ಲಯನ್ಸ್ ಕ್ಲಬ್ ಸಾಮಾಜಿಕ ಸೇವೆ ಶ್ರದ್ಧೆಯಿಂದ ಮುಂದುವರೆಸುವೆ: ಡಾ.ಶಿವುಕುಮಾರ್

Get real time updates directly on you device, subscribe now.

ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

 

ಗಂಗಾವತಿ: ಶೂನ್ಯದಿಂದ ಆರಂಭವಾದ ನನ್ನ ಜೀವನ ಇವತ್ತು ನಾಲ್ಕಾರು ಸೇವಾ ಕಾರ್ಯಗಳಲ್ಲಿ ಭಾಗವಹಿಸುವಂತೆ ಗಂಗಾವತಿಯು ನನಗೆ ಎಲ್ಲವನ್ನು ಕೊಟ್ಟಿದೆ ಅದಕ್ಕೆ ಇಲ್ಲಿನ ಜನರಿಗೆ ನನ್ನ ಕೈಲಾದ ಸಹಕಾರ ನೀಡುವ ಹೆಬ್ಬಯಕೆ ನನ್ನದಾಗಿದ್ದು, ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಥಾನದ ಮೂಲಕ ಎಲ್ಲರ ಒಳಗೊಳ್ಳುವಿಕೆಯೊಂದಿಗೆ ಅತ್ಯಂತ ಶ್ರದ್ಧೆಯಿಂದ ಸೇವೆ ಸಲ್ಲಿಸುವೆ ಎಂದು ಗಂಗಾವತಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಡಾ.ಶಿವುಕುಮಾರ್ ಮಾಲಿಪಾಟೀಲ್ ಹೇಳಿದರು.

ಅವರು ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಆಯೋಜಿಸಿದ್ದ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಪದಗ್ರಹ ಸಮಾರಂಭದಲ್ಲಿ ಅಧ್ಯಕ್ಷೀಯ ಪದಗ್ರಹಣ ಸ್ವೀಕರಿಸಿ ಮಾತನಾಡಿದರು.

ಲಯನ್ಸ್ ಕ್ಲಬ್ ಅತ್ಯಂತ ಪ್ರತಿಷ್ಥಿತ ಸಂಸ್ಥೆಯಾಗಿದ್ದು ಅದರ ಸೇವಾ ಕ್ಷೇತ್ರವನ್ನು ವಿಸ್ತರಿಸುವೆ, ಸಾರ್ವಜನಿಕರಿಗಾಗಿ ಕಟ್ಟಲಾಗುತ್ತಿರುವ ಆಸ್ಪತ್ರೆಗೆ ಅಗತ್ಯ ದೇಣಿಗೆ ಸಂಗ್ರಹಿಸಿ ಆಸ್ಪತ್ರೆ ಕಟ್ಡಡ ಪೂರ್ಣಗೊಳಿಸಲುನ ಯತ್ನಿಸುವೆ, ಇನ್ನುಳಿದಂತೆ ಆರೋಗ್ಯ ತಪಾಸಣೆ ಇತ್ಯಾದಿ ಉಚಿತ ಶಿಬಿರಗಳ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕ್ಲಬ್‌ನ ನೂತನ ಕಾರ್ಯದರ್ಶಿ ಜಂಬಣ್ಣ ಐಲಿ, ಖಜಾಂಚಿ ಶಿವಪ್ಪ ಗಾಳಿ, ಸುದೇಶ್ ಬಾಕೇರ್, ಡಾ. ಮಧವಶೆಟ್ಟಿ, ಗವಿಸಿದ್ದಪ್ಪ, ಸುಬ್ರಮಣ್ಣೇಶ್ವರ್‌ರಾವ್, ರಾಘವೇಂದ್ರ ಸಿರಿಗೇರಿ, ಪ್ರಶಾಂತ್ ರೆಡ್ಡಿ, ಹಿರಿಯ ವೈದ್ಯರು ಇದ್ದರು.

Get real time updates directly on you device, subscribe now.

Comments are closed.

error: Content is protected !!