ಇಟಗಿ ಆದರ್ಶ ವಿದ್ಯಾಲಯ: ಉಳಿಕೆ ಸೀಟುಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ
: ಕುಕನೂರು ತಾಲ್ಲೂಕಿನ ಇಟಗಿ ಆದರ್ಶ ವಿದ್ಯಾಲಯ ಶಾಲೆಯಲ್ಲಿ 2025-26ನೇ ಸಾಲಿನಲ್ಲಿ 7, 8 ಹಾಗೂ 9ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳ ಭರ್ತಿಗಾಗಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.ಶಾಲೆಯ 7ನೇ ತರಗತಿಯಲ್ಲಿ 12 ಸೀಟುಗಳು, 8ನೇ ತರಗತಿಯಲ್ಲಿ 11 ಸೀಟುಗಳು ಹಾಗೂ 9ನೇ ತರಗತಿಯಲ್ಲಿ 03 ಸೀಟುಗಳು ಖಾಲಿ ಇರುತ್ತವೆ. ಖಾಲಿ ಇರುವ ಸೀಟುಗಳನ್ನು ಸಂಬAಧಿಸಿದ ಖಾಲಿ ಸೀಟಿನ ಮೀಸಲಾತಿಯನ್ವಯ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಬೇಕಾಗಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪರೀಕ್ಷೆಯು ವಸ್ತುನಿಷ್ಠ ಮಾದರಿಯ 100 ಅಂಕಗಳಿಗೆ ನಡೆಯುತ್ತದೆ. ಅರ್ಜಿಗಳನ್ನು ಶಾಲೆಯಿಂದ ಪಡೆದು ಭರ್ತಿ ಮಾಡಿ ಜುಲೈ 07 ರೊಳಗೆ ಸಲ್ಲಿಸಬೇಕು. ಜುಲೈ 13 ರಂದು ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 01 ಗಂಟೆಯವರೆಗೆ ಯಲಬುರ್ಗಾದ ಸರಕಾರಿ ಪದವಿ ಪೂರ್ವ ಕಾಲೇಜ್ (ಪ್ರೌ.ಶಾ) ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಮುಖ್ಯೋಪಾಧ್ಯಾಯರು, ಆದರ್ಶ ವಿದ್ಯಾಲಯ ಇಟಗಿ, ದೂ.ಸಂ. 9945420957, 8494858187 ಗೆ ಸಂಪರ್ಕಿಸಬಹುದು ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮುಖ್ಯೋಪಾಧ್ಯಾಯರು, ಆದರ್ಶ ವಿದ್ಯಾಲಯ ಇಟಗಿ, ದೂ.ಸಂ. 9945420957, 8494858187 ಗೆ ಸಂಪರ್ಕಿಸಬಹುದು ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.