ಮಮ್ಮಾರವರ ಆದರ್ಶಗಳನ್ನು ಅನುಸರಿಸೋಣ —ಬ್ರ.ಕು.ರೇಖಾ ಅಕ್ಕಾ

Get real time updates directly on you device, subscribe now.

ಯಲಬುರ್ಗಾ— ಎಲ್ಲರ ಮನೋ ಕಾಮನೆಗಳನ್ನು ಈಡೇರಿಸುವ ಮಮ್ಮಾರವರ ಆದರ್ಶವನ್ನು ನಾವೇಲ್ಲರು ಅನುಸರಿಸೋಣವೆಂದು ಗದುಗಿನ ಬ್ರ.ಕು. ರೇಖಾ ಅಕ್ಕರವರು ಹೇಳಿದರು.
ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದಲ್ಲಿ ರಾಜಯೋಗಿನಿ ಜಗದಂಭಾ ಸರಸ್ವತಿ (ಮಮ್ಮಾ) ಸ್ಮ್ರತಿ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಮಮ್ಮಾರವರು 14 ನೇ ವರುಷದಲ್ಲಿ ಬಾಬಾನ ಮಗುವಾಗಿದ್ದಳು .
ನಾವು ಜೀವಿಸುವ ಘಳಿಗೆ ಅಂತಿಮ ಘಳಿಗೆ ಎಂದು ತಿಳಿದಾಗ ಪ್ರತಿಯೊಂದು ಕ್ಷಣವನ್ನು ಸಾರ್ಥಕ ಪಡಿಸಿಕೊಳ್ಳಬಹುದು. ಒಂದು ಸಲ ತಪ್ಪು ಮಾಡಿದರೆ ಮತ್ತೆ ಇಡೀ ಜೀವಮಾನದಲ್ಲಿ ತಪ್ಪುಗಳನ್ನು ಮಾಡದೇ ಜೀವನವನ್ನು ಸುಮಧುರವಾಗಿ ಮಾಡಿಕೊಂಡ ಏಕೈಕವ್ಯಕ್ತಿ ಅಂದರೆ ಅದು ಮಮ್ಮಾ ಎಂದರು. ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಸಮರ್ಥವಾಗಿ ಜೀವನು ಸಾಗಿಸಿದವರು. ಮಮ್ಮಾರವರ ಆದರ್ಶ ಹಾಗೂ ನಡಾಳಿಕೆಯನ್ನೂ ನಾವು ರೂಢಿಸಿಕೊಂಡಾಗ ಅವರ ಆತ್ಮಕ್ಕೆ ನಿಜವಾದ ಶಾಂತಿ ದೊರಕುತ್ತದೆ ಎಂದರು. ಪವಿತ್ರತೆಯನ್ನು ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.
ಕಪ್ಪತಗುಡ್ಡದ ಯೋಗ ಗುರುಮಾತೆ ಓಂಕಾರೇಶ್ವರಿ ˌ ನಿ. ಶಿಕ್ಷಕ ಇ . ಈಶ್ವರಪ್ಪˌ ಬಸವರಾಜ ˌ ರವಿ ಸಂಶಿ ˌ ಫ್ರೊ. ಎ.ಬಿ.ಕೆಂಚರಡ್ಡಿ ˌ ಸಿದ್ದಯ್ಯ ಕೊಣ್ಣೂರುˌ ಬಸನಗೌಡ ಪಾಟೀಲ ˌ ವೀರಯ್ಯ ಶಿವಪ್ಪಯ್ಯನಮಠ ˌ ದೊಡ್ಡಬಸಪ್ಪ ಹಕಾರಿ ˌಶರಣಬಸಪ್ಪ ದಾನಕೈˌ ವೀರಣ್ಣ ನಿಂಗೋಜಿ ˌ ನಿಂಗಪ್ಪ ಯರಾಶಿ ˌ ಚಂದ್ರು ಮಸಬಹಂಚಿನಾಳ ˌ ಮುತ್ತಯ್ಯ ಮಲಕಸಮುದ್ರ ˌ ಇನ್ನೀತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಗೆ ನೂರಾರು ಜನ ಅಕ್ಕಂದಿರು ಹಾಗೂ ಅಣ್ಣಂದಿರು ಬ್ರಹ್ಮ ಭೋಜನವನ್ನು ಸವಿದರು.
ಸ್ಥಳೀಯ ಬ್ರ.ಕು. ಗೀತಕ್ಕ ಸ್ವಾಗತಿಸಿ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!