ನೂತನ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ,ಮನವಿ

Get real time updates directly on you device, subscribe now.

ಗಂಗಾವತಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ
ಹಿಂಪಡೆಯುವಂತೆ ಒತ್ತಾಯಿಸಿ ಗರ್ಲ್ಸ್ ಇಸ್ಲಾಮಿಕ್ ಅಗರ್ನೆಜಿಸ್‌ನಿಂದ ಗಂಗಾವತಿ ತಾಲೂಕ ದಂಡಾಧಿಕಾರಿಗಳ ಕಾರ್ಯಾಲಯ ದ ಮುಂದೆ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹುಮೆರಾ ಸಿದ್ದಿಕಾ ಅವರು, ಈ ಕಾಯ್ದೆಯ ವಕ್ಫ್ ಸಂಘಗಳ ಸಮರ್ಥನೆ ಮತ್ತು ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ನಿಯಮಗಳನ್ನೊಳಗೊಂಡಿದ್ದು, ಇದರಿಂದ ನಮ್ಮ ಸಮುದಾಯದ ಜನರಲ್ಲಿ ಕಳವಳವನ್ನು ಉಂಟುಮಾಡಿದೆ ಎಂದು ಹೇಳಿದರು.

ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿದ್ದ ಐತಿಹಾಸಿಕವಾಗಿ ದತ್ತಿ ಭೂಮಿಯನ್ನು ಅಪಾಯಕ್ಕೆ ಸಿಲಿಕಿಸುವದು ಈ ಕಾಯ್ದೆಯ ಹಿಂದಿನ ಉದ್ದೇಶವಾಗಿದ್ದು ಕರಾಳ ಕಾನೂನು ಸ್ವೀಕಾರಹವಲ್ಲ ವಕ್ಫ ಆಸ್ತಿಗಳ ಪ್ರಕಾರಗಳು ಮತ್ತು ಅವುಗಳ ಬಳಕೆ ಮತ್ತು ರಕ್ಷಣೆ ವಕ್ಫ ಕಾನೂನಿನಲ್ಲಿ ಇರುವ ಅಂಶಗಳನ್ನು ತಿಳಿಸಿದ ಅವರು ವಕ್ಫ ಕಲ್ಯಾಣ ವ್ಯವಸ್ಥೆಯನ್ನು ಹಾಳು ಮಾಡಲು ಕೇಂದ್ರ ಸರ್ಕಾರವು ವಕ್ಫ ತಿದ್ದುಪಡಿ ಮಸೂದೆ 2025 ಅನ್ನು ಜಾರಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಜಿ ಐ ಓ ನ ತಾಲೂಕ ಅಧ್ಯಕ್ಷೆ ಹುಮೆರಾ ಸಿದ್ದಿಕಾ ಮತ್ತು GIO ನ ಕಾರ್ಯಕರ್ತರು, ಜಮಾತೆ ಇಸ್ಲಾಮಿ ಹಿಂದಿನ ಮಹಿಳಾ ಆಧ್ಯಕ್ಷೆ ಸಾಲಿಹ ಬೇಗಮ್ , ಜಮಾತೆ ಇಸ್ಲಾಮಿ ಹಿಂದಿನ ಅಧ್ಯಕ್ಷರು ಜನಾಬ್ ಅಬ್ದುಲ್ ಖುದ್ದೂಸ್, ಜನಾಬ್ ಮೊಹಮ್ಮದ್ ರಫೀಕ್, ಜನಾಬ್ ಜವ್ವಾದ ಸಿದ್ದಿಕಿ, ಹುಮ್ಯಾನಿಟರಿಯನ್ ರಿಲೀಫ್ ಸೊಸೈಟಿ ಅಧ್ಯಕ್ಷರು ಆಸಿಫ ಅಲಿ, SIO ನ ತಾಲೂಕ ಪ್ರೆಸಿಡೆಂಟ್ ಶಾಯಿದ್ ಆಫ್ರಿದಿ, SYM ನ ತಾಲೂಕ ಪ್ರೆಸಿಡೆಂಟ್ ರಾಜ ರವರು ಮತ್ತು ಜಿ ಐ ಓನ ಕಾರ್ಯಕರ್ತರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!