ಗೊಂಡಬಾಳ | ಗಣೇಶೋತ್ಸವದಲ್ಲಿ ಉಚಿತ ಆರೋಗ್ಯ ತಪಾಸಣೆ

Get real time updates directly on you device, subscribe now.

ಕೊಪ್ಪಳ : ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ  ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಸಲಹೆ ಶಿಬಿರ ನಡೆಯಿತು.

ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘದ ಕಟ್ಟಡದಲ್ಲಿ
ಸನಾತನ ಮಹಾಮಂಡಳಿ, ಸ್ವಾಮಿ ವಿವೇಕಾನಂದ ಯುವಕ ಸಂಘ, ಅರುಣಾ ಫಾರ್ಮಸಿ ಹಾಗೂ ಕೊಪ್ಪಳದ ಪ್ರಶಾಂತ ಹಾಸ್ಪಿಟಲ್ ವತಿಯಿಂದ ಹಮ್ಮಿಕೊಂಡ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಈ ಶಿಬಿರ ಆಯೋಜಿಸಲಾಗಿತ್ತು.

ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದ 120ಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆಯ ಲಾಭ ಪಡೆದುಕೊಂಡರು. ಡಾ. ಅಭಿಜಿತ್ ಎಚ್. ಎಂ., ಡಾ. ಚನ್ನಕೇಶವ ಭಧ್ರಾಪುರ,
ಡಾ. ರಾಹುಲ್ ಇನಾಂದಾರ್, ಡಾ. ಪುನೀತ ಚಿಕ್ಕಮಠ ಇವರುಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡ ಕೆಲವರಿಗೆ ಅಗತ್ಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ನವೀನ್ ಕುಮಾರ್, ಸನಾತನ ಮಹಾಮಂಡಳಿ ಸಂಘದ ಸದಸ್ಯರಗಳಾದ ಶರಣು ಇರಬಿ, ಶರಣು ಮೆತಗಲ್ ಹಾಲೇಶ್ ಹಳ್ಳಿಕೇರಿ ಸ್ವಾಮಿ ವಿವೇಕಾನಂದ ಯುವಕ ಸಂಘದ ಸದಸ್ಯ ಭೀಮಜ್ಜ ಇರಬಿ, ಮುಖಂಡರಾದ ಸಿದ್ದನಗೌಡ ಕೆಂಚನ ಗೌಡ್ರು ಮಲ್ಲು ಹೊಸಪೇಟೆ ಸೇರಿದಂತೆ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು..

Get real time updates directly on you device, subscribe now.

Comments are closed.

error: Content is protected !!