ಮಕ್ಕಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳಸುವಲ್ಲಿ ಶಾಲಾ ಸಂಸತ್ತು ಮಹತ್ವದ ಪಾತ್ರವನ್ನು ವಹಿಸುತ್ತದೆ

Get real time updates directly on you device, subscribe now.

ಕೊಪ್ಪಳ- ಮಕ್ಕಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳಸುವಲ್ಲಿ ಶಾಲಾ ಸಂಸತ್ತು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಶ್ರೀ ಶಿವಶಾಂತವೀರ ಪಬ್ಲಿಕ್ (ಸಿ.ಬಿ.ಎಸ್.ಇ) ಶಾಲೆಯ ಪ್ರಾಚಾರ್ಯರಾದ ಪ್ರವೀಣ ಯರಗಟ್ಟಿ ಹೇಳಿದರು. ಅವರು ಶಾಲೆಯಲ್ಲಿ ಹಮ್ಮಿಕೊಂಡ ೨೦೨೫-೨೬ ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭ ಹಾಗೂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯುವ ಪ್ರಕ್ರೀಯೆಗಳಾದ ನಾಮಪತ್ರ ಸಲ್ಲಿಕೆ, ಪ್ರಚಾರ, ಮತದಾನ ಹಾಗೂ ಫಲಿತಾಂಶಗಳ ಬಗ್ಗೆ ಮಹತ್ವದ ಅರಿವು ಮೂಡಿಸುವುದರ ಮೂಲಕ ಮಕ್ಕಳಲ್ಲಿ ಉತ್ತಮ ನಾಯಕತ್ವ ಹಾಗೂ ಜವಾಬ್ದಾರಿಯನ್ನು ಬೆಳೆಸುತ್ತದೆ ಎಂದರು. ಶಾಲಾ ಸಂಸತ್ತಿನ ಪ್ರತಿಜ್ಞಾವಿಧಿಯನ್ನು ಉಪಪ್ರಾಚಾರ್ಯರಾದ ಮಂಜುನಾಥ ವಿದ್ಯಾರ್ಥಿಗಳಿಗೆ ಬೋಧಿಸಿದರು.
ಶಾಲಾ ಸಂಸತ್ತಿನ ನಾಯಕನಾಗಿ ಪ್ರತಾಪ.ಸಿ,ನಾಯಕಿಯಾಗಿ ಅನನ್ಯ ಸಾಂಸ್ಕೃತಿಕ ಮಂತ್ರಿಯಾಗಿ ಮನೋಜ ಹಾಗೂ ಲಕ್ಷಿö್ಮÃ, ಕ್ರೀಡಾ ಮಂತ್ರಿಯಾಗಿ ನಯನ ಹಾಗೂ ಅನಿಷಾ, ಶಾಲಾ ಶಿಸ್ತಿನ ಮಂತ್ರಿಯಾಗಿ ಸಾಯಿ ಸುಮಂತ ಹಾಗೂ ಶಮಿತಾ ಆಯ್ಕೆಯಾಗಿದ್ದಾರೆ. ಉಡಾನ್ ವಿಭಾಗದ ನಾಯಕಿಯಾಗಿ ಕುಮಾರಿ ಇಶ್ರತ್ ಉಪನಾಯಕನಾಗಿ ನಿಖಿಲ್ ಗೌಡ, ಉತ್ಸವ ವಿಭಾಗದ ನಾಯಕಿಯಾಗಿ ಪ್ರತೀಕ್ಷಾ ಉಪನಾಯಕನಾಗಿ ಫಯಾಜ್, ಉರ್ಜಿತ್ ವಿಭಾಗದ ನಾಯಕನಾಗಿ ಭರತ, ಉಪನಾಯಕಿಯಾಗಿ ಸಂಜನಾ ಸೊಪ್ಪಿಮಠ, ಉಜ್ವಲಂ ವಿಭಾಗದ ನಾಯಕನಾಗಿ ರಿಷಿಕೇ಼ಶ ಹಾಗೂ ಉಪನಾಯಕಿಯಾಗಿ ಪ್ರಾಚಿ ಆಯ್ಕೆಯಾಗಿದ್ದು ಇತರೆ ಸದಸ್ಯರಾಗಿ ಉದಯ ,ಆದಿತ್ಯ, ಆರ್ಯನ್, ಚೈತ್ರಾ, ಸಿಂದೂ ತನುಶ್ರೀ ಮತ್ತು ಅರ್ಚನಾ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಹಾಗೂ ಸಿಬ್ಬಂದಿಯೇತರ ವರ್ಗ ಅಭಿನಂದನೆಯನ್ನು ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!