ರಾಜಶೇಖರಗೌಡ ಆಡೂರು ನೇಮಕ
ಕೊಪ್ಪಳ : ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾಗಿ ರಾಜಶೇಖರಗೌಡ ಆಡೂರು ಸೇರಿದಂತೆ ಇತರರನ್ನು ನೇಮಕ ಮಾಡಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಾಮ ಸದಸ್ಯರಾಗಿ ಸಾವಿತ್ರಿ ಮುಜಂದಾರ, ಪರಸಪ್ಪ ಮೇಗೂರು, ಶರಣಮ್ಮ ಪೂಜಾರ್, ನಾಗೇಶ್ ಬಡಿಗೇರ್, ಶಾಂತಪ್ಪ ದ್ಯಾಮಪ್ಪ, ಜಯಶ್ರೀ ಮೆಣಸಗಿ ಅವರು ನೇಮಕಗೊಂಡಿದ್ದಾರೆ.
ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯನ್ನು ಪುನರ್ ರಚಿಸಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
Comments are closed.