ಕಾನೂನು ಪರಿಪಾಲನೆ ನಮ್ಮೆಲ್ಲರ ಹೊಣೆ ಇದನ್ನು ದಯಮಾಡಿ ಎಲ್ಲರೂ ಪಾಲಿಸಬೇಕು- ಪಿ ಎಸ್ ಐ-ಗುರುರಾಜ್

Get real time updates directly on you device, subscribe now.

ಕುಕನೂರು : . ಪಟ್ಟಣದ ಪೊಲೀಸ್ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ನಿರಂತರವಾಗಿರುವುದನ್ನು ಗಮನಿಸಿದ ಕುಕನೂರ್ ನೂತನ ಪಿಎಸ್ಐ ಗುರುರಾಜ್ ವೇಗದ ರೀತಿಯಲ್ಲಿ ಕಡಿವಾಣ ಹಾಕುತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಮೆಚ್ಚುಗೆಗೆ ವ್ಯಕ್ತವಾಗಿದ್ದಾರೆ ಕುಕನೂರ್ ಪೊಲೀಸ್ ಠಾಣೆಗೆ ಹರಪನಹಳ್ಳಿ ತಾಲೂಕಿನ ಅಲವಾಗಲಿ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡು ಕುಕನೂರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಂತೆ 24 ದಿನಗಳಲ್ಲಿ ಪ್ರತಿದಿನ ೨೪ ಗಂಟೆಗಳ ಮೂಲಕ ಕಾರ್ಯಾಚರಣೆ ಮಾಡುವ ಮೂಲಕ ಅಕ್ರಮ ಚಟುವಟಿಕೆ ಮಾಡುವವರ ನಿದ್ದೆಗೆಡಿಸಿರುವಂತೆ ಕೇವಲ 24 ದಿನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮಟ್ಕಾ ಅಕ್ರಮ ಮರಳು ಇಸ್ಪೀಟ್ ಜೂಜುಕೋರರು ಮೇಲೆ ದಾಳಿ ನಡೆಸಿ ಬಂಧಿಸಿ ಯಶಸ್ವಿಯಾಗುವ ಮೂಲಕ ನ್ಯಾಯಾಂಗದ ಅತಿಥಿ ಯಾಗುವಂತೆ ಪ್ರಕರಣ ದಾಖಲಿಸಿಕೊಂಡು ಕಾರ್ಯಗತ ಗೊಂಡಿದ್ದಾರೆ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮುಂದಿನ ದಿನಮಾನಗಳಲ್ಲಿ ಯಾವುದೇ ಹಬ್ಬ ಹರಿದಿನಗಳ ಪ್ರಯುಕ್ತವಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದರೆ ಯಾವುದೇ ರೀತಿಯ ಮುಲಾಜಿ ಇಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಇನ್ನು ಮುಂದೆ ಹಗಲು ರಾತ್ರಿ ಎನ್ನದೆ ಅಕ್ರಮ ಚಟುವಟಿಕೆ ಮಾಡುವವರ ವಿರುದ್ಧ ಕಾರ್ಯಚರಣೆ ಪ್ರಾರಂಭ ಮಾಡಲಾಗುವುದು ಇದಕ್ಕೆ ಕುಕನೂರು ವ್ಯಾಪ್ತಿಗೆ ಸಂಬಂಧಪಟ್ಟಂತೆ ಯಾವುದೇ ಗ್ರಾಮೀಣ ಪಟ್ಟಣಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆದರೆ ಕೂಡಲೇ ತಮ್ಮ ಗಮನಕ್ಕೆ ತರಲು ಮುಂದಾಗಬೇಕು ಸಾರ್ವಜನಿಕರು ಕಾನೂನು ಪರಿಪಾಲನೆ ನಮ್ಮೆಲ್ಲರ ಹೊಣೆ ಇದನ್ನು ದಯಮಾಡಿ ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

Get real time updates directly on you device, subscribe now.

Comments are closed.

error: Content is protected !!