ಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಮುಂಜಾವು

Get real time updates directly on you device, subscribe now.

ಕನಕಗಿರಿ: ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ರಂಗದಲ್ಲಿ ಗುರುತಿಸಿಕೊಳ್ಳಬೇಕೆಂದು ಸಮೂಹ ಸಂಸ್ಥೆಯ ಸಹಾಯಕ‌ ನಿರ್ದೇಶಕ ಎಂ. ಬಿ. ಕುಕನೂರು ತಿಳಿಸಿದರು.
ಪಟ್ಟಣದ ಮುಂಜಾವು ಮಹಿಳಾ ವಿವಿಧೋದ್ದೇಶ ಸೌರ್ಹಾದ‌ ನಿಯಮಿತದ ವತಿಯಿಂದ ಇಲ್ಲಿನ ಎಪಿಎಂಸಿ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂಜಾವು ಸಂಸ್ಥೆಯು
ಗ್ರಾಮೀಣ ಭಾಗದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸುತ್ತಿದಲ್ಲದೆ ಮಹಿಳಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗ್ಂ ಮಾತನಾಡಿ
ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣವೆ ಅಸ್ತ್ರವಾಗಿದೆ, ಕಠಿಣ‌ ಶ್ರಮ, ಸತತ ಅಧ್ಯಯನ, ಛಲ, ಏಕಾಗ್ರತೆಯಿಂದ ಏನಾದರೂ ಸಾಧಿಸಲು ಸಾಧ್ಯವಿದೆ ಎಂದು ತಿಳಿಸಿದರು.
ನೌಕರರ ಸಂಘದ ನಿರ್ದೇಶಕ ಕೆ.ಪಿ. ಚಂದುಸಾಬ ಮಾತನಾಡಿದರು.
ಮುಂಜಾವು ನಿರ್ದೇಶಕಿ ಶ್ರೀದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಕೀಲೆ ವಿದ್ಯಾರೆಡ್ಡಿ , ಹೆಡ್ ಕಾನ್ ಸ್ಟೇಬಲ್ ಮುತ್ತಣ್ಣ, ಕಿರಿಯ ಆರೋಗ್ಯ ಸಹಾಯಕ ರಮೇಶ,‌ ಮಹಿಳಾ ಸಾತ್ವಂನ‌ ಕೇಂದ್ರದ ಜಯಶ್ರೀ, ನವೀನಕುಮಾರ,
ಜಯಂತಿ, ಹನುಮಂತರೆಡ್ಡಿ
ಇತರರು ಇದ್ದರು. ಎಸ್ ಎಸ್ ಎಲ್ ಸಿ ಹಾಗು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 40 ಗ್ರಾಮಗಳ 68 ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!