ಯಕ್ಷಗಾನ ಕಲೆ ಉಳಿಸಿ ಬೆಳೆಸಿ : ಮಾಜಿ ಸಂಸದ ಸಂಗಣ್ಣ ಕರಡಿ

Get real time updates directly on you device, subscribe now.

ಕೊಪ್ಪಳ : ಯಕ್ಷಗಾನ ಕಲೆ ಪ್ರಾಚೀನತೆ ಕಲೆ ಈ ಕಲೆಯನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ನಗರದ ಸಾಹಿತ್ಯ ಭವನದಲ್ಲಿ ಕರಾವಳಿ ಬಳಗ ಕೊಪ್ಪಳ,ಸಿದ್ದಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಮೇಳ ಇವರ ವತಿಯಿಂದ ಸಿರಿ ಸಿಂಗಾರಿ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿ ಯಕ್ಷಗಾನ ಕಲೆಯು ಕನ್ನಡ ಭಾಷೆಯನ್ನು ಗಟ್ಟಿಗೊಳಿಸುತ್ತದೆ, ಈ ಕಲೆಯು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಕಲೆ ಎಂದು ಹೇಳಬಹುದು ಈ ಕಲೆ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದರು.
ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಮಾತನಾಡಿ ಯಕ್ಷಗಾನಕ್ಕೆ ಇರುವಂತ ಶಕ್ತಿ ಎಂಥದ್ದು ಎನ್ನುವುದನ್ನು ನಾವು ಮೇಲಕ್ಕೆ ಹಾಕಬೇಕಾಗಿದೆ, ಈ ಕಲೆಯ ದೇಶ ವಿದೇಶಗಳಲ್ಲಿ ಪ್ರಾಮುಖ್ಯತೆಯನ್ನು ಹೊಂದಿರುವ ಕಲೆ ಎಂದು ಹೇಳಬಹುದು, ಇದು ಪ್ರಾಚೀನ ಇತಿಹಾಸದ ಕಲೆ ಎಂದರು.
ಯಕ್ಷಗಾನ ಪ್ರದರ್ಶನದಲ್ಲಿ ಚಲನಚಿತ್ರ ನಾಯಕ ನಟ, ನಟಿಯರಾದ ಶಿಥಿಲ್ ಶೆಟ್ಟಿ ಮತ್ತು ಜಿ.ಎಸ್ ನಾಗಶ್ರೀ ಗಮನ ಸೆಳೆದರು.
ಕರಾವಳಿ ಬಳಗದವರು ಕರಾವಳಿ ಭಾಗದ ಸಮವಸ್ತ್ರವನ್ನು ಧರಿಸಿ ಜನಮನ ಸೆಳೆದರು,ಕಾರ್ಯಕ್ರಮದಲ್ಲಿ ಕರಾವಳಿ ಭಾಗದ ಯಕ್ಷಗಾನ ವೀಕ್ಷಿಸಲು ಅಪಾರ ಸಂಖ್ಯೆಯ ಜನ ಸೇರಿದ್ದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ಬಿ.ಕಣಿವಿ, ಕೊಪ್ಪಳ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ ಶೆಟ್ಟಿ,ಕರಾವಳಿ ಬಳಗದ ಗೌರವ ಅಧ್ಯಕ್ಷ
 ಜೀವನ ಶೆಟ್ಟಿ, ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಸಂಚಾಲಕ ರಂಜಿತ ಶೆಟ್ಟಿ  ವಕ್ವಾಡಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!