ಜೂ.28 ರಂದು ಸಿರಿ ಸಿಂಗಾರಿ ಯಕ್ಷಗಾನ ಪ್ರದರ್ಶನ

ಕೊಪ್ಪಳ: ಕರಾವಳಿ ಬಳಗ ಕೊಪ್ಪಳ,ಸಿದ್ದಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಮೇಳ ಇವರ ವತಿಯಿಂದ ಸಿರಿ ಸಿಂಗಾರಿ ಯಕ್ಷಗಾನ ಪ್ರದರ್ಶನ ದಿ.28-06-2025 ರಂದು ಶನಿವಾರ ಸಂಜೆ 6 ಗಂಟೆಗೆ ನಗರದ ಸಾಹಿತ್ಯ ಭವನ ಜರುಗುವುದು.
ಉದ್ಘಾಟನೆಯನ್ನು ಸಂಸದ ಕೆ.ರಾಜಶೇಖರ ಹಿಟ್ನಾಳ ನೇರವೇರಿಸುವರು.ಅಧ್ಯಕ್ಷತೆಯನ್ನು ಕೆ.ರಾಘವೇಂದ್ರ ಹಿಟ್ನಾಳ ವಹಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರ ಪ್ರಾಧಿಕಾರ ಅಧ್ಯಕ್ಷ ಕೆ.ಶ್ರೀನಿವಾಸ ಗುಪ್ತಾ,
ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಕರಾವಳಿ ಬಳಗದ ಗೌರವ ಅಧ್ಯಕ್ಷ
ಜೀವನ ಶೆಟ್ಟಿ, ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಸಂಚಾಲಕ ರಂಜಿತ ಶೆಟ್ಟಿ ವಕ್ವಾಡಿ ಪಾಲ್ಗೊಳ್ಳುವರು ಎಂದು ಕೊಪ್ಪಳ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ್ ಶೆಟ್ಟಿ ತಿಳಿಸಿದ್ದಾರೆ.
Comments are closed.