ಜು. 30 ರಂದು ಕೊಪ್ಪಳ ನಗರದ ವಿವಿಧ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ
ಕೊಪ್ಪಳ ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ 110 ಕೆ.ವಿ ಕೊಪ್ಪಳ ಸ್ಟೇಷನಲ್ಲಿ ತುರ್ತು ಕಾಮಗಾರಿ ಪ್ರಯುಕ್ತ ಜು. 30 ರಂದು ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೊಪ್ಪಳ ನಗರದ ವಿವಿಧ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.110 ಕೆ.ವಿ ಕೊಪ್ಪಳ ಸ್ಟೇಷನ್‌ಗೆ ಒಳಪಡುವ ಕಲ್ಯಾಣ ನಗರ, ಅಗಡಿ ಲೇಔಟ್, ಚನ್ನಬಸವನಗರ, ಗಣೇಶ ನಗರ, ರೆಡ್ಡಿ ಲೇಔಟ್, ಹೇಮರೆಡ್ಡಿ ಮಲ್ಲಮ್ಮ ಏರಿಯಾ, ಎನ್.ಜಿ.ಐ ಕಾಲೋನಿ, ಟಿಚರ್ ಕಾಲೋನಿ, ರಾಮಚಂದ್ರಪ್ಪ ಪೊಲೀಸ್ ಕಾಲೋನಿ, ತಾಲೆಡಾ ಲೇಔಟ್, ಜೆ.ಹೆಚ್.ಪಟೇಲ್ ನಗರ, ನಯನತಾರ ಲೇಔಟ್, ಶಾಂತಿಕೇತನ ಬಡಾವಣೆ, ಪ್ರಗತಿ ನಗರ, ಅಭಿಷೇಕ ಬಡಾವಣೆ, ಅಡವಿ ಆಂಜನೇಯ ಬಡಾವಣೆ, ಬಿ.ಎಸ್.ಎನ್.ಎಲ್ ಕಾಲೋನಿ, ಕಾಳಿದಾಸ ನಗರ, ಸಿದ್ದೇಶ್ವರ ನಗರ, ಆಗಡಿ ಚೋಪ್ರ ಕಾಲೋನಿ, ಬೇಲ್ದಾರ ಕಾನೋನಿ, ಪದಕಿ ಟೌನ್‌ಷಿಪ್, ಶಿವಶಾಂತವೀರ ಕಲ್ಯಾಣ ಮಂಟಪ ಹತ್ತಿರ. ವೈಷ್ಣವಿ ಲೇಔಟ್, ರಾಜಾಜಿ ನಗರ, ಮತ್ತು ವಿವೇಕಾನಂದ ನಗರ. ಈ ಎಲ್ಲಾ ಮಾರ್ಗದ 11 ಕೆವಿ ಮಾರ್ಗಗಳು ವಿದ್ಯುತ್ ವ್ಯತ್ಯಯವಾಗಲಿದ್ದು, ಕಾರಣ ಸಾರ್ವಜನಿಕರು ಸಹಕರಿಸಬೇಕು.
ವಿದ್ಯುತ್ ತುರ್ತು ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ತಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಬವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.