇ ಸಾಕಷ್ಟು ವಿಚಾರಧಾರೆ ಕಲಿಯಲು ಅವಕಾಶವಿದೆ. ಅದರ ಸದ್ಬಳಕೆಗೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಮನ್ ಕಟ್ಟೆ ಗೆಳೆಯರ ಬಳಗದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಕೌಲ್ಪೇಟಿ ಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ್ ಬಣ್ಣದ ಮತ್ತು ರಾಧಾಕೃಷ್ಣ ಶಾಲೆಯ ಶಿಕ್ಷಕ ಬಳಗದವರು ಉಪಸ್ಥಿತರಿದ್ದರು.

Comments are closed.