ಮೌಲಾನಾ ಆಜಾದ್ ಶಾಲೆ ಅಲ್ಲೇ ಕಟ್ಟಡ ಕಟ್ಟಲು ಪಾಲಕರ ಹೋರಾಟ ಸಮಿತಿ ಪಟ್ಟು

ಕೊಪ್ಪಳ : ನಗರದ ಇಂದಿರಾ ಕ್ಯಾಂಟೀನ್ ಹಿಂದಿನ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಸರ್ದಾರ್ ಗಲ್ಲಿ ತೆರವುಗೊಳಿಸಲು ಶಾಸಕ ಕೆ.ರಾಘವೇಂದ್ರ ಬಿ.ಹಿಟ್ನಾಳ ಹೇಳಿದ್ದು. ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿ ಈಗ ಇದ್ದ ಜಾಗದಲ್ಲೇ ನೂತನ ಕಟ್ಟಡ ಕಟ್ಟಲು ಒತ್ತಾಯಿಸಿದರು.
ನಗರದ ಜಿಲ್ಲಾ ಆಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಕೆ.ರಾಘವೇಂದ್ರ ಬಿ.ಹಿಟ್ನಾಳ ಅವರಿಗೆ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿಯ ನಿಯೋಗದಲ್ಲಿ ನಗರ ಸಭೆ ಮಾಜಿ ಸದಸ್ಯ ಮಾನವಿ ಪಾಶಾ. ಹೋರಾಟ ಸಮಿತಿ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಕಿ. ಪ್ರಧಾನ ಕಾರ್ಯದರ್ಶಿ ಎಸ್.ಎ.ಗಫಾರ್ ಮುಂತಾದವರು ಭಾಗವಹಿಸಿದ್ದರು.
ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಎ.ಗಫಾರ್ ಮಾತನಾಡಿ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಸರ್ದಾರ್ ಗಲ್ಲಿ 2017ರಲ್ಲಿ ಪ್ರಾರಂಭವಾಗಿ 2020. 21 ರಲ್ಲಿ ಇಂದಿರಾ ಕ್ಯಾಂಟೀನ್ ಹಿಂದೆ ಬಂದಿದೆ. ಸ್ವಂತ ಕಟ್ಟಡ ಇಲ್ಲದೆ ಸ್ಥಳಾಂತರಿಸಲು ಹೊರಟಿರುವುದು ಮಕ್ಕಳಿಗೆ ಸಮಸ್ಯೆ ಆಗುತ್ತಿದೆ.ಈಗಿದ್ದ ಜಾಗದಲ್ಲೇ ಮೌಲಾನಾ ಆಜಾದ್ ಶಾಲಾ ಕಟ್ಟಡ ಕಟ್ಟಲು ಒತ್ತಾಯಿಸಿದಾಗ ಶಾಸಕ ಕೆ.ರಾಘವೇಂದ್ರ ಬಿ. ಹಿಟ್ನಾಳ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಾಲ್ಕು ಕೊಠಡಿಗಳನ್ನು ನಿರ್ಮಿಸಿದ್ದು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದಕ್ಕೆ ಎಸ್.ಎ.ಗಫಾರ್ ಮಾತನಾಡಿ ಅಲ್ಲಿ ಕಟ್ಟಿರುವ ನಾಲ್ಕು ಕೊಠಡಿಗಳು ಚಿಕ್ಕದಾಗಿದ್ದು.ತಲಾ ಒಂದು ತರಗತಿಯಲ್ಲಿ 60 ಮಕ್ಕಳಿದ್ದು. ಚಿಕ್ಕ ಕೊಠಡಿಯಲ್ಲಿ 25 ರಿಂದ 30 ಮಕ್ಕಳು ಮಾತ್ರ ಕೂಡಲು ಸಾಧ್ಯವಾಗುತ್ತದೆ.ಈಗ ಕೇವಲ ಆರನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ಸುಮಾರು 300 ವಿದ್ಯಾರ್ಥಿಗಳಿದ್ದಾರೆ. ಮೌಲಾನಾ ಆಜಾದ್ ಶಾಲೆಯು ಎಲ್.ಕೆ.ಜಿ ಯಿಂದ ದ್ವಿತೀಯ ಪಿಯುಸಿ ವರೆಗೆ ಇರುವುದರಿಂದ ದೂರದೃಷ್ಟಿಯಿಂದ ಯೋಜನಾ ಬದ್ಧವಾಗಿ ವ್ಯವಸ್ಥಿತ ಕಟ್ಟಡ ಮತ್ತು ಆಟದ ಮೈದಾನವನ್ನು ಹೊಂದಲು.ಇರುವ ಜಾಗದಲ್ಲೇ ಕಟ್ಟಡ ಕಟ್ಟುವುದರಿಂದ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗುತ್ತದೆ ಎಂದು ವಿವರಿಸಿದರು.
ನಗರಸಭೆ ಮಾಜಿ ಸದಸ್ಯ ಮಾನವಿ ಪಾಶಾ ಮಾತನಾಡಿ ಇಂದಿರಾ ಕ್ಯಾಂಟೀನ್ ಹಿಂದೆ ವಿಶಾಲವಾದ ಜಾಗ ಇದೆ. ನೂತನ ಕಟ್ಟಡ ಕಟ್ಟಲು ಅನುಕೂಲಕರವಾಗಿದೆ.ಸುತ್ತಲಿನ ಮಕ್ಕಳಿಗೆ ಸಮೀಪವಾಗುತ್ತದೆ ಎಂದು ತಿಳಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಕಿ 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳಕ್ಕೆ ಮೌಲಾನಾ ಆಜಾದ್ ಶಾಲೆ ಮಂಜೂರು ಮಾಡಿದ್ದಾರೆ. ಅದಕ್ಕೊಂದು ನೆಲೆ ಇಲ್ಲದಂತಾಗಿದ್ದು. ಇಂದಿರಾ ಕ್ಯಾಂಟೀನ್ ಹಿಂದೆ ಈಗಿರುವ ಜಾಗದಲ್ಲಿ ಕಟ್ಟಡ ನಿರ್ಮಿಸಲು ಮಕ್ಕಳಿಗೆ ಸೂಕ್ತ ಜಾಗವಾಗಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.
ಮೊದಲು ನಿಮಗೆ ಇಂದಿರಾ ಕ್ಯಾಂಟೀನ್ ಹಿಂದಿನ ಶಾಲಾ ಕಟ್ಟಡದಲ್ಲಿ ಅವಕಾಶ ಮಾಡಿಕೊಟ್ಟಿದ್ದೆ ತಪ್ಪಾಗಿದೆ. ತಾತ್ಕಾಲಿಕವಾಗಿ ಆರು ತಿಂಗಳಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನೂತನ ಕಟ್ಟಡ ಕಟ್ಟಿ ಅದರಲ್ಲಿ ಹೋಗುವಂತೆ ತಿಳಿಸಲಾಗಿತ್ತು ಎಂದು ಶಾಸಕ ಕೆ.ರಾಘವೇಂದ್ರ ಬಿ.ಹಿಟ್ನಾಳ ನುಡಿದು ಬೆಂಗಳೂರಿಗೆ ಹೋಗಿ ಎರಡು ಮೂರು ದಿನ ನಂತರ ಬರುತ್ತೇನೆ ಸ್ಥಳ ಪರಿಶೀಲಿಸೋಣ ಎಂದು ಹೇಳಿದರು.
ಇದಕ್ಕೂ ಮೊದಲು ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ ಅವರೊಂದಿಗೆ ಚರ್ಚಿಸಿ ಈಗಿರುವ ಜಾಗದಲ್ಲೇ ಮೌಲಾನಾ ಆಜಾದ್ ಶಾಲಾ ಕಟ್ಟಡ ಕಟ್ಟುವುದರಿಂದ ಮಕ್ಕಳು ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯ ಎಂದು ಗಮನಕ್ಕೆ ತರಲಾಯಿತು.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಮೀರ್ ಅಲಿ ಇದ್ದರು.
Comments are closed.