ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ

Get real time updates directly on you device, subscribe now.

ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ರಕ್ತ ಕೇಂದ್ರ, ಕೊಪ್ಪಳ ಮತ್ತು ಎನ್.ಎಎಸ್.ಎಸ್ ಘಟಕಗಳು ಮತ್ತು ರೆಡ್‌ರಿಬ್ಬನ್ ಕ್ಲಬ್ ಹಾಗೂ ಗೋಪಿ ರಕ್ತ ನಿಧಿ ಕೇಂದ್ರ ಕೊಪ್ಪಳ ಇವರ ಸಹಯೋಗದಲ್ಲಿ ಜೂನ್ 23 ರಂದು ಕಾರ್ಯಕ್ರಮವನ್ನು ನಗರದ ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶಶಿಧರ.ಎ, ಡ್ಯಾಪ್ಕೋದ ಜಿಲ್ಲಾ ಮೇಲ್ವಿಚಾರಕರಾದ ಮಾಲತೇಶ ಸಜ್ಜನರ,  ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಉಪ ಪ್ರಾಂಶುಪಾಲರಾದ ಡಾ.ಸುರೇಶ ಹಕ್ಕಂಡಿ, ಎನ್.ಎಸ್.ಎಸ್ ಘಟಕದ ಸಂಯೋಜಕರಾದ ಡಾ.ಎಸ್.ಎಸ್.ಶಿರೂರಮಠ, ಮೇಲ್ವಿಚಾರಕರಾದ ಡಾ.ಗವಿಸಿದ್ದನಗೌಡ ಜಿ. ಪಾಟೀಲ, ರೆಡ್‌ಕ್ರಾಸ್ ಯುವ ಘಟಕದ ಡಾ.ಪರಮೇಶ್ವರ ಹಿರೇಮಠ, ಡಾ ಅಕ್ಷತಾ  ಆಸ್ಪತ್ರೆಯ ಅಧೀಕ್ಷಕರಾದ ರಂಜನ್, ಡಾ.ರಾಹುಲ್, ಡಾ. ನಿತಿನ್ ಕೊಪ್ಪಳ ರೆಡ್‌ಕ್ರಾಸ್ ಸೊಸೈಟಿಯ ಪಿ.ಆರ್.ಒ ದೇವೆಂದ್ರಪ್ಪ,  ಚೈತನ್ಯ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿಗಳಾದ ಶರಣಪ್ಪ, ಮಂಜುನಾಥ, ಅಂಬಣ್ಣ, ಡ್ಯಾಪ್ಕೋ ಸಿಬ್ಬಂದಿಗಳಾದ ಮಲ್ಲಿಕಾರ್ಜುನ್  ಹಾಗೂ ಮಹಾವಿದ್ಯಾಲಯದ ಪಿ.ಜಿ ಹಾಗೂ ಯು.ಜಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಇದೇ ಸಂದರ್ಭ ಸ್ವಯಂ ಪ್ರೇರಿತ ರಕ್ತ ದಾನದ ಶಿಬಿರದಲ್ಲಿ ಪ್ರೊಫೆಸರ್‌ಗಳು ಮತ್ತು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 40 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಜಿಲ್ಲೆಯಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದ 10 ರಕ್ತದಾನಿಗಳನ್ನು ಸನ್ಮಾನಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!