ಬಲವಂತದ ಭೂಸ್ವಾಧೀನ ಎಳೆದಾಡಿ ಬಂಧಿಸಿದ ರೀತಿ ಖಂಡನೀ- ಸಿ.ಪಿ.ಐ(ಎಂ) ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್

Get real time updates directly on you device, subscribe now.

ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ದೇವನಹಳ್ಳಿಯಲ್ಲಿ ನಡೆಯುತ್ತಿದ್ದ ಬಲವಂತದ ಭೂಸ್ವಾಧೀನ ವಿರೋಧಿ ಹೋರಾಟಗಾರರನ್ನು ಬಂಧಿಸಿದ ಪೋಲಿಸರ ದೌರ್ಜನ್ಯಕ್ಕೆ ಸಿ.ಪಿ.ಐ.(ಎಂ) ಖಂಡನೆ.
ಗAಗಾವತಿ: ಕಳೆದ ೧೧೭೭ ದಿನಗಳಿಂದ ಶಾಂತಿಯುತವಾಗಿ ಬಲವಂತದ ಭೂಸ್ವಾಧೀನದ ವಿರುದ್ಧ ದೇವನಹಳ್ಳಿಯ ೧೩ ಗ್ರಾಮಗಳ ರೈತರು ನಡೆಸಿದ ವಿವಿಧ ಮಾದರಿಯ ಹೋರಾಟಕ್ಕೆ ಸರಕಾರ ಕಿವಿಕೊಡದ ಕಾರಣದಿಂದಾಗಿ ಜೂನ್-೨೫ ರಿಂದ ದೇವನಹಳ್ಳಿ ಸಂತೇ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹತ್ತಾರು ಸಂಘಟನೆಗಳ ಸಾವಿರಾರು ಜನ ಸೇರಿದ್ದರು. ಅನಿರ್ದಿಷ್ಟ ಕಾಲದ ಪ್ರತಿಭಟನೆಯ ಕರೆಗೆ ಭೂಸ್ವಾಧೀನ ವಿರೋಧಿ ಹೋರಾಟ ವೇದಿಕೆಯನ್ನು ಬೆಂಬಲಿಸಿ ಇಂದು ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಕಾರ್ಮಿಕ ಸಂಘಟನೆಗಳ ನಾಯಕರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸರಕಾರದಿಂದ ಭೂ ಸ್ವಾಧೀನದ ಆದೇಶವನ್ನು ಹಿಂತೆಗದುಕೊಳ್ಳುವವರೆಗೂ ಪ್ರತಿಭಟನೆ ಮುಂದುವರೆಸುವ ತೀರ್ಮಾನಕ್ಕೆ ಬರಲಾಗಿತ್ತು. ಇಡೀ ದಿನ ಶಾಂತಿಯುತವಾಗಿ ನಡೆದ ಹೋರಾಟದ ವೇದಿಕೆಗೆ ಸಂಜೆಯ ವೇಳೆಗೆ ಏಕಾಏಕಿ ನುಗ್ಗಿದ ಪೊಲೀಸರು ೫ ಘಂಟೆಯ ನಂತರ ಪ್ರತಿಭಟನೆಗೆ ಅವಕಾಶವಿಲ್ಲ, ಪಟ್ಟಣದಲ್ಲಿ ಪ್ರತಿಭಟನೆ ಮಾಡುವ ಹಾಗಿಲ್ಲ. ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡಿರಿ ಎಂದು ಹೇಳಿ ವೇದಿಕೆಯಲ್ಲಿ ಇರುವವರನ್ನು ಎಳೆದಾಡಿ ಬಂಧಿಸಿದ ರೀತಿ ಖಂಡನೀಯವಾಗಿದೆ ಎಂದು ಸಿ.ಪಿ.ಐ(ಎಂ) ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ರೈತರ ವಿರುದ್ಧವಾದ ಸರ್ಕಾರದ ನಡೆಯನ್ನು ಖಂಡಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು, ಸರಕಾರದ ರೈತ ವಿರೋಧಿ ಸಂವಿಧಾನದ ಹಕ್ಕುಗಳ ವಿರೋಧಿ, ಭೂ ಸ್ವಾಧೀನ ನೀತಿಗಳನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದೆAದು ಸಿ.ಪಿ.ಐ(ಎಂ) ಒತ್ತಾಯಿಸಿದೆ ಎಂದರು. ರೈತ ಹೋರಾಟಗಾರರು, ಸಿ.ಪಿ.ಐ.ಎಂ. ಪಕ್ಷದ ಹಲವಾರು ಮುಖಂಡರುಗಳು ಮತ್ತು ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇತರ ಸಂಘಟನೆಗಳ ಮುಖಂಡರನ್ನು ಕಾರ್ಯಕರ್ತರನ್ನೂ ಬಂಧಿಸಿದ ನಡೆಯನ್ನು ವಿರೋಧಿಸಿ ಬಂಧನ ಮಾಡಿದವರನ್ನು ಬಿಡುಗಡೆ ಮಾಡಿ, ಕೇಸ್ ವಾಪಸ್ ಪಡೆದುಕೊಂಡು ಮತ್ತೆ ರೈತರ ಭೂಮಿಯನ್ನು ಭೂ ಸ್ವಾಧೀನ ಮಾಡಬಾರದು ಎಂದು ಜೂನ್-೨೬ ಗುರುವಾರ ಗಂಗಾವತಿ ತಾಲೂಕ ಸಿ.ಪಿ.ಐ.ಎಂ. ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಬಸವರಾಜ ಮರಕುಂಬಿ, ಸಿ.ಐ.ಟಿ.ಯು ಗಂಗಾವತಿ ತಾಲೂಕ ಕಾರ್ಯದರ್ಶಿ ಮಂಜುನಾಥ  ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!