ಬೂದಗುಂಪಾ ಗಲಾಟೆ : ಇಬ್ಬರು ಪೋಲಿಸರ ಅಮಾನತು
ಕೊಪ್ಪಳ :
ಕೊಪ್ಪಳ ಜಿಲ್ಲೆ, ಕಾರಟಗಿ ಠಾಣಾ ವ್ಯಾಪ್ತಿಯ ಬೂದಗುಂದ ಗ್ರಾಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಆಯ್ಕೆ ಮೀಸಲಾತಿ ವಿಷಯವಾಗಿ ದಿನಾಂಕ 12.08,2023 ರಂದು ಗ್ರಾಮದಲ್ಲಿ ಜರುಗಿದ ಗಲಾಟೆ ವಿಷಯದಲ್ಲಿ ಮುಂಜಾಗೃತ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಜರುಗಿಸಿ ಗಲಾಟೆ ತಡೆಯುವಲ್ಲಿ ವಿಫಲರಾಗಿ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿಸಿದ ಹಿನ್ನೆಲೆಯಲ್ಲಿ ಇಬ್ಬರು ಪೋಲಿಸರನ್ನು ಅಮಾನತ್ತು ಮಾಡಿ ಪಿಐ ವಿರುದ್ದ ಶಿಸ್ತುಕ್ರಮಕ್ಕಾಗಿ ಶಿಪಾರಸ್ಸು ಮಾಡಲಾಗಿದೆ.
1) ಸಿದ್ರಾಮಯ್ಯ ಪಿ.ಐ. ಕಾರಟಗಿ ಠಾಣೆ ರವರ ವಿರುದ್ಧ ಸೂಕ್ತ ಕ್ರಮಕ್ಕೆ ಪೊಲೀಸ್ ಮಹಾನಿರೀಕ್ಷಕರು, ಬಳ್ಳಾರಿ ವಲಯ ರವರಿಗೆ ವರದಿಯನ್ನು ಕಳಿಸಲಾಗಿದೆ.
2) ಸುರೇಶ ಜೋಗಿನ ಸಿಹೆಚ್‌ಸಿ 40 ಕಾರಟಗಿ ಪೊಲೀಸ್ ಠಾಣೆ ಮತ್ತು
3) ಶ್ರೀಕಾಂತ್ ಸಿಪಿಸಿ-206 ತಾವರಗೇರಾ ಪೊಲೀಸ್ ಠಾಣೆ ರವರನ್ನು ದಿನಾಂಕ-2.08.2003 ರಿಂದ ಜಾರಿ ಬರುವಂತೆ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಮಾಡಲಾಗಿದೆ ಎಂದು ಎಸ್ಪಿ ಶ್ರೀಮತಿ ಯಶೋದಾ ವಂಟಿಗೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.