ಸುರಭಿ ವೃದ್ಧಾಶ್ರಮದಲ್ಲಿ ನಾಗಪಂಚಮಿ ಆಚರಣೆ

ಕೊಪ್ಪಳ: ನಗರದ ಸುರಭಿ ವೃದ್ಧಾಶ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ನಾಗರ ಪಂಚಮಿ ಆಚರಿಸಲಾಯಿತು.
ಕಲ್ಲು ನಾಗರನಿಗೆ ಹಾಲು ಹಾಕುವುದಕ್ಕಿಂತ, ಹಸಿದವರಿಗೆ ಹಾಲುಣಿಸುವುದು ಶ್ರೇಷ್ಠ ಎಂಬ ವಿಚಾರದಿಂದ ಇನ್ನರ್ ವಿಲ್ ಕ್ಲಬ್ ನ ಅಧ್ಯಕ್ಷರಾದ ಮಧು ಶೆಟ್ಟರ್ ಅವರು ಸುರಭಿ ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರ ಜೊತೆಗೆ ಊಟ, ಹಾಲು, ಹಣ್ಣು, ಬಿಸ್ಕೆಟ್ ಗಳನ್ನು ಕೊಡುವುದರ ಜೊತೆಗೆ ನಾಗರ ಪಂಚಮಿಯನ್ನು ಆಚರಿಸಿದರು.
ಸುಮಾರು 41 ಜನ ಇರುವ ಆಶ್ರಮದಲ್ಲಿ ಇನ್ನರ್ ವಿಲ್ ಕ್ಲಬ್ ಸಹೋದರಿಯರು ವಿಶಿಷ್ಟವಾಗಿ ಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಇನ್ನರ್ ವಿಲ್ ಕ್ಲಬ್ ನ ಕಾರ್ಯದರ್ಶಿ ರೇಖಾ ಕಡ್ಲಿ, ಸಂಪಾದಕಿ ಸುಧಾ ಶೆಟ್ಟರ್, ಹಿರಿಯರಾದ ಡಾ.ರಾಧಾ ಕುಲಕರ್ಣಿ, ಮಾಜಿ ಅಧ್ಯಕ್ಷರಾದ ಮಮತಾ ಶೆಟ್ಟರ್. ಸಂಜನಾ ಕಣಿವಿ ಪಾಲ್ಗೊಂಡಿದ್ದರು.
Comments are closed.