ಚಂದ್ರಯಾನ-3 ಯಶಸ್ವಿ ಉಡಾವಣೆ: ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಸಂಭ್ರಮಾಚರಣೆ
ಜಗತ್ತಿಗೆ ಭಾರತದ ವಿಜ್ಞಾನಿಗಳು ಸಾಧನೆ ಏನೆಂದು ತೋರಿಸಿಕೊಟ್ಟ ಇಸ್ರೋ ವಿಜ್ಞಾನಿಗಳಿಗೆ ಕೋಟಿ ಕೋಟಿ ನಮನಗಳು.
ಚಂದ್ರಯಾನ 3 ಯಶಸ್ವಿಯಾದ ಪ್ರಯುಕ್ತ ಕೊಪ್ಪಳದ ಅಶೋಕ್ ಸರ್ಕಲ್ ನಲ್ಲಿ ಕ್ಲಬ್ಬಿನ ಎಲ್ಲ ಸರ್ವ ಸದಸ್ಯರು, ಗೆಳೆಯರ ಜೊತೆಗೂಡಿ ಪಟಾಕಿಗಳನ್ನು ಸಿಡಿಸಿ ಭಾರತ ಮಾತೆಯ ಘೋಷಣೆಗಳನ್ನು ಕೂಗುತ್ತ ಸಿಹಿಯನ್ನು ಹಂಚಿ ಸಂಭ್ರಮಿಸಲಾಯಿತು
ಜಗತ್ತು ಇಂದು ಭಾರತವನ್ನು ನೋಡುತ್ತಿದೆ ಎಂದರೆ ಅದಕ್ಕೆ ಇಸ್ರೋ ವಿಜ್ಞಾನಿಗಳು ಕಾರಣ ಜೊತೆಗೆ ಚಂದ್ರನ ಮೇಲೆ ಕಾಲಿಟ್ಟಂತಹ ಅಮೆರಿಕ ರಷ್ಯಾ ಹಾಗೂ ಚೀನಾ ರಾಷ್ಟ್ರಗಳ ನಂತರ ನಮ್ಮ ಭಾರತ ಐತಿಹಾಸಿಕ ಸಾಧನೆ ಮಾಡಿ ಇರುವುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ಪಡುವಂತ ವಿಷಯ ಎಂದು ಮಾರುತಿ ಮ್ಯಾಗಮನಿ ಮಾತನಾಡಿದರು
ಜೊತೆಗೆ ಈರಣ್ಣ ಪಗಡಾಲ್, ಡಾ. ಸತೀಶ್ ಜಾಲಿಹಾಳ, ರಘು ಬಡಿಗೇರ್, ಶ್ರೀನಿವಾಸ್ ಗೊಂದಳಿ ಮಾತನಾಡಿದರು
Comments are closed.