ಪ್ರತಿವಾರ ಆಯಾ ತಾಲೂಕು ಜನರ ಅಹವಾಲು ಸ್ವೀಕಾರ : ಸಿಇಓ ರಾಹುಲ್ ರತ್ನಂ ಪಾಂಡೆಯ ಹೇಳಿಕೆ
ಜನರ ಸಮಸ್ಯೆ ಆಲಿಸಿದ ಜಿಪಂ ಸಿಇಓ
ಜನರಿಂದ ಅಹವಾಲು ಸಲ್ಲಿಕೆ, ಸಭೆಯಲ್ಲಿ ತಾಲೂಕು ಅನುಷ್ಠಾನ ಅಧಿಕಾರಿಗಳು ಭಾಗಿ
ಕಾರಟಗಿ : ಪಟ್ಟಣದ ಎಪಿಎಂಸಿ ಕಚೇರಿಯ ಸಭಾಂಗಣದಲ್ಲಿ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದುಕೊರತೆ (ಅಹವಾಲು) ಸ್ವೀಕಾರ ಸಭೆ ಬುಧವಾರ ನಡೆಯಿತು.
ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು, ಅಹವಾಲು ಸಲ್ಲಿಕೆಗೆ ಬಂದ ಜನರನ್ನು ಒಬ್ಬೊಬ್ಬರನ್ನಾಗಿ ಸಭೆಗೆ ಕರೆದು ಜನರ ಸಮಸ್ಯೆ ಆಲಿಸಿ, ಈಡೇರಿಸುವ ಭರವಸೆ ನೀಡಿದರು.
ವಿವಿಧ ಗ್ರಾಮಗಳಿಂದ ಬಂದಿದ್ದ ಸಾರ್ವಜನಿಕರು, ಖಾಲಿ ಇರುವ ಅಡುಗೆ ಸಹಾಯಕರ ಹುದ್ದೆ, ವಿಧವಾ ವೇತನ, ನಿಧಾನರಾದ ಗ್ರಾ.ಪಂ ಸಿಬ್ಬಂದಿ ಕುಟುಂಬಕ್ಕೆ ಅನುಕಂಪದ ಕೆಲಸ, ಕುಡಿವ ನೀರಿನ ಸಮಸ್ಯೆ, ಆರ್ ಓ ಪ್ಲಾಂಟ್ ಗಳ ದುರಸ್ತಿ, ಚರಂಡಿ , ಸಿಸಿ ರಸ್ತೆ ಸಮಸ್ಯೆ, ಶಾಲಾ ಅಭಿವೃದ್ಧಿ ಕಾಮಗಾರಿಗಳು, ನರೇಗಾದಡಿ ವಿವಿಧ ಕಾಮಗಾರಿಗಳ ನಿರ್ಮಾಣ, ತಾಲೂಕಿನ ಕೆಲವು ಗ್ರಾ.ಪಂ ಗಳಿಗೆ ಅಭಿವೃದ್ಧಿ ಅಧಿಕಾರಿಗಳ ನಿಯೋಜನೆ, ಸೇರಿ ಇತರೆ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು.
ಸಭೆಯಲ್ಲಿ ಇದ್ದ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳಿಗೆ ಆಯಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಸೂಚಿಸಿದರು.
ಗ್ರಾ.ಪಂ ವಿವಿಧ ಯೋಜನೆಗಳ ಪರಿಶೀಲನೆ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಮಾದರಿ ಶೌಚಾಲಯ, ತಾಲೂಕಿಗೆ ಒಂದು ಗೋಮಾಳ ಅಭಿವೃದ್ಧಿ ಕಾಮಗಾರಿ ಪ್ರಗತಿ, ನೂತನ ಗ್ರಂಥಾಲಯಗಳಿಗೆ ಜಾಗ ಗುರುತಿಸುವುದು, ಮೋಜಿನಿ ತಂತ್ರಾಂಶದಲ್ಲಿ 9 &11, ಇ-ಸ್ವತ್ತು ಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವುದು, ಸ್ವಚ್ಛತೆಗೆ ಆದ್ಯತೆ ನೀಡಬೇಕು, ವಾರದಲ್ಲಿ ಒಂದು ಸ್ವಚ್ಛತಾ ಕಾರ್ಯಕ್ರಮ ಮಾಡಬೇಕು. ಸಾರ್ವಜನಿಕರ ಕುಂದು ಕೊರತೆ ಅರ್ಜಿ ಗಳನ್ನು ನಿಮ್ಮ ಹಂತದಲ್ಲಿ ತ್ವರಿತವಾಗಿ ಬಗೆಹರಿಸಬೇಕು ತಿಳಿಸಿ, ಇನ್ನಿತರ ವಿಷಯಗಳ ಕುರಿತು ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ: ತಾಲೂಕು ಮಟ್ಟದ ವಿವಿಧ ಯೋಜನೆಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರಗತಿಯನ್ನು ಪರಿಶೀಲಿಸಿದರು.
ಮೈಲಾಪುರ ಗ್ರಾ.ಪಂ ಗೆ ಜಿ.ಪಂ ಸಿಇಓ ಭೇಟಿ: ಗ್ರಾಮ ಪಂಚಾಯತಿಯ ನೂತನ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ತದನಂತರ ಸೋಮನಾಳ ಸರಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ, ಶಾಲಾ ಅಭಿವೃದ್ಧಿ ವಿಷಯಗಳ ಕುರಿತು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು, ಮುಖ್ಯೋಪಾಧ್ಯಾಯರು ಹಾಗೂ ಗ್ರಾಮದ ಪ್ರಮುಖರೊಂದಿಗೆ ಚರ್ಚಿಸಿದರು.
ಕ್ರೀಡಾಕೂಟದಲ್ಲಿ ಟಾಸ್ ಮಾಡಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಜಿ.ಪಂ ಸಿಇಓ
ತಾಲೂಕಿನ ಸೋಮನಾಳ ಗ್ರಾಮದ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ತಾಲೂಕು ವಲಯ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದ ಖೋ ಖೋ, ವಾಲಿಬಾಲ್ , ಕಬಡ್ಡಿ ಪಂದ್ಯಗಳಿಗೆ ಟಾಸ್ ಮಾಡಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ನರಸಪ್ಪ ಎನ್ , ಯೋಜನಾಧಿಕಾರಿ ರಾಘವೇಂದ್ರ, ಸಹಾಯಕ ನಿರ್ದೇಶಕರಾದ ವೈ.ವನಜಾ, ತಾಲೂಕು ಮಟ್ಟದ ಎಲ್ಲ ಅನುಷ್ಠಾನ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ವಿಷಯ ನಿರ್ವಾಹಕರು, ನರೇಗಾ, ಎಸ್ ಬಿಎಂ, ಎನ್ ಆರ್ ಎಲ್ ಎಂ ಸಿಬ್ಬಂದಿಗಳು ಇದ್ದರು
Comments are closed.